ಬುಧವಾರ, ಮಾರ್ಚ್ 1, 2023

ಅಧಿಕಾರದ ಕುರ್ಚಿ (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಎಲ್ಲರಲ್ಲೂ ಅಧಿಕಾರದ ಕುರ್ಚಿಯ ಮೋಹ
 ದೊರೆತಷ್ಟು ಬೇಕೆನ್ನುವ ತೀರದ ದಾಹ

 ಹೂವ ಹಾಸಿಗೆಯಲ್ಲ ಅಧಿಕಾರದ ಗದ್ದುಗೆಯದು
 ಸದಾ ಜಾಗೃತಗೊಳಿಸುವ ಕತ್ತಿಯ ಅಲುಗಂತಿಹುದು

  ಲಂಚ ಬ್ರಷ್ಟಾಚಾರದ ಕೂಪಕ್ಕೆ ಬಿದ್ದು
 ಮೆರೆಯದಿರು ದರ್ಪದ ಹೊದಿಕೆಯ ಹೊದ್ದು

 ತೂಗು ಕತ್ತಿಯು ಸದಾ ತೂಗುತ್ತಿರುವುದು ಜೋಕೆ
 ಕುರ್ಚಿಯದು ಸುಲಭದಿ ಸಿಗುವ ಸರಕಲ್ಲ ಮಂಕೆ

 ದರ್ಪ ದುರಹಂಕಾರದ ಗದ್ದುಗೆ ಏರಿ ಕುಳಿತು
 ಮೆರೆಯದಿರು ನೀ ಕಾಯಕನಿಷ್ಟೆ ಶ್ರದ್ಧೆಯ ಮರೆತು 

ನಿನ್ನಲ್ಲಿರುವ ಜ್ಞಾನ ವಿದ್ಯೆಗೆ ಭೂಷಣವಾಗಲಿ ಅಧಿಕಾರ
 ಆಗು ನೀ ಸ್ವಚ್ಛ ಸಮಾಜದ ನಿರ್ಮಾಣದ ಹರಿಕಾರ
 - ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...