ನಗರದ
ಅಮಾನಿಕೆರೆ ಉದ್ಯಾನವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯ 'ಲೇಖಕಿ' ಬಯಲ ಓದು
ಬಳಗವು ಆಯೋಜಿಸಿದ್ದ ಪುಸ್ತಕ ಓದು-ಚರ್ಚೆ-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು
ಬಾಲ್ಯದಿಂದಲೂ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಂಡೆ. ಪ್ರತಿಯೊಂದು ಹೋರಾಟವು ಒಂದು
ಅನುಭವವನ್ನು ಪ್ರತಿಯೊಂದು ಅನುಭವವು ಹೊಸದೊಂದು ಪಾಠವನ್ನು ಕಲಿಸುತ್ತಲೇ ಬಂದಿವೆ. ಹೀಗೆ ಪಡೆದ
ಅನುಭವಗಳನ್ನು, ಕಲಿತ ಪಾಠಗಳನ್ನು ದಾಖಲಿಸುವ ಪ್ರಯತ್ನವೇ ನನ್ನ ʼಕಿಚ್ಚಿಲ್ಲದ ಬೇಗೆʼ ಕೃತಿ. ನಾನು
ಈ ಕೃತಿ ಬರೆದದ್ದು ಬಹಳಾ ಹಿಂದೆ, ʼಹೊಸಲು ದಾಟಿದ ಹುಡುಗಿʼ ಎಂಬ ಅಂಕಣಕ್ಕೆ ಬರೆದ ಲೇಖನಗಳೂ
ಇಲ್ಲಿವೆ. ಇವನ್ನು ಬರೆದಾಗ ನನ್ನ ಬರಹಗಳು ಇಷ್ಟು ಪ್ರಭಾವವನ್ನು ಬೀರಬಹುದು ಎಂಬ ಯಾವ ನಿರೀಕ್ಷೆಯೂ
ಇರಲಿಲ್ಲ. ಆದರೆ ನನ್ನ ಅನುಭವಗಳೇ ಸಾಕಷ್ಟು ಹೆಣ್ಣು ಮಕ್ಕಳ ಅನುಭವಗಳೂ ಆಗಿದ್ದು, ತಮ್ಮದೇ ಜೀವನ
ಕಥನವೆಂಬಂತೆ ಓದುಗರು ಈ ಕೃತಿಯನ್ನು ಅಪ್ಪಿಕೊಂಡಿರುವುದು ಸಂತಸ ತಂದಿದೆ ಎಂದರು.
ಪುಸ್ತಕದ ಕುರಿತು
ಲೇಖಕಿ ಗೀತಾಲಕ್ಷ್ಮೀ ಮಾತನಾಡುತ್ತಾ, ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ನಮ್ಮನ್ನು ಸಮಾಜಕ್ಕೆ
ಮುಖಾಮುಖಿಯಾಗಿಸುತ್ತದೆ. ಸರಳವಾಗಿ ಮಾತನಾಡುತ್ತಲೇ ಲೇಖಕಿಯ ಬದುಕಿನ ಅನುಭವಗಳನ್ನು ಈ ಕೃತಿ
ದಟ್ಟವಾಗಿ ತೆರೆದಿಡುತ್ತದೆ. ನಿರಂತರ ಸವಾಲುಗಳನ್ನೇ ಎದುರಿಸುತ್ತಾ, ಅದರಾಚೆಗೂ ಜೀವಪರ
ನಿಲುವುಗಳನ್ನು ತಳೆದು ಬದುಕನ್ನು ಚಂದಗಾಣಿಸಿಕೊಂಡ ಲೇಖಕಿಯ ಬದುಕು ಈ ಕೃತಿಯ ಉದ್ದಕ್ಕೂ ತುಂಬಿವೆ
ಎಂದರು.
ಉಪನ್ಯಾಸಕ ಡಾ. ಪವನ್ ಗಂಗಾಧರ್ ಮಾತನಾಡುತ್ತಾ, ಅನುಭವ ಕಥನದ ಲಕ್ಷಣವೇ ಸಹಜತೆ, ಇಲ್ಲಿ
ಬೆಡಗು ಇರುವುದಿಲ್ಲ. ಒಂದು ಉತ್ತಮ ಅನುಭವ ಕಥನವನ್ನು ಓದುವಾಗ ಇದು ನಮ್ಮದೇ ಕತೆ ಎಂದೆನಿಸುತ್ತದೆ.
