ಕಣ್ಣು ಮುಚ್ಚಿ ಮಲಗಿಹರು
ಚಿರನಿದ್ರೆಯಲಿ ರಾಯರು
ಸಂತಾಪ ಸೂಚಿಸಿಹರು
ಬಂದ ಜನ ಸಾವಿರಾರು
ದೇವರಂಥ ಮನುಜರಿವರು
ಗುಣಗಾನ ಮಾಡುತಿಹರು
ನಿತ್ಯ ಶಾಪ ಹಾಕುತಿದ್ದವರು
ಮುಖವಾಡದ ಜನರು
ಸರ್ಕಾರದಧಿಕಾರಿ ರಾಯರು
ಲಂಚಕೋರ-- ಬಿರುದಾಂಕಿತರು
ರಸ್ತೆ ಅಪಘಾತದಲಿ ಮಡಿದರು
ಶಿವನ ಪಾದ ಸೇರಿದರು
ಶವಯಾತ್ರೆ ಮುಗಿಸಿದರು
ಜನರಲ್ಲಿ ಗುಸುಗುಸು ಗುಟುರು
ಎಷ್ಟೋ ಕೋಟಿ ಗಳಿಸಿದ್ದರು
ಮಾಡಿದ ಪಾಪಕೆ ಬಲಿಯಾದರು.
- ಮಾಲತಿ ಮೇಲ್ಕೋಟೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