ಶುಕ್ರವಾರ, ಸೆಪ್ಟೆಂಬರ್ 2, 2022

ನನ್ನವರು ನೀವೂ ಹೃದಯವಂತರು (ಕವಿತೆ) - ಹೆಚ್.ಹೆಚ್.ಮೈಲಾರಿ.

ಹೇಳಲಾಗದ ಭಾವ
ಮರೆಯಲಾಗದ ಜೀವ
ನೀವೂ
ಮರೆಯಲಾಗದ ಜೀವ

ನಮ್ಮೊಂದಿಗಿರಲು ನೀವು
ಮನ ತುಂಬಿದ ನಗುವು

ಕೂಡಿ ಆಡಿದ ಸಮಯ
ಮಾಸದ ಸ್ಮರಣೀಯ

ಕೋಟಿ ಕೊಟ್ಟರೂ ಸಿಗದು ಈ ಪ್ರೀತಿ
ಯಾರಿಲ್ಲ ನಿಮಗೆ ಸರಿಸಾಟಿ

ನೀವೇ ಸುಂದರ
ನಿಮ್ಮ ನೆನಪುಗಳೇ ಮಧುರ

ಮರೆಯಲಾಗದ ಬಂಧ
ಬಿಡಿಸಲಾಗದ ಅನುಬಂಧ

ಬೀಳ್ಕೊಡುವಾಗ ಮನಸ್ಸಿಗೆ ಕೊಂಚ ಬೇಸರ
ಉಜ್ವಲ ಭವಿಷ್ಯ ನಿಮಗಿದೆ ಮುಂದೆಂಬುದೇ ಸಡಗರ

ನಿಮ್ಮಿಷ್ಟದ ಜೀವನ ನಿಮ್ಮದಾಗಲಿ
ಶುಭವಾಗಲಿ ನಿಮಗೆ ಶುಭವಾಗಲಿ...


- ಹೆಚ್.ಹೆಚ್.ಮೈಲಾರಿ. ( ಪಾಪಚ್ಚಿ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...