ಎಚ್ಚರಾಗು ಮೂಢಮನ
ಅರಿ ನಿನ್ನ ಆತ್ಮವನ
ಜಗದ ಜನರು ಎಲ್ಲಾ ಒಂದೆ
ಮರೆತೆ ಏಕೆ ನೀ ಅದನ?
ಜಗ ನೋಡದೆ ಕುರುಡಾಗಿರುವೆ
ಕುಬ್ಜನಾಗಿ ಬದುಕಿರುವೆ
ಜಾತಿ ಹೊಲಸ ನೀರಲಿ ಮಿಂದು
ಮಡಿ ಎಂದು ಬೀಗಿರುವೆ
ದೇವಗಿರದ ಮಡಿ ಮೈಲಿಗೆಯು
ಏಕೆ ಬಂತು ನಿನ್ನೆದೆಯೊಳಗೆ
ಮನುಜನಂತೆ ವೇಷ ತೊಟ್ಟು
ಅಲ್ಪನಾಗಿ ನೀ ಬದುಕಿರುವೆ
ಭಕ್ತಿಯಿರದ ಭಕ್ತನಹಾಗೆ
ಬಹಿರಂಗದಿ ನಟಿಸಿರುವೆ
ಒಳಗೆಲ್ಲ ಸ್ವಾರ್ಥ ತುಂಬಿ
ಕುರುಡನಾಗಿ ಅಲೆದಿರುವೆ
ಸರ್ವರನ್ನು ನಮ್ಮವರೆನ್ನು
ಜಗವೆಲ್ಲ ನಮಿಸುವುದು
ಜಾತಿ ಕ್ರಿಮಿ ನೀನಾಗಿದ್ದರೆ
ಜಗ ನಿನ್ನ ದೂರ ಇಡುವುದು.
- ಸಬ್ಬನಹಳ್ಳಿ ಶಶಿಧರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