ಪಕ್ಕದ ಮನೆಯ ಮುದುಕಿ ಸತ್ತಿರಲು
ನಾಲ್ಕು ಜನರೂ ಇಲ್ಲ ಕಣ್ಣೀರ ಸುರಿಸಲು
ಯಾವಾಗ ಹೋಗುವುದೋ ಪೀಡೆ ಎಂದವರೆಷ್ಟೋ
ಅಂತೂ ಹೋಯಿತೆಂದು ಸಂತಸ ಪಟ್ಟವರೆಷ್ಟೋ...
ಪಕ್ಕದ ಮನೆಯ ಮುಂದೆ ಶವವು ಮಲಗಿರಲು
ಅಕ್ಕ ಪಕ್ಕದ ಮನೆಯಲಿ ಪಾರ್ಟಿ ಮಾಡಿಹರು
ಅಲ್ಲಿ ಕಾಟಾಚಾರದ ಆಚರಣೆ ನಡೆದಿರಲು
ನೊಂದಿಹರೇನೋ ಆ ಯಮರಾಜನ ಸಂಗಡಿಗರು...
ಆದರೂ ಅಲ್ಲಿ ಸುರಿಸಿಹರು ಕೃತಕ ಕಣ್ಣೀರು
ಈ ಪ್ಯಾಟೆಯ ಬದುಕಲ್ಲಿ ಯಾರಿಗೆ ಇನ್ಯಾರು,
ಕೊನೆಗೆ ಹೊರಲು ನಾಲ್ಕು ಜನರೂ ಸಿಗಲೇ ಇಲ್ಲಿ
ಕರೆದೊಯ್ಯುವರು ನಾಲ್ಕು ಚಕ್ರದ ವಾಹನದಲ್ಲಿ...
ಸಿಗುವುದೂ ಇಲ್ಲ ಜಾಗ ಇಡಲು ಕೊಳ್ಳಿ
ಇಟ್ಟು ಬರುವರು ಶವವ ಯಂತ್ರದ ಮಡಿಲಲ್ಲಿ,
ಇದು ಯಾಂತ್ರಿಕ ಯುಗ ಕಾಣೋ ಮನಸುಗಳು ಮಾಯ
ಮನೆ ಮುಂದಿನ ಹೆಣವೂ ಕಾಣದು ಜನಕೆ, ಅರಿತವರಾರು ಈ ಹೊಸ ಯುಗದ ಗಮ್ಯ.....
- ರಾಘವೇಂದ್ರ ಡಿ. ತಳವಾರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