ಹೌದು ನಾನು ಪರಿಪೂರ್ಣನೆ ಎನ್ನುವ ಪ್ರೆಶ್ನೆ ತಲೆಯೊಳಗೆ ಬಂದಿದೆ ತಡ ಯೋಚಿಸುತ್ತಾ ಕುಳಿತವನಿಗೆ ಅನ್ನಿಸಿದ್ದು ಇಷ್ಟೇ, ಯಾವ ವಿಷಯದಲ್ಲಿ ಪರಿಪೂರ್ಣತೆ ಹೊಂದಬೇಕು, ಬದುಕಿನಲ್ಲಿ ಹೊಳಿಯಬೇಕಾ ? ಅಥವಾ ಹೋಳಿಯುತ್ತಿರುವರ ಬದುಕ ನೋಡಿ ಹರ್ಷ ಪಡಬೇಕಾ ? ಇಲ್ಲ ಸುಂದರವಾದ ಆಸೆಗಳಲ್ಲಿ ಬಂದಿಯಾಗಿ ಮುಂದೆ ಸಾಗ್ಬೇಕಾ ? ಯಾವುದನ್ನ ಜೀವನದಲಿ ಅಳವಡಿಸಿಕೊಳ್ಳಬೇಕು, ಎನ್ನುವ ಆಲೋಚನೆ ಏನೂ ಮಹತ್ತರವಾಗಿತ್ತು ಇವೆಲ್ಲವನ್ನ ಮೇಲಕ್ಕಾಗುತ್ತ ನಡೆದಾಗಲೇ ಅನ್ನಿಸಿದಿಷ್ಟೇ, ಇಲ್ಲಿ ವಾಸ್ಥವತೆಗೆ ಹೋಲಿಸಿದಾಗ ನಾನು ಸ್ವಾರ್ಥಿಯಾಗಿಬಿಡುತ್ತೇನೆ ನನ್ನೊಳಗಿನ ಕೆಲವಿಷಯಗಳಿಂದ ಅದು ಬದುಕಿನೊಳು ಜೀವನ ನಡೆಸಲು ಉಸಿರಾಡುವುದಕ್ಕೆ ಏನ್ ಉಪಯುಕ್ತವೋ ಅದನ್ನೆ ಪಡುಯುವುದರಲ್ಲಿ ನಾನು ಸ್ವಾರ್ಥಿಯಾಗಿದ್ದೇನೆ.
ಇನ್ನು ಕೆಲವೊಂದಿಷ್ಟು ಜೊತೆಗಿರುವ ಸ್ವಾರ್ಥ ಎಂತಹದ್ದು ಎಂದು ಗಮನಿಸುತ್ತಾ ಮುನ್ನಡೆದಾಗ, ಊರಲ್ಲೇ ಇದ್ದು ಮಾರುದ್ದ ಅಂತರದಲ್ಲೇ ದಿನನಿತ್ಯ ತಿರಿಗಾಡಿದ್ರು ಆತ ಹಿಂತಿರುಗಿ ಕ್ಷಣವಾದರೂ ನೋಡದೆ ಉಳಿದುಬಿಟ್ಟಿರುತ್ತಾನೆ ಆತನಿಗೆ ಆ ಕ್ಷಣ ನಾವು ಉಪಯುಕ್ತರಾಗಿರುವುದಿಲ್ಲ. ಯಾವ ನಮ್ಮಿಂದ ಉಪಯೋಗವಿದೆಯೆಂದು ತಿಳಿಯುತ್ತೋ ಆವಾಗ್ಲೇ ಆತ ದಿನೇದಿನೇ ಹತ್ತಿರವಾಗಲು ಶುರುಮಾಡಿಯೇ ಬಿಡುತ್ತಾನೆ, ಯಾವಾಗ್ ಆತ ನಮ್ಮೊಡನೆ ಬೆರೆಯಲು ಪ್ರಾರಂಬಿಸಿದ್ನೋ ಆವಾಗ್ ಆತನ ಸ್ವಾರ್ಥ ಕೆಲಸಮಾಡಲು ಶುರುಮಾಡಿಯೇಬಿಡುತ್ತೆ.ಸೂಕ್ಷ್ಮವಾಗಿ ಗಮಿಸಿದಾಗ ಇದು ಅರಿವಿಗೆ ಬರುತ್ತೆ ವಿನಃ ಅದು ಅಷ್ಟ್ ಬೇಗ ತಿಳಿಯುವಂತಹದಲ್ಲ. ಈ ಸ್ವಾರ್ಥ ಇದಿಯಲ್ಲ ತಿನ್ನೋ ತಟ್ಟೆಯಲ್ಲಿ ಮಣ್ಣ್ ಎರಚಿ ನಗಾಡುವಂತವರೇ.
