ಶುಕ್ರವಾರ, ಸೆಪ್ಟೆಂಬರ್ 2, 2022

ಕಾಲಾಯೇ ತಸ್ಮಯ್ ನಮಃ (ಕವಿತೆ) - ಮಾನಸ. ಎಂ, ಸೊರಬ.

ಸಮಯವ ಕೈಯಲ್ಲಿ ಹಿಡಿದು ಇನ್ನೊಬ್ಬರ ಭಾವನೆಯನ್ನು ಆಟಿಕೆಯ ಹಾಗೇ ಬಳಸಿ ಮೋಸ ಮಾಡಿ ಸಮಯಕ್ಕೆ ತಕ್ಕಂತೆ ಊಸರವಳ್ಳಿಯ ಹಾಗೆ ಬಣ್ಣ ಬದಲಿಸಿ ಸಮಯನ್ನೆ ತನ್ನ  ದಾಳದ ಹಾಗೆ  ಉಪಯೋಗಿಸುವ ಸಮಯವಾದಿ ಅವಕಾಶವಾದಿ.
     
ಸಮಯವನ್ನು  ಸದುಪಯೋಗ ಮಾಡಿಕೊಂಡು
ಒಳ್ಳೆಯ ಮನಸ್ಥಿತಿ ಇಂದ ತನ್ನ ಗುರಿ ಸಾಧಿಸಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ತನ್ನ ಒಳ್ಳೆಯ ಕೆಲಸಕ್ಕೆ ದಾರಿಯನ್ನು ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಸಮಯನ್ನು ಬಳಸಿಕೊಳ್ಳುವುದು ಕೂಡ ಅವಕಾಶವಾದಿ
     
ಸಮಯ ಎಲ್ಲದಕ್ಕೂ ಉತ್ತರ ಅಲ್ವಾ
ಒಬ್ಬರನ್ನ ಕೆಟ್ಟೋರು ಮಾಡೋದು ಸಮಯ ಒಳ್ಳೆಯವರನ್ನು ಮಾಡೋದು ಸಮಯ.
ಸಿಗುವ ಅವಕಾಶ ಒಳ್ಳೆಯದಕ್ಕೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡರೆ ಅದು ನಿಜಕ್ಕೂ  ಒಳ್ಳೆಯದೆ .
ಕಾಲಾಯೇ ತಸ್ಮಯ್ ನಮಃ 

       - ಮಾನಸ. ಎಂ, ಸೊರಬ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...