ಬದುಕನ್ನ ಪ್ರೀತಿಸುವ ಕಲೆಯನ್ನ ಈ ಪುಸ್ತಕ ಕಲಿಸಿ ಕೊಡುತ್ತದೆ. ಒಬ್ಬ ವ್ಯಕ್ತಿ ರೂಪುಗೊಳ್ಳುವುದು
ತಾನು ಬೆಳೆದ ಪರಿಸರ ಪಡೆದ ಒಡನಾಟದಿಂದ. ಲೇಖಕಿ ಶೈಲಾರವರು ರೂಪುಗೊಂಡ ಬಗೆಯನ್ನು ಈ ಕೃತಿ
ಸಮರ್ಥವಾಗಿ ನಿರೂಪಿಸಿದೆ. ಹಲವು ದಟ್ಟ ಅನುಭವಗಳನ್ನು ಕೊಡುತ್ತಲೇ ಓದುಗರನ್ನು ಚಿಂತೆಗೆ ಹಚ್ಚುವ
ಶಕ್ತಿ ಈ ಕೃತಿಯಲ್ಲಿದೆ. ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ದಾಟಿ ಪರಿಪಕ್ವತೆಯ ಕಡೆಗೆ ನಡೆಯುವ
ಜೀವಪರವಾದ ಚಲನೆ ಈ ಕೃತಿಯಲ್ಲಿದೆ. ಲೇಖಕಿಯ ಅಥವಾ ಯಾವುದೇ ಬರಹಗಾರರ ಬಾಲ್ಯ ಅವರ ಜೀವನ ಅವರು
ರೂಪುಗೊಂಡ ಬಗೆಯನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವಲ್ಲಿ ಇಂತಹ ಅನುಭವ ಕಥನಗಳ ಪಾತ್ರ ಬಹಳ
ಮುಖ್ಯ ಎಂದರು.
ಉಪನ್ಯಾಸಕಿ ಅಕ್ಷತಾ ಮಾತನಾಡುತ್ತಾ, ʼಕಿಚ್ಚಿಲ್ಲದ ಬೇಗೆʼ ಇಂದಿನ ಸನ್ನಿವೇಷಕ್ಕೆ
ಅತ್ಯಂತ ಪ್ರಸ್ತುತವಾದ ಕೃತಿ. ಮಹಿಳೆಯರ ಬದುಕಿನ ಪಲ್ಲಟಗಳು ಇಲ್ಲಿವೆ, ನಮ್ಮ ಬದುಕುಗಳೇ ಇಲ್ಲಿ
ಚಿತ್ರಿತವಾಗಿವೆ ಎನಿಸುತ್ತದೆ. ಲೇಖಕಿ ಅನುಭವಿಸಿದ ನೋವು, ಹಿಂಸೆ, ಭ್ರಷ್ಟಾಚಾರ ಮುಂತಾದವುಗಳನ್ನು
ಚಿತ್ರಿಸುತ್ತಲೇ ಅವುಗಳ ವಿರುದ್ಧ ತಾವು ನಡೆಸಿದ ಪ್ರತಿಭಟನೆಯನ್ನೂ ಈ ಕೃತಿಯಲ್ಲಿ
ದಾಖಲಿಸಿದ್ದಾರೆ. ಅಂತರ್ಜಾತಿ ವಿವಾಹವಾದ ಮಹಿಳೆ ಹೆರಿಗೆಯ ಸಂದರ್ಭದಲ್ಲಿ ಅನುಭವಿಸುವ ನೋವು ಮಾನಸಿಕ ಯಾತನೆ,
ಏಕಾಂಗಿತನಗಳನ್ನು ಹಾಗೂ ಹೆಜ್ಜೆ ಹೆಜ್ಜೆಗೂ ಸಾಮಾಜಿಕ ಕಟ್ಟುಪಾಡುಗಳನ್ನು ಮೀರುವ ಲೇಖಕಿಯರ
ಸಾಹಸವನ್ನು ಈ ಕೃತಿ ಸಮರ್ಥವಾಗಿ ಚಿತ್ರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿಎ ಇಂದಿರಾ,
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕಿ ಗೀತಾ ವಸಂತ, ಲೇಖಕಿ
ರಾಣಿ ಚಂದ್ರಶೇಖರ್, ಉಪನ್ಯಾಸಕಿ ಆಶಾ ಬಗ್ಗನಡು, ಹಾಗೂ ಕವಯತ್ರಿ ಮರಿಯಂಬಿ ಮುಂತಾದವರು
ಹಾಜರಿದ್ದರು.
( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