ಶುಕ್ರವಾರ, ಸೆಪ್ಟೆಂಬರ್ 2, 2022

ಗಣಾಧೀಶ (ಕವಿತೆ) - ಶಿವಾ ಮದಭಾಂವಿ

ಹಾಡಿರೇ ಗಣಪನ ಭಜಿಸಿರೆ ಗಣಪನ 
ಕಡುಬು ಮೋದಕ ಪ್ರಿಯ ಗೌರಿಸುತನ
ಸಡಗರ-ಸಂಭ್ರಮದ ಸರದಾರನ
ಭಜಿಸಿರೆ ಹುಲ್ಲು ಗರಿಕೆಯ ಪ್ರಿಯನ

ಮೂಶಿಕವಾಹನವ ಏರಿ ಬರುವ ಚತುರನ
ಭಜಿಸಿರೆ ಹಾಡಿರೇ ಗಜಮುಖನ 
ಸಂಕಷ್ಟ ನಿವಾರಿಸುವ ವಿಘ್ನ ವಿನಾಶಕನ
ಭಜಿಸಿರೆನ್ನ ಮುಕ್ಕಣ್ಣನ ಪ್ರಿಯಸುತನ

ತಾಯಿಯಾಜ್ಞೆಗೆ ತಂದೆಯ ತಡೆದ ಆಜ್ಞಾಪಾಲಕನ
ಭಜಿಸಿರೆ ಗಣೇಶನ ಪ್ರಥಮಪೂಜಿತನ
ರಾವಣನ ಗರ್ವ ಮುರಿದ ಗಣಾಧೀಶನ
ಭಜಿಸಿರೆ ಸಿದ್ದಿಪ್ರದಾಯಕ ವಿಘ್ನೇಶನ

ಷಣ್ಮುಖನ ಲೋಕ ಸುತ್ತಿಸಿದ ಜಾಣನಾ
ಭಜಿಸಿರೆ ಭಜಿಸಿರೆ ಶಿವಗೌರಿತನಯನ
ತಂದೆ ತಾಯಿಯಲ್ಲಿ ಲೋಕವ ಕಾಣೆಂದು ತಿಳಿಸಿದ
ಗಣನಾಥನ ಪಾಡಿ ಭಜಿಸಿರೆ ಎಲ್ಲಾ

- ಶಿವಾ ಮದಭಾಂವಿ.
ಗೋಕಾಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...