ಭಾನುವಾರ, ಫೆಬ್ರವರಿ 12, 2023

ಹೋರಾಟದ ಬದುಕಿನಲ್ಲಿ ಮಹಿಳೆ(ಲೇಖನ) - ಶ್ರೀಮತಿ ಪ್ರತಿಮಾ ಹೆಚ್. ಎಸ್.

ಹೆಣ್ಣು ಮನೆಗೆ ಕಣ್ಣು ಎನ್ನುವರು ಎಲ್ಲಾ. ಆದರೆ ಅವಳಿಗೆ ಎಲ್ಲಿಯೂ ಸಮಾನ ಸ್ಥಾನ ಇಲ್ಲ. ಸಮಾನತೆಯು ಎಂದು ಹೇಳುವರು ಅಷ್ಟೇ. ಆಧುನಿಕ ಯುಗದಲ್ಲಿ ಎಲ್ಲೆಡೆಯೂ  ಸಹ  ಸಮಾನತೆಯಂತೆ ನಡೆಯುವರು ಅಷ್ಟೇ. ಎಷ್ಟೇ ಸಮಾಜದಲ್ಲಿ ಸಮಾನತೆಯನ್ನು ಕಂಡರೂ ಅವಳ ಜೀವನದಲ್ಲಿ 108 ಬಾರಿ ಯೋಚನೆ ಮಾಡಿ ಮುನ್ನುಗ್ಗಬೇಕಾಗುತ್ತದೆ. ಪುರುಷರಿಗೆ ಸರಿ ಸಮಾನತೆ ಕಂಡರೂ ಸಹ. ಹಲವಾರು ಕಷ್ಟಗಳನ್ನ ಅನುಭವಿಸಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಮಹಿಳೆಯು ಹಲವಾರು ಸವಾಲುಗಳನ್ನು ಎದುರಿಸುತ್ತಿರುತ್ತಾಳೆ. ಮನೆಯಲ್ಲಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುವರು. ಅಂತೆಯೇ ಆಕೆಗೆ ಮನೆಯಲ್ಲಿ ಮಹತ್ವವಿರುತ್ತಿರಲಿಲ್ಲ. ಆಕೆ ಮಗುವನ್ನು ಏರುವುದಕ್ಕೆ, ಮನೆ ಕೆಲಸಕ್ಕೆ ಸೀಮಿತವಾಗಿಸಿಕೊಂಡಿದ್ದರು.  ಆದರೆ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂ ಸಹ ಮಹಿಳೆಯರು ತನ್ನದೇ ಆದಂತಹ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಪುರುಷನಿಗೆ ಸರಿ ಸಮಾನವಾಗಿ ಎಲ್ಲೆಡೆಯು ತನ್ನದೇ ಆದ ಸ್ಪರ್ಧೆಯನ್ನು ನೀಡುತ್ತಿದ್ದಾಳೆ. ಸ್ಪರ್ಧೆಯಲ್ಲಿ ಇಂದಿನ ದಿನಗಳ ಪ್ರಕಾರ ಹೆಣ್ಣೆ ಎಲ್ಲೆಡೆಯೂ ಮುಂದಾಗಿದ್ದಾಳೆ. ಆದರೆ ಈ ಆಧುನಿಕ ಯುಗದಲ್ಲಿ ಎಲ್ಲಾ ರಂಗಗಳಲ್ಲೂ  ತನ್ನ ಸ್ಥಾನವನ್ನ ಪ್ರಬಲಗೊಳಿಸಿಕೊಂಡರು ಸಹ. ಅನೇಕ ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಇಂದು ನಮ್ಮ ಸಂಸ್ಕೃತಿ,ಧರ್ಮ, ರೀತಿ- ನೀತಿ, ಕುಟುಂಬದ ವ್ಯವಸ್ಥೆ  ಎಲ್ಲದರಲ್ಲೂ ಬದಲಾವಣೆಯನ್ನು ಕಾಣುತ್ತಿದ್ದೇವೆ. ಇಂತಹ ಬದಲಾವಣೆಗಳಲ್ಲಿ ಮಹಿಳೆಯೂ 
 ಬಹಳಷ್ಟು ಸಮಸ್ಯೆಗಳನ್ನ ಎದುರಿಸಿ ಜೀವನ ಮಾಡುತ್ತಿದ್ದಾರೆ.
