ಗುರುವಾರ, ಫೆಬ್ರವರಿ 16, 2023

ಗೆಲವು ಶಾಶ್ವತವಲ್ಲ! ಸೋಲು ಕೊನೆಯು ಅಲ್ಲ (ಲೇಖನ) - ಮಂಜುನಾಥ್ ಮೇಟಿ.

ಸಾಧನೆಯ ಫಲದ ರುಚಿಯೇ ಹಾಗೆ,ಅದು ನಿರೀಕ್ಷೆಗೂ ಮೀರಿದ ಬಹುಮುಖಿ ಸೌಕರ್ಯಗಳನ್ನು ಪರಿಚಯಿಸುತ್ತದೆ. ಹೊಸ ಹೊಸ ಅನುಭವಗಳನ್ನು ನೀಡುತ್ತದೆ. ನಿರಂತರವಾಗಿ ಶ್ರಮಿಸುವಂತೆ ಪ್ರಚೋದನೆಯನ್ನು ನೀಡುತ್ತದೆ. ಆದರೆ ಸಾಧನೆ,ಸಾದಕರೆಲ್ಲರಿಗೂ ನೆಮ್ಮದಿಯನ್ನು ನೀಡುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರವನ್ನು ಕೊಟ್ಟಿಲ್ಲ.ಇತ್ತೀಚೆಗೆ ಖ್ಯಾತ ಕ್ರಿಕೆಟ್ ಆಟಗಾರರೊಬ್ಬರು ಅಪಘಾತಕ್ಕಿಡಾಗಿದ್ದರು.ಆ ಘಟನೆ ಘಟಿಸಿ ತಿಂಗಳುಗಳೆ ಕಳೆದರೂ ಆ ಘಟನೆಯ ಬಗ್ಗೆ ಇಂದಿನವರೆಗೂ ಒಂದಿಲ್ಲಾ ಒಂದು ಸುದ್ದಿ ಪತ್ರಿಕೆಗಳಲ್ಲಿ ಬರುತ್ತಲೆಯಿದೆ.ಆ ಸುದ್ದಿಗಳನ್ನು ಓದಿದಾಗಲೊಮ್ಮೆ ನನಗೆ ಗೆಲುವಿನ ಬಗ್ಗೆ ಒಂದೊಂದು ಬಗೆಯ ಅನುಭವ, ಹೊಸ ಆಯಾಮದ ಪರಿಚಯವಾದಂತೆ ಅನ್ನಿಸುತ್ತದೆ.
           ಅವರ ಅಪಘಾತದ ಬಗ್ಗೆ ಖಚಿತ ಮಾಹಿತಿ ಹೊರ ಬೀಳುತ್ತಿದ್ದಂತೆ ಅನೇಕ ಕ್ರೀಡಾಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು.ಹಲವರಲ್ಲಿ ಆ ಅಪಘಾತವಾದರು ಹೇಗೆ ಸಂಭವಿಸಿತು ಎಂಬ ಕೂತಹಲವೇ ಹೆಚ್ಚಿತ್ತು.ಇದರ ಪ್ರಯೋಜನ ಪಡೆದು ಕೊಂಡವರಾರೆಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆವಿಲ್ಲವೆಂದು ಭಾವಿಸುತ್ತೇನೆ. ಅಲ್ಲಿಂದ ನಿರಂತರವಾಗಿ ಅವರ ಬಗ್ಗೆ ವರದಿಗಳು ಬರಲು ಆರಂಭಿಸಿದವು.ಅವರು ಸ್ವಲ್ಪ ಚೇತರಿಸಿಕೊಂಡ ಬಳಿಕ ಅಪಘಾತ ಹೇಗಾಯಿತು ಎಂದು ತಿಳಿಸಲಿದ್ದಾರೆ ಎಂದು ಸುದ್ದಿಯಾಯಿತು.ಅಲ್ಲಿಯವರೆಗೆ ಕನಿಕರದಿಂದ ಈ ಘಟನೆಯನ್ನು ಗಮನಿಸುತ್ತಿದ್ದ ಅದೇಷ್ಟೊ ದೊಡ್ಡ ಮಂದಿಗೆ ಭಯವಾಗ ತೊಡಗಿತು.
