ಶುಕ್ರವಾರ, ಸೆಪ್ಟೆಂಬರ್ 2, 2022

ಕಣ್ಣೀರಿನ ಆತ್ಮೀಯತೆ (ಕವಿತೆ) - ರಾಕೇಶ್ ಡಿ ವೀರಾಪುರ.

ಮನೆಯೆಂಬ ಮನದೊಳಗೆ ಮಾಡಿದ ಬಂಧ 
ಇಂದಿಗೂ ಅಳಿಯದೆ ಉಳಿದಿಹ ಅನುಬಂಧ
ಇರುವೆ ನೀ ಕಷ್ಟಸುಖದಲಿ ಭಾಗಿಯಾಗಿ ಗೆಳೆಯ
ಬೇಡುವೆ ನಿನ್ನ ಕೊನೆವರೆಗು ನನ್ನ ಜೊತೆಗಿರುವೆಯ

ನೀನಿದ್ದರೆ ಎನ್ನಯ ಜೊತೆಯಲಿ ಬೆನ್ನೆಲುಬಾಗಿ
ಎದುರಿಸಿ ನಿಲ್ಲುವೆ ಬರುವ ಕಷ್ಟಗಳ ಧೈರ್ಯವಾಗಿ
 ಸಾಗುವೆನು ನೀ ನೀಡುವ ಸಲಹೆಯ ಹಾದಿಯಾಗಿ
ಬಾಳೆನು ಗೆಳೆಯಾ ನಿನ್ನೆಯ ಪ್ರೀತಿಯ ಹೊರತಾಗಿ
 
 ನನ್ನಯ ಬದುಕಲಿ ಬೆಳಕಾಗಿ ಬಂದೆಯ ಜೊತೆ
ಕೊಡುತ್ತಿರುವೆ ನಿನಗಿಂದು ಕಣ್ಣೀರಿನ ಆತ್ಮೀಯತೆ
ಬರೆದರೂ ಪದಸಾಲದ ನಿನ್ನ ಮನದ ವೈಶಾಲ್ಯತೆ
ನಿನಗಾಗಿ ಎಷ್ಟು ಬರೆದರೂ ಸಾಲದು ನಾ ಕವಿತೆ

ಹೃದಯದಿಂದ ಕೋರುವೆ ನಿನಗೆ ವಿಶೇಷ ನಮನ
ಹೀಗೆ ಸಾಗಲಿ ನಿಮ್ಮಿಬ್ಬರ ಗೆಳೆತನದ ಪ್ರಯಾಣ
ಆದರ್ಶವಾಗಿಹುದು ನನಗೆ ನಿನ್ನಲ್ಲಿನ ಒಳ್ಳತನ 
ಸ್ನೇಹಿಯೆ ತುಂಬು ಮನದಿ ಹರಸುವೆನು ನಿನ್ನನಾ.

- ರಾಕೇಶ್ ಡಿ ವೀರಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...