ಶುಕ್ರವಾರ, ಸೆಪ್ಟೆಂಬರ್ 2, 2022

ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ (ಕವಿತೆ) - ಶಾಂತಾರಾಮ ಶಿರಸಿ.

ಶ್ರೀಕೃಷ್ಣ ಜಗದೋದ್ಧಾರಕ, 
ಮುದ್ದು ಕೃಷ್ಣ ಪ್ರೀತಿಯ ದ್ಯೋತಕ,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ... 

ಶ್ರೀ ಕೃಷ್ಣ ಯದುನಂದನ,
ಮನಮೋಹನ ನೀ ರಾಧಾಜೀವನ, 
ಅತಿ ಮಧುರ ಸ್ವರ ಕೊಳಲುವಾದನ,
ಕೃಷ್ಣ-ಸುಧಾಮ ಬಿಡಿಸದ ಸ್ನೇಹ ಬಂಧನ,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ...

ನವಿಲು ಗರಿಯು ಬಲು ಚಂದವು, 
ಮನಕೆ ಮುದವು ಕೊಳಲ ನಾದವು,
ಕಾಯಕ ನನ್ನದು ನಿನ್ನದೆ ಫಲವು,
ನಿನ್ನ ಜಪಿಸುವ ನಾಮವು ಹಲವು,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ...

ಜಗದೊಡೆಯನು ನೀನು,
ಸಕಲರೂ ಸಲಹುವ ಭಕ್ತಜನಪರಿಪಾಲಕ ನೀನು,
ನಿನ್ನ ನಾಮ ಜಪಿಸುವ ಭಕ್ತನು ನಾನು- ಕಷ್ಟದಿ  ಕಾಯುವ ಪ್ರಭು ನೀನು,
ದೇವನು ನೀನು ನಿತ್ಯ ಕರಮುಗಿದು ಆರಾಧಿಸುತಿಹೆನು ನಿನ್ನನು,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ...

- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...