ಮಿಡಿಯು ಬೆಳೆವ ಹಾಗೆ ಭುವಿಗೆ
ಅಣುವು ಆಗಿ ಬಂದೆವು
ನೀರು ಆವಿ ಆಗುವಂತೆ
ಗಾಳಿಯಾಗಿ ಹೊರಟೆವು
ಸ್ಪರ್ಧೆಗಿಳಿದ ಕುದುರೆಯಂತೆ
ಓಡುತಿಹವು ದಿನಗಳು
ಬೆಟ್ಟದಿರುವ ಬಂಡೆಯಂತೆ
ಕನಸು ಕದಲದಾದವು
ಕರಗ ಬೇಕು ಮೇಣದಂತೆ
ಉರಿದು ಬೆಳಕ ನೀಡುತ
ಮರವು ಫಲವ ನೀಡಿದಂತೆ
ಜಗಕೆ ನೆರಳೆ ಆಗುತ
ಹುಲಿಗೆ ಸಿಕ್ಕ ಜಿಂಕೆಯಂತೆ
ಬಡವನ ಉಸಿರುಗಟ್ಟಿದೆ
ಲಾವದಂತೆ ಪಿಡುಗು ನೂರು
ಮನವು ಬೆಂದು ಹೋಗಿವೆ
ಬೂದಿಯೊಳಗೆ ಕೆಂಡದಂತೆ
ಮೇಲಕೆಲ್ಲದು ಸರಿ ಇದೆ
ಉರಿಯು ನಂದೊ ಮಳೆಯ ಹಾಗೆ
ಉಕ್ತಿ ಶಕ್ತಿ ಬೇಕಿದೆ
- ತುಳಸಿದಾಸ ಬಿ. ಎಸ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