           ಪ್ರತಿಷ್ಠಿತ ಕಂಪನಿಯ ಕಾರನ್ನು ಬಳಸುತ್ತಿದ್ದ ಅವರಿಗೆ,ಗಂಭೀರವಾದ ಗಾಯಗಳು ಹೇಗಾದವು ಎಂಬ ಪ್ರಶ್ನೆ ಹುಟ್ಟಿದರೆ, ತಮ್ಮ ಘನತೆಗೆ ಎಲ್ಲಿ ದಕ್ಕೆಯಾಗುವುದೋ ಎಂಬರ್ಥದಲ್ಲಿ ಕಾರಿನ ಸುರಕ್ಷತೆಯ ಬಗ್ಗೆ ಎಲ್ಲ ರೀತಿಯ ವಿಮರ್ಶೆನೆಯನ್ನು ನೀಡಲು ಮುಂದಾದದನ್ನು ತಾವು ನೋಡಿರಬಹುದು.ಹಾಗೇ ಯಾರೋ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದ್ದಕ್ಕಾಗಿ ವೇಗ ನಿಯಂತ್ರಣ ತಪ್ಪಿ ಹೀಗಾಗಿದ್ದರೆ; ಅವರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಕ್ಕೆ ಎಲ್ಲಿ ನಮ್ಮ ತಲೆದಂಡವಾಗುವುದೋ?ಎಂಬ ಭಯದ ವಾತಾವರಣವು ಕೆಲವರಲ್ಲಿ ಹುಟ್ಟಿಕೊಂಡಿತ್ತು.ಅನೇಕ ಸ್ವಯಂ ಘೋಷಿತ ವಿದ್ವಾಂಸರು ಐಷಾರಾಮಿ ಜೀವನ ಶೈಲಿಯಿರುವ ವ್ಯಕ್ತಿ ಕುಡಿದು ಕಾರನ್ನು ಓಡಿಸಿದ್ದಕ್ಕಾಗಿಯೇ ಈ ಅಪಘಾತವಾಗಿದೆ ಎಂಬ ವರದಿಯನ್ನು ಕೊಟ್ಟಿದ್ದರು.ಅದೇ ರೀತಿ ದೇವ ಮಾನವರು ತಮ್ಮ ತಮ್ಮ ಜ್ಞಾನ ಬಲವನ್ನು ಪ್ರಯೋಗಿಸಿ ಆರನೆ ಮನೆ,ಎಳನೆ ಮನೆಯ ರಾಹು ಕೇತುಗಳನ್ನು ಅಪರಾಧಿಗಳನ್ನಾಗಿ ಮಾಡಿದ್ದನ್ನು ತಾವು ಕಂಡಿರಬಹುದು.ಆದರೆ ಸಂಜೆ ಸ್ವಯಂ ಅವರೇ "ಗುಂಡಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿತು" ಎಂದು ಹೇಳುತ್ತಿದ್ದಂತೆ ಎಲ್ಲಾ ಊಹಾಪೋಹಗಳಿಗೆನೋ ತೆರೆ ಬಿದ್ದಿತು ಆದರೆ ಯಾರೂ ಊಹಿಸದ ಸಮೂಹವೊಂದು ತಲೆ ತೆಗ್ಗಿಸುವಂತಾಗಿದ್ದು ಸುಳ್ಳಲ್ಲ.( ಅದು ಅವರಿಗೇನು ಹೊಸತಲ್ಲ ಆದರೆ ಇದು ಸಾಧಕರೊಬ್ಬರಿಗೆ ಸಂಬಂಧಿಸಿದ್ದಾಕ್ಕಾಗಿ ಸ್ವಲ್ಪ ಹೆಚ್ಚಿನ ಸುದ್ದಿ ಮಾಡಿ ಕಿರಿ ಕಿರಿ ಮಾಡಿತ್ತು ಅಷ್ಟೇ) ಈ ಅಪಘಾತದಿಂದ ಕೇವಲ ಅವರ ಆತ್ಮೀಯರಿಗಷ್ಟೆ ಆತಂಕವಾಗದೆ ಕೆಲವು ಸಮಯ ಹಲವರಿಗೂ ಆತಂಕವನ್ನು ತಂದಿತ್ತು.ಹಾಗು ಅನೇಕ ಬುದ್ದಿ ಜೀವಿಗಳಿಗೆ ಒಂದು ಹೊಸ ವೇದಿಕೆಯನ್ನು ಹಾಕಿ ಕೊಟ್ಟಿತ್ತು.ಇದುವೆ ಸಾಧನೆಯ ಶಕ್ತಿ.ಜೀವನದಲ್ಲಿ ಎನನ್ನಾದರು ಸಾಧಿಸಿದರೆ ನಾವು  ಸಾರ್ವಜನಿಕರ ಆಸ್ತಿಯಾಗಿ ಬಿಡುತ್ತೇವೆ.
