ಗುರುವಾರ, ಅಕ್ಟೋಬರ್ 13, 2022

ನೆನಪುಗಳ ಜಾತ್ರೆ (ಭಾವಗೀತೆ) - ಮಧುಮಾಲತಿ ರುದ್ರೇಶ್.

ಕಳೆದು ಹೋಗಿರುವೆ ನಿನ್ನ ನೆನಪುಗಳ ಜಾತ್ರೆಯಲಿ
 ಗೆಳೆಯ ನೀ ಬಂದು ಸಹಕರಿಸು ಈ ಒಲವ ಯಾತ್ರೆಯಲಿ

 ಬಂದೊಮ್ಮೆ ಸೇರಿಬಿಡು ನನ್ನೊಲವ ನಿಲ್ದಾಣಕೆ
 ಸುರಿಸು ಪ್ರೀತಿಯ ತುಂತುರು ಹನಿಯ ಈ ಮನಕೆ

 ಒಲವಿಂದ ನೀನೊಮ್ಮೆ ಕಣ್ತೆರೆದು ನೋಡು ಇನಿಯ
 ಜಗವೇ ಪ್ರೇಮಲೋಕದ ಗೂಡು ನೀ ಕಾಣೆಯ

 ನಿನ್ನೆದೆಯ ಬಂಧೀಖಾನೆಯ ಪ್ರೇಮ ಕೈದಿ ನಾನು
 ಸವಿನುಡಿಯ ಸರಳುಗಳ ಹಿಂದೆ ಸುಖಿಯಾಗಿಹೆನು

 ಸವಿದಷ್ಟು ಸಿಹಿಯೆನಿಸುವ ಕಲ್ಲುಸಕ್ಕರೆ ನಿನ್ನ ಪ್ರೀತಿ 
ಭೃಂಗ ಸಖ್ಯದಿ ಸವಿಜೇನಾದ ಪ್ರೀತಿ ಮಧುವ ರೀತಿ

 ಮಳೆ ನಿಂತರೂ ನಿಲ್ಲದ ಮಳೆ ಹನಿಯಂತೆ ನೀನು
 ನೀನಿರೆ ಪ್ರತಿಕ್ಷಣವು ಸವಿದಂತೆ ಹಾಲುಜೇನು 

ಸದ್ದಿಲ್ಲದೆ ಕದ್ದೊಯ್ದಿರುವೆ ನೀ ಎನ್ನ ಮನವ 
ನಿನ್ನ ಹೃದಯದಲೇ ಹುಡುಕಿದೆ ನಾನದರ ವಿಳಾಸವ

 ನಿನ್ನ ನೆನಪಿನ ಜಾತ್ರೆಯಲಿ ಪುಳಕಗೊಂಡಿದೆ ಮನ 
ನಿನ್ನ ಸನಿಹವದು ಪ್ರೇಮ ಸುಮಗಳರಳಿದ ಹೂಬನ

 - ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...