ಹುಷಾರು..... !
ಇದೇನಪ್ಪ ನಾನ್ ಪರಿಪೂರ್ಣನೆ ಅಂತ ಶೀರ್ಷಿಕೆ ತಗೊಂಡ್ ಏನ್ ಏನೋ ಹೇಳ್ತಿದಾನೆ ಅಂತ ತಲೆಯೊಳಗೆ ಯೋಚನೆ ಬಂದಿರಬವುದು, ಅದು ಬರೋದು ಸಹ ಸಹಜನೆ.
ಯಾವಾಗ ಮತ್ತೊಬ್ಬನನ್ನ ತುಳೀಬೇಕು,ಆತನ ಮನೆಯ ಹೆಣ್ಣುಮಕ್ಕಳನ್ನ ಕೆಟ್ಟದೃಷ್ಟಿಯಿಂದ ನೋಡ್ಬೇಕು, ಆತನ ಹೆಜ್ಜೆ ಹೆಜ್ಜೆಗೂ ತಪ್ಪಿನೊಳಗೆ ದೂಡಬೇಕು, ಆತನ ಮಣ್ಣಿನ ಮೇಲೆ ಕುಳಿತು ದುಡ್ಡು ಹೆಣ್ಣಿಸಬೇಕು ಎಂದು ಯಾವೊಬ್ಬ ವ್ಯಕ್ತಿಯು ಇಂತ ಹೀನಾಯವಾದ ಆಲೋಚನೆಗಳಲ್ಲಿ ಸಮಾಜದಲ್ಲಿ ನಂಬಿಸಿ ಹೊಳೆಯಲು ಯತ್ನಿಸಿದಾಗ ಆತನೇ #ಅಪರಿಪೂರ್ಣ_ವ್ಯಕ್ತಿ. !
ಪರಿಪೂರ್ಣ ನೆಂದರೆ ಯಾರು ?
ಪರಿಪೂರ್ಣತೆ ಯನ್ನು ಜೀವನದಲಿ ಪಡೀಬೇಕು ಅನ್ನುವ ವ್ಯಕ್ತಿ ಆಸೆ, ಕಾಮ, ಕ್ರೋದ, ಮದ, ಮತ್ಸರ್ಯ, ಲೋಭ, ಮೋಹ, ಇವುಗಳನೆಲ್ಲವನ್ನ ಬಂದಿಖಾನೆಯಲ್ಲಿ ಬಂಧಿಸಿ ಲೋಕಕ್ಕೆ ಬೆಳಕಾಗಿ ಮಾನವಕುಲಕ್ಕೆ ಮಾದರಿಯಾಗಿ, ಸಾಧುಸಂತರಿಗೆ ನಮಿಸಿ, ಒಂದು ಹೆಣ್ಣಿಗೆ ದೈವಿತೆಯ ದೃಷ್ಠಿಯಿಂದ ನೋಡಿ, ಸನ್ಮಾರ್ಗದಲ್ಲಿ ಸಾಗಿ, ಹೆಜ್ಜೆ ಹೆಜ್ಜೆಗೂ ಪ್ರತಿ ಕಣಕ್ಕೂ ಒಳಿತನ್ನ ಬಯಸುವ ಜ್ಞಾನಿಯೇ ಪರಿಪೂರ್ಣ ನು ಈ ಕಲಿಯುಗದಲ್ಲಿ ಎನ್ನುವುದು ನನ್ನ ಮಾತು ಮತ್ತು ನನ್ನೊಳಗಿನ ಅಂತರಾಳದ ಅನಿಸಿಕೆ.