 ಆಧುನಿಕ ಯುಗದಲ್ಲಿ ಮಹಿಳೆಯರು ಬಹಳಷ್ಟು ಸ್ಪರ್ಧೆಯನ್ನು ಮಾಡಬೇಕಾಗುತ್ತದೆ. ಇಂತಹ ಯುಗದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವಳ ಜೀವನದ ದಾರಿ ಹೋರಾಟದ ಬದುಕಿಗೆ ದಾರಿಯಾಗಿರುತ್ತದೆ. ಅವರು  ದಿನನಿತ್ಯ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ದಿನನಿತ್ಯ ಹಲವಾರು ಮಾನಸಿಕವಾಗಿ, ದೈಹಿಕವಾಗಿ, ಸಮಸ್ಯೆಗಳಿಗೆ ಒಳಗಾಗುತ್ತಿದ್ದಾಳೆ. ಅವಳ ಹೋರಾಟವನ್ನು ಒಂದು ಎರಡು ಇಂದು ಸಂಖ್ಯೆಗಳಲ್ಲಿ ಸಮಸ್ಯೆಗಳನ್ನು ಹೇಳಲು  ಸಾಧ್ಯವಿಲ್ಲ.
 ಮನೆಯಿಂದ ಹೊರ ಬಂದ ತಕ್ಷಣವೇ  ಬೆಳಿಗ್ಗೆಯಿಂದ ಮನೆಗೆ ಹಿಂತಿರುಗುವವರೆಗೂ ಅವಳ ಹೋರಾಟದ ಸಮಯ  ಪ್ರಾರಂಭವಾಗುತ್ತದೆ. ಮನೆಗೆ ಬಂದ ನಂತರದಲ್ಲಿ ಆಕೆಯ ಹೋರಾಟ ಮುಕ್ತಾಯಗೊಂಡರು. ದಿನನಿತ್ಯದ ಹೋರಾಟವೇ ಹೀಗಿರುತ್ತದೆ 

* ಪುರುಷನಿಗೆ ಸರಿ ಸಮಾನವೆಂಬಂತೆ  ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾಳೆ :
 ಹೊರಗೆ ಕೆಲಸ ಮಾಡುವಾಗ ಹಲವಾರು ಮುಜುಗರದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಬದುಕನ್ನು ನಡೆಸಲೇಬೇಕು ಕೆಲಸವನ್ನು ಮಾಡಲೇಬೇಕೆಂಬ ಉದ್ದೇಶದಿಂದ ಎಂತಹ ಸಮಸ್ಯೆಗಳು ಬಂದರೂ ಸಹ ಅದನ್ನು ಎದುರಿಸುತ್ತಾಳೆ. ಮಹಿಳೆ ಹಲವಾರು ಸವಾಲುಗಳನ್ನು ಎದುರಿಸುತ್ತ ಜೀವನ ಸಾಗಿಸುತ್ತಿದ್ದಾಳೆ. ಇಂದಿನ ಜೀವನಶೈಲಿಯೂ ಬದಲಾಗುತ್ತಿರುವುದು ಆ ಜೀವನಶೈಲಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರುತ್ತಾಳೆ.
* ನಮ್ಮ ಸಂಸ್ಕೃತಿ ಧರ್ಮ ಜಾತೀಯತೆ ಹಲವಾರು ವಿಭಿನ್ನ ರೀತಿಯ  ಕೆಲಸಗಳಲ್ಲಿ ವಿಭಿನ್ನ ರೀತಿಯಾಗಿ ತನಗೆ ಅರ್ಥೈಸಿಕೊಳ್ಳುವಂತೆ ಜೀವನ ಮಾಡುತ್ತಾಳೆ. ಅಲ್ಲಿಯು ಸಹ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.
* ಮನೆಯಲ್ಲೂ ಕಷ್ಟ ಪಟ್ಟಿ ದುಡಿಯುತ್ತಾ. ಅಡುಗೆಯನ್ನು ಮಾಡುವುದು. ಮಕ್ಕಳನ್ನು ಸಂತೈಸುವುದು . ಇನ್ನೂ ಅನೇಕ ಕೆಲಸಗಳನ್ನ. ಹೋಗುತ್ತಿರುತ್ತಾಳೆ.