             ಸುದ್ದಿ ಎಲ್ಲಡೆ ಹರಡುತ್ತಿದ್ದಂತೆ ಗಣ್ಯಾತಿ ಗಣ್ಯರು,ಸಹ ಆಟಗಾರರು, ಆತ್ಮೀಯರು ಮತ್ತು ಅಭಿಮಾನಿಗಳು ಬಹು ಬೇಗನೆ ಗುಣ ಮುಖರಾಗುವಂತೆ ತಮ್ಮ ತಮ್ಮ ಸಾಮಾಜಿಕ ತಾಣಗಳ ಮೂಲಕ (ವೈಯಕ್ತಿಕವಾಗಿಯೂ ತಿಳಿಸಿರಬಹುದು ಆದರೆ ಅದರ ಬಗ್ಗೆ ನಮಗೆ ಸರಿಯಾದ ಮಾಹಿತಿಯಿಲ್ಲ) ಶುಭ ಹಾರೈಕೆಗಳನ್ನು ತಿಳಿಸಿದರು.ಹಲವಾರು ಗಣ್ಯರು ಸಹಾಯ ಹಸ್ತವನ್ನು ಚಾಚಿದರು.ಎಲ್ಲಕಡೆಯಿಂದ ಆರ್ಥಿಕವಾಗಿ ,ಮಾನಸಿಕವಾಗಿ ಬೆಂಬಲ ಸೂಚಿಸಿದರು. ಒಬ್ಬಳು ಮಾಜಿ ಪ್ರೀಯೆಯೊರ್ವಳು ತಮ್ಮ ಕಳಕಳಿಯನ್ನು ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ಅವರಿಬ್ಬರ ನಡುವಿನ ಊಹಾಪೋಹಗಳನ್ನು ನೆನಪಿಸಿ ಕೊಟ್ಟರು.ಹೀಗೆ ಪ್ರತಿಯೊಂದು ದಿಕ್ಕಿನಿಂದಲು ಅವರೊಂದಿಗಿರುವ  ತಮ್ಮ ತಮ್ಮ ಸಂಬಂಧಗಳನ್ನು ಹುಡುಕಿ ,ಸಾಮಾಜಿಕ ಜಾಲತಾಣಗಳಲ್ಲಿ ಕಾಳಜಿಯನ್ನು ತೋರಿಸುವಲ್ಲಿ ಯಶಸ್ವಿಯಾದರು, ಆದು ಸಾಧನೆಯ ಮತ್ತೊಂದು ಶಕ್ತಿ. ಅದು ಎಲ್ಲ ಸಂಬಂಧಗಳನ್ನು ಆಕರ್ಷಿಸುತ್ತದೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಸುತ್ತದೆ.ಹೊಸ ಹೊಸ ಬಂಧನಗಳನ್ನು ಹುಟ್ಟಹಾಕುತ್ತದೆ. (ಯಾರನ್ನು ಟೀಕಿಸುತ್ತಿಲ್ಲ). ಜನ ತಮ್ಮ ತಮ್ಮ ಜಾಲತಾಣಗಳ ಖಾತೆಗಳಲ್ಲಿ ಆ ಕ್ರೀಡಾಪಟುವಿನೊಂದಗಿನ ಫೋಟೊ ಹಾಕಿ, ಉದ್ದ ಉದ್ದದ ಕ್ಯಾಪಷನಗಳನ್ನು ಹಾಕಿದ್ದು ಗಮನಿಸಿದಾಗ ನನಗೆ ಅವರು ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೋ? ಇಲ್ಲಾ ಈ ವ್ಯಕ್ತಿ ನನಗೇನು ದೂರದವನಲ್ಲ,ನಮ್ಮ ನಡುವೆ ಅತೀ ಹತ್ತಿರದ ಆತ್ಮೀಯತೆ ಎಂಬುದನ್ನು ತಿಳಿಸುವ ಪ್ರಯತ್ನದಲ್ಲಿದ್ದರೋ?? ಎಂಬ ಒಂದು ಸಣ್ಣ ಸಂಶಯ ಮೂಡಿತ್ತು.ಗೆದ್ದಾಗ ಮುದ್ದಾಡುವ ಜನ ಸೋತಾಗ ಮೇಲೆತ್ತುವರೆ? ಎಂಬ ಪ್ರಶ್ನೆಯನ್ನು ಸಾಧನೆ ತನ್ನೊಂದಿಗೆ ಸದಾ ಕರೆತರುತ್ತದೆ.
