ಭಾನುವಾರ, ಫೆಬ್ರವರಿ 26, 2023

ನೀ ನನ್ನವಳೇ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಸತಿ ಹಿತ ಬಹುಸೋನೆ ಪತಿದೇವ
ಅದರಲ್ಲಿ ಕಾಣುವನು ಒಲಿದ ಭಾಗ್ಯವ
ದೇವರಲ್ಲಿ ಬೇಡುವನು ಕೈ ಮುಗಿದು ವರವ
ನಮ್ಮಿಬ್ಬರ ಬಾಂಧವ್ಯ ಹೀಗೆ ಇರಲಿ ಮಹಾದೇವ

ಹೆಂಡತಿಯ ಆಸೆಗಳಿಗೆ ಕುಂದು ತರದವ ಗಂಡ ಬಲು ಅಂದ
ಕೇಳುವನು ಆಕೆಗೆ ನೀನು ಸುಮಂಗಲೆಯಾಗಿರು ಚಂದ
ಅಂಗಗಳು ನಿನ್ನವಾದರೆ ಸಂಕೇತಗಳು ನನ್ನವು
ಕಾಣುವೆ ನನ್ನೊಲವೆ ನೀನು ರತಿದೇವಿಯ ವರವು

ತಲೆಯ ಜಡೆ ನಿನ್ನದಾದರೆ,
ಮುಡಿದ ಮಲ್ಲಿಗೆ ನನ್ನದು
ಹುಬ್ಬಿನ ಮೇಲಿರುವ ಹಣೆಯು ನಿನ್ನದಾದರೆ,
ರವಿಯಂತೆ ಹೊಳೆವ ಸಿಂಧೂರ ನನ್ನದು
ಸಂಪಿಗೆಯ ನಾಸಿಕವು ನಿನ್ನದಾದರೆ,
ನಕ್ಷತ್ರದಂತೆ ಮಿನುಗುವ ನತ್ತು ನನ್ನದು
ಕತ್ತು ನಿನ್ನದಾದರೇನಂತೆ,
ಹೋಲಾಡುವ ತಾಳಿಯ ಸೌಭಾಗ್ಯ ನಾ ಕೊಟ್ಟಿದ್ದಲ್ಲವೇ

ಕಮಲದ ಕೈಗಳು ನಿನ್ನವಾದರೆ,
ಮಿಂಚುವ ಬಳೆಗಳು ನನ್ನವು
ನವಿಲಿನ ನಡಿಗೆಯ ಕಾಲು ನಿನ್ನವಾದರೆ,
ಘಲ್ ಘಲ್ ಸದ್ದು ಮಾಡುವ ಗೆಜ್ಜೆ ನನ್ನವು
ಕಾಲ್ಬೆರಳುಗಳು ನಿನ್ನಾವಾದರೆ,
ಚಟ್ ಚಟ್ ಸದ್ದು ಮಾಡುವ ಕಾಲುಂಗುರ ನನ್ನವಲ್ಲವೇ

ಇವೆಲ್ಲವೂ ನನ್ನವುಗಳಾದರೆನಂತೆ,
ನೀನು ನನ್ನವಳಾಗಿರುವಾಗ
ಹೇ..ಸತಿ ಮನ್ಮಥಿಯೇ,
ನೀನೆ ನನ್ನ ಬಾಳಿನ ದೇವಿ

- ಬಿ.ಹೆಚ್.ತಿಮ್ಮಣ್ಣ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...