* ಮೊಬೈಲನ್ನು ಬಳಕೆ ಹೆಚ್ಚಾಗುತ್ತಿರುವುದರಿಂದ  ಅದರಲ್ಲೂ ಸಹ ಕೆಲವು ಸಮಸ್ಯೆಗಳು ಬರಬಹುದು.ಪರಿಚಯವಿಲ್ಲದಿರೆ ಆದರೂ  ಸಹ ಪರಿಚಯ  ಮಾಡಿಕೊಳ್ಳುವುದು / ಪ್ರಯತ್ನ  ಪಡುವುದು ಅಂತಹ ಸಮಸ್ಯೆಗಳನ್ನು ಸಹ ಎದುರಿಸಬೇಕಾದ ಪರಿಸ್ಥಿತಿ ಬರುತ್ತಿದೆ.
* ಆರ್ಥಿಕ ಪರಿಸ್ಥಿತಿ ಈ ಸರಿ ಇಲ್ಲದ ಕಾರಣ ಕೆಲಸಕ್ಕೆ ಬಂದಂತಹ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಗಳಿಂದ ನೋಡುವುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಇರುಸು ಮುರುಸು ಮಾಡುವುದು.
* ಯಾವುದೇ ಕೆಲಸವಾಗಲಿ ನಿಷ್ಠೆಯಿಂದ ಮಾಡಿಕೊಂಡು ಹೋಗುತ್ತಿರುತ್ತಾರೆ. ಇಂತಹ ಸಮಸ್ಯೆಗಳನ್ನು ನಗುನಗುತ್ತಾ ಎದುರಿಸುತ್ತಾ ಜೀವನವನ್ನು ನಡೆಸುತ್ತಾರೆ. ಯಾವುದಕ್ಕೂ ಅಂಜದೆ ಕೆಲಸವನ್ನ ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಶಕ್ತಿ ಮಹಿಳೆಯರಿಗೆ ಇದೆ.
* ತಮ್ಮ ಪಾಡಿಗೆ ತಾವು ಕೆಲಸವನ್ನು ಮಾಡಿಕೊಂಡು ಹೋಗಲು ಸಹ ಬಿಡದಂತೆ ಬೇಡವಾದ  ಸೃಷ್ಟಿಸುವುದು
* ಹೊರಗೆ ಹೋಗಿ ಛಲದಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳ ಮೇಲೆ ಬೇಡವಾದ ಆರೋಪಗಳನ್ನು ಹಾಕುವುದು.
* ಹಣದ ಆಮಿಷವನ್ನು ಹೊಡ್ಡಿ  ಕೆಟ್ಟ ವೃತ್ತಿಗಳಿಗೆ ತಳ್ಳಲು ಪ್ರಯತ್ನಿಸುವುದು. ಎಷ್ಟು ಮಂದಿ ಅದಕ್ಕೆಲ್ಲ ಸೊಪ್ಪು ಹಾಕದೆ ತನ್ನ ಕೆಲಸ ಬಗ್ಗೆ ಮಾತ್ರ ಗಮನಹರಿಸುತ್ತಾರೆ.
* ಯಾವುದಕ್ಕೂ ಅಂಜದೆ ತನ್ನ ವೃತ್ತಿಯಲ್ಲಿಯೇ ಹೆಸರು ಮಾಡಿ ತೋರಿಸುತ್ತಾರೆ.
* ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗಲು ಬಿಡದೆ. ಬೇಡವಾದ ವಿಷಯಗಳ ಬಗ್ಗೆ ಚರ್ಚಿಸುವುದು ಮಾನಸಿಕವಾಗಿ ಹಿಂಸೆ ನೀಡುವುದು.
* ಯಾವುದಾದರೂ ರಂಗದಲ್ಲಿ ಸ್ವಲ್ಪ ಹೆಸರು ಮಾಡುತ್ತಿದ್ದಾಳೆಂದರೆ ಸಾಕು ಬೇಡವಾದ ಶತ್ರುಗಳು ಸಹ ಹುಟ್ಟಿಬಿಡುತ್ತಾರೆ. ಅಸೂಯ ಪಡಲು ಪ್ರಾರಂಭಿಸುತ್ತಾರೆ. ಮನೆಯಲ್ಲಿ ರಕ್ಷಣೆ ನೀಡಬೇಕಾದಂತಹ ವ್ಯಕ್ತಿಗಳೇ ವಿರುದ್ಧವಾಗುತ್ತಾರೆ. ಎಷ್ಟು ಹೇಳುವುದು ಕಥೆಗಳನ್ನು, ಮಾನಸಿಕ ಯಾತನೆಗೆ ಒಳಪಡುತ್ತಾಳೆ ಹೆಣ್ಣು. ಎಷ್ಟರಮಟ್ಟಿಗೆ ನೋವು ತಿನ್ನುತ್ತಾಳೋ, ಅವಮಾನಕ್ಕೆ ಒಳಗಾಗುತ್ತಾಳೋ, ಅಷ್ಟೇ ಗಟ್ಟಿಯಾಗುತ್ತಾ ಹೋಗುತ್ತಾಳೆ. ಸಾಧನೆಯಲ್ಲಿ ಮುಂದೊರೆಯುತ್ತಾ ಹೋಗುತ್ತಾಳೆ. ನಿಷ್ಕಲ್ಮಶವಾಗಿ ಕಾರ್ಯವನ್ನು ನಿರ್ವಹಿಸ್ತಾ ಹೋಗುತ್ತಾಳೆ.