               ಕ್ರಿಕೆಟ ಆಟಗಾರನಿಗೆ ಅಪಘಾತದಲ್ಲಾದ ಗಾಯದ ವಿವರಗಳನ್ನು ವೈದ್ಯರು ತಿಳಿಸುತ್ತಿದ್ದಂತೆಯೇ ಕ್ರಿಕೆಟ ಮಂಡಳಿಯಲ್ಲಿ ಚರ್ಚೆಯೊಂದು ಪ್ರಾರಂಭವಾಯಿತು. ಅವರ ಬದಲಿಗೆ ಇನ್ನಾರನ್ನು ಸೇರಿಸಿ ಕೊಳ್ಳಬೇಕೆಂದು .ಇದು ಹಲವರ ಬಾಳಲ್ಲಿ ಆಶಾ ಕಿರಣ ತೋರಿದ್ದು ಉಂಟು. ಅಷ್ಟೇ ಅಲ್ಲ ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳೆ ಬೇಕಾಗುತ್ತದೆ ಎಂದು ಗೊತ್ತಾದ ಮೇಲೆ,ಇಗಾಗಲೆ ಒಪ್ಪಂದ ಮಾಡಿಕೊಂಡು ಹಣ ಪಾವತಿಸಿದ್ದ ಜಾಹಿರಾತು ಕಂಪನಿಗಳಿಗೆ ದಿಕ್ಕೆ ತೋಚದಂತಾಗಿದ್ದು ಸುಳ್ಳಲ್ಲ.ಒಪ್ಪಂದವನ್ನು ಮುರಿದುಕೊಳ್ಳ ಬೇಕೆ? ಇಲ್ಲಾ ಈಗ ಸುಮ್ಮನಿದ್ದು ಇನ್ನು ಬಾಕಿಯಿರುವ ಹಣವನ್ನಷ್ಟೆ ಕೈ ಬಿಡಬೇಕೆ? ಹೀಗೆ ಹಲವಾರು ಪ್ರಶ್ನೆಗಳು ಸದ್ದಿಲ್ಲದೆ ಚರ್ಚೆಯಾಗಿದ್ದರೂ ಸುದ್ದಿಯಾಗದಿರುವುದು ನಿಮಗರಿಯದೆ??ಅದು ಸಹಜ ಹಾಗು ಸಾಮಾನ್ಯ. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲುವುದೆ? ಸಾಧನಗೆ ಸಾಧಕರು ಯಾರಾದರೇನು? ಒಬ್ಬ ವ್ಯಕ್ತಿ ತನ್ನನ್ನು ಹೊತ್ತಿಕೊಂಡಿದ್ದರಷ್ಟೆ ಸಾಕ ಅದಕೆ! ಇದನ್ನು ಹೇಳುತ್ತಿರುವ ಉದ್ದೇಶ ಸಾಧನೆಯ ಕರಾಳ ಮುಖವನ್ನು ಬಿಂಬಿಸುವದಕ್ಕಲ್ಲ. ಆ ಆಟಗಾರನಿಗೆ ಈ ಎಲ್ಲಾ ಬೆಳವಣಿಗೆ ಬಗ್ಗೆ ತಿಳಿದಾಗ ಹೇಗಾಗಿರ ಬೇಡಾ? ತನ್ನ ಗೆಳೆಯರೊಬ್ಬರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ಖುಷಿ ಪಡಬೇಕೊ? ಇಲ್ಲಾ ತನ್ನ ದುರಾದೃಷ್ಟವನ್ನು ದೂರ ಬೇಕೊ? ತನ್ನ ಅಪಘಾತವನ್ನು ನೆನೆದು ದುಃಖಿಸ ಬೇಕೊ? ಇಲ್ಲಾ ತಾನಿಲ್ಲದಿದ್ದರೂ ಯಾರಿಗು ವ್ಯತ್ಯಾಸವಾಗದು ಎಂಬ ಸತ್ಯವನ್ನರಿತು ಹತಾಶನಾಗ ಬೇಕೊ??
