ಏಕದಂತ ಮೊದಲ ಪೂಜಿಪೆ
ಕರವ ಮುಗಿದು ನಿನ್ನಯ ಜಪಿಪೆ
ನೀಡು ವರವ ತರುವ ಬಲವ
ವಿಘ್ನ ಅಳಿಸಿ ಕರುಣೆ ತೋರಿಪೆ
ಬೆನಕ ನಿನಗೆ ಮೊದಕರ್ಪಣೆ
ವಿದ್ಯಪ್ರದಾಯಕ ಭಕ್ತಿ ಸಮರ್ಪಣೆ
ಅಗ್ರಗಣ್ಯನೆ ಮನದಿ ನೆಲೆಸುತ
ಹರಿಸು ಎಮ್ಮನು ಗೌರಿಪುತ್ರನೆ
ಚತುರತೆಯದಿ ಪಡೆದೆ ಆತ್ಮಲಿಂಗವ
ಮಾತೆಯ ಭಾಷೆಗೆ ನೀ ಗೆದ್ದೆ ಜಗವ
ನಕ್ಕ ಚಂದ್ರನಿಗೆ ನೀ ಕೊಟ್ಟ ಶಾಪದಿ
ಪ್ರಾಯಶ್ವಿದಲಿ ಕಳೆಯುತಿಹನು ದಿನವ
ಪೂಜಿಸಿಕೊಂಡು ವಿಷ್ಣುವಿಗೆ ಶಂಖವನಿತ್ತೆ
ಕುಬೇರನ ಅಷ್ಟೈಶ್ವರ್ಯದ ಮದವನಳಿಸಿದೆ
ವ್ಯಾಸರ ಜೊತೆಗೂಡಿ ಮಹಾಕಾವ್ಯ ರಚಿಸುತ
ಅನಂತ ನಾಮದಿ ವಿಖ್ಯಾತನಾದೆ
ಬರುವೆ ನೀನು ಗಣೇಶ ಚತುರ್ಥಿಯಂದು
ಎಲ್ಲರ ಮನೆಮನದ ವಿಘ್ನ ತೊಳೆಯಲೆಂದು
ಲೋಕಮಾನ್ಯ ಟಿಳಕರಿಂದ ಒಗ್ಗುಡಿದೆವಂದು
ಒಂದೇ ಮತದಿ ನಿನ್ನ ಪೂಜಿಪೆವು ಇಂದು.
- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