ತರ್ಕ ಮತ್ತು ಪ್ರೆಶ್ನೆ ಇವೆರೆಡು ಬಂದೆ ಬರುತ್ತೆ.
ಒಂದೊಳ್ಳೆ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಲು ಮುನ್ನಡೆದಾಗ, ಸಾವಿರಾರು ಪ್ರೆಶ್ನೆಗಳಿಗೆ ಉತ್ತರ ನೀಡುತ್ತಲೇ ನಡೆದಾಗ ಮೂರ್ಖರ ಮಾತು ಮೌನವಾಗಿ ಬದಲಾಗುತ್ತೆ ವಿನಃ ಅವರೊಂದಿಗೆ ಅವರಂತೆಯೇ ನಟಿಸುವುದರಿಂದಲ್ಲ.
ಇಲ್ಲಿ ಬೇಕಿರೋದು ಇವತ್ತಿನ ಸಮಾಜೆಕ್ಕೆ ಕೇವಲ ಸದ್ಯದ ಖುಷಿ ಮತ್ತು ಸದ್ಯದ ಸುಖಗಳು ಹೊರೆತು, ಮುಂದಿನ ದಿನಗಳಲ್ಲಿ ನಾವು ಬದುಕಲು ಏನನ್ನ ನಿರ್ಧರಿಸಿಕೊಳ್ಳಬೇಕು ಅನ್ನೋ ಆಲೋಚನೆ ಕೆಲವೊಂದಿಷ್ಟು ಮನಸುಗಳಿಗೆ ಬೇಡವಾದ ವಿಚಾರವಾಗಿದೆ.
ಬದುಕೇನು ಅದೇಗೋ ಮುನ್ನಡೆಯುತ್ತೆ ಆಗಂತ ತಿಪ್ಪೆಯಲ್ಲಿ ಹೇಸಿಗೆತಿಂದು ಬದುಕುವ ಜೀವಗಳಂತೆ ಬದುಕಿದರೆ ಅವಕ್ಕೂ ನಮಗೂ ಏನೂ ಸಂಬಂಧ, ಅಲ್ವೇ ?
ಮನಸು ಬದಲಾದರೆ ಪರಿಸ್ಥಿತಿ ಬದಲಾದೀತು,ಪರಸ್ಥಿತಿ ಬದಲಾದರೆ ಬದುಕು ಬದಲಾದೀತು, ಈ ಬದುಕು ಬದಲಾದರೆ ಭವ್ಯವಾದ ದೇಗುಲದಂತ ಈ ನಾಡು ಬದಲಾದೀತು, ನಾಡಿನೊಳಗಿರುವ ಅದೆಷ್ಟೋ ಮನಗಳು ನಿನ್ನೊಳಗಿನ ವ್ಯಕ್ತಿತ್ವ ರೂಪಿಸಿಕೊಂಡಾಗಲೇ ನೀನು ಪರಿಪೂರ್ಣನೆಂದು ಈ ಜಗಕ್ಕೆ ಸಾರುವ ದಿನವದು ಎಂದು ಹೇಳಬವುದಲ್ಲವೇ. ?
- ಮಹೇಶ್_ಎಂ_ಗದ್ವಾಲ್.
Arishatvargagala toredare baduku paripurna vendu arta purnavagi heliddiri sir
ಪ್ರತ್ಯುತ್ತರಅಳಿಸಿ