* ಎಷ್ಟೋ ಬಾರಿ ಹೆಣ್ಣು ಮಕ್ಕಳು ಪರಿಸ್ಥಿತಿಯ ಗೊಂಬೆಯಾಗಿ ವರ್ತಿಸುತ್ತಾರೆ. ನನಗೆ ಇಷ್ಟವಿಲ್ಲದಿದ್ದರೂ ಕೆಲವು ಕಾರ್ಯಗಳನ್ನು ಮಾಡಲು ಮುಂದಾಗುತ್ತಾರೆ.

* ಕೆಲಸಕ್ಕೆ ಹೋಗುವ ಮಹಿಳೆ  ದಾಂಪತ್ಯದಲ್ಲಿ ಕಲಹಗಳನ್ನು ತಂದು ಹಾಕುವುದು. ಆದರ್ಶಯದಲ್ಲಿ ಮಹಿಳೆಯ ಸ್ಥಿತಿ ಇಂದಿನ ದಿನಮಾನಗಳಿಗೆ ಹೊಂದಿಕೊಂಡು ಹೋಗುತ್ತಿದ್ದಾರೆ .
 ಹೀಗೆ  ಆಧುನಿಕ ಕಾಲದಲ್ಲಿ  ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾಳೆ. ಹೋರಾಟದ ಬದುಕನ್ನು ನಡೆಸುತ್ತಾ  ಬಾಳಿನ ದಾರಿಯಲ್ಲಿ ನಡೆಯುತ್ತಿರುತ್ತಾಳೆ. ಏನೇ ಆದರೂ ಹೆಣ್ಣು ದೊಡ್ಡ ತ್ಯಾಗಿ ಆಗಿ ಬರುತ್ತಾಳೆ. ಹೆಣ್ಣಿಲ್ಲದ ಜೀವನವಿಲ್ಲ. , ಎಂಬುವುದು ಎಲ್ಲರಿಗೂ ಅರಿವಿದೆ. ಆದರೂ ಸಹ ಮಹಿಳೆಯೂ ಬಾರೋ ಸಮಸ್ಯೆಗಳನ್ನ ಈ ಆಧುನಿಕ ಯುಗದಲ್ಲಿ ಅನುಭವಿಸುತ್ತಾ ಹೋಗುತ್ತಿದ್ದಾಳೆ.ಮಹಿಳೆ ಬದುಕಲು ಜೀವನ ನಡೆಸಲು  ಬಿಡಿ,ಎಲ್ಲಾ ಪಾತ್ರವನ್ನು ವಹಿಸುವ ಮಹಿಳೆಯ ಮಹತ್ವ ಅಪಾರವಾದದ್ದು. ಎಂಬುದನ್ನು ತಿಳಿದು  ಬಾಳಿರಿ ಅವರಿಗೂ ಬಾಳಲು ಬಿಡಿ . ಅವಳು ಅಬಲೆಯಲ್ಲ ಸಬಲೇ ಎಂಬುದನ್ನು ಸಾರುತ್ತಾ ಆಕೆಗೆ ನೆರಳಾಗಿ ಪುರುಷರು ನಿಲ್ಲುವುದನ್ನು ಕಲಿಯಬೇಕು . ಹಾಗಾದರೆ ಮಾತ್ರ  ನಮ್ಮ ರಾಜ್ಯ ರಾಮ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಜೈ ಹಿಂದ್ ಜೈ ಕರ್ನಾಟಕ ಮಾತೆ.

- ಶ್ರೀಮತಿ ಪ್ರತಿಮಾ ಹೆಚ್. ಎಸ್.
ಹಾಸನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...