ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!
ಸಾಧನೆ, ಸೇವೆ ಬೇಕಾಗಿಲ್ಲ, ಸಾಹಿತಿ ಆಗಿರಬೇಕೆಂದಿಲ್ಲ.
'ಗೌಡ' ಬೇಕೇ ? ರತ್ನ ಬೇಕೆ ? ಕೇಸರಿ, ಶ್ರೀ, ಮಾಣಿಕ್ಯ ಬೇಕೇ ?
ಸಾಧನೆ ಏನು ಮಾಡದೆ ಇದ್ದರು ಸಾಧಕ ರತ್ನ ಅವಾರ್ಡು ಬೇಕೆ ?
ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!
ಎಲ್ಲರಂತೆ ಅಲ್ಲ ನಾವು. ನಂಬಹುದು ನಮ್ಮನು ನೀವು.
ಹಣವನು ನಾವು ಪಡೆಯುವುದಿಲ್ಲ.
ಮೆಂಬರ್ ಶಿಫಲಿ ಡಿಸ್ಕೌಂಟ್ ಇಲ್ಲ.
ನಮ್ಮಲ್ಲೇನು ಮೋಸವು ಇಲ್ಲ. ಬೇಡಿಕೆ ಎಂದು ಇಳಿಯುವುದಿಲ್ಲ. ಹಣ ಕೊಟ್ಟರೆ ಪ್ರಶಸ್ತಿ ಉಂಟು. ರೆಕಮೆಂಡೇಷನ್ ನಡಿಯುವುದಿಲ್ಲ.
ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!
ರಾಜ್ಯ ಮಟ್ಟದ ಪ್ರಶಸ್ತಿ ಉಂಟು, ರಾಷ್ಟ್ರ ಮಟ್ಟದ ಪ್ರಶಸ್ತಿ ಉಂಟು. ಬೇಗ ಬಂದರೆ ಮತ್ತಷ್ಟುಂಟು.
ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!
- ಮಹರ್ಷಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