                   ಇಷ್ಟೆ ಅಲ್ಲಾ! ನನಗೆ ಈ ಘಟನೆಯಲ್ಲಿ ವಿಚಲಿತನಾಗುವಂತೆ ಮಾಡಿದ ಸಂಗತಿ ಎಂದರೆ ಅಪಘಾತವಾದ ಕೆಲವು ದಿನಗಳ ನಂತರ ಆ ಆಟಗಾರರನ್ನ ಕಾಪಾಡಿದ್ದ ವ್ಯಕ್ತಿಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು,ಆ ವ್ಯಕ್ತಿಗೆ ತಾನು ಕಾಪಾಡಿದ್ದ ಮನುಷ್ಯ ಇಷ್ಟೊಂದು ಗೌರವಾನ್ವಿತರೆಂಬ ಸಂಗತಿ ತಿಳಿಯದಿದ್ದರೂ ಯಾವ ಅಪಾಯವನ್ನು ಲೆಕ್ಕಿಸದೆ ಅವರನ್ನು ರಕ್ಷಿಸಿದ್ದರು ಎಂದು ತಿಳಿದಾಗ ಅವರ ಮಾನವೀಯ ಗುಣವನ್ನು ಮೆಚ್ಚಿದೆ,ಆದರೆ ಆ ಆಟಗಾರನನ್ನು ರಕ್ಷಿಸುವಾಗ ಅಲ್ಲಿದ್ದ ಕೆಲವರು ಐಷಾರಾಮಿ ಕಾರನ್ನು ಗುರುತಿಸಿ ಯಾರೊ ದೊಡ್ಡ ಮನುಷ್ಯನೆಂಬುದನ್ನರಿತು ತುರ್ತಾಗಿ ಪ್ರಾಣವನ್ನು ಉಳಿಸಲು ಸಹಾಯ ಮಾಡದೆ ಆ ಕಾರಿನಲ್ಲಿದ್ದ ಬೆಲೆಬಾಳುವ ವಸ್ತು, ಹಣವನ್ನು ಕದ್ದರಲ್ಲ!! ಒಂದು ವೇಳೆ ಆಟಗಾರನನ್ನ ಕಾಪಾಡಿದ ವ್ಯಕ್ತಿ ಆ ಸ್ಥಳದಲ್ಲಿ ಇರದಿದ್ದರೆ ಏನಾಗ ಬಹುದಿತ್ತು?? ತನ್ನ ಕಣ್ಣ ಎದುರೆ ,ತನ್ನ ಪ್ರಾಣ ಹೋಗುತ್ತಿದ್ದರೂ,ಲೆಕ್ಕಿಸದ ಜನ ಹಣಕ್ಕಾಗಿ ಹಪಾಹಪಿಸುವುದನ್ನು ಕಂಡು ತನ್ನ ಸಾಧನೆಯ ಬಗ್ಗೆ ಜಿಗುಪ್ಸೆ ಹುಟ್ಟುತ್ತಿತ್ತೇನೊ??
                 ಸಾಧನೆ ವೇದನೆಗೆ ದಾರಿ ಮಾಡಿಕೊಡದಿದ್ದರಷ್ಟೆ ಅದಕ್ಕೊಂದು ಬೆಲೆ.ನಮ್ಮ ಅಸಹಾಯಕತೆ ಮತ್ತೊಬ್ಬರಿಗೆ ಅವಕಾಶಗಳನ್ನು ಕಲ್ಪಿಸುತ್ತದೆ ಎಂಬ ಸತ್ಯದ ಅರಿವು ನಮಗಿದ್ದರೆ ಮಾತ್ರ ಸಾಧನೆ ಅಥವಾ ಗೆಲವು ನಮ್ಮನ್ನು ನಾವಾಗಿರಲು ಬಿಡುತ್ತದೆ.ಗೆಲವು ಶಾಶ್ವತವಲ್ಲ! ಸೋಲು ಕೊನೆಯು ಅಲ್ಲ.

- ಮಂಜುನಾಥ್ ಮೇಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...