ಗುರುವಾರ, ಮಾರ್ಚ್ 30, 2023

ನನ್ನವರು (ಕವಿತೆ) - ಸಬ್ಬನಹಳ್ಳಿ ಶಶಿಧರ.

ಇವರೆಲ್ಲರು ನನ್ನವರು
ದಿನಪಮಾನ ಮಾಡುವವರು
ಒಳಗೊಳಗೆ ಕುದಿವವರು
ಹೊರಗೆ ತೋರಗೊಡದವರು.

ಮಾನಾಪಮಾನಗಳು 
ದಿನ ನನಗವೆ ಬಿರುದುಗಳು
ಮೂದಲಿಕೆ ಮಾತುಗಳು
ನನ್ನೇಳಿಗೆ ಮಜಲುಗಳು.

ಅವರೆನ್ನ ಪರಮಾಪ್ತರು
ಮುಖಸ್ತುತಿಯ ಮನುಜರು
ಹಿಂದೆ ತೆಗಳಿ ಜರಿವವರು
ಮುಂದೆ ಹೊಗಳಿ ನಗುವವರು.

ನನಗವರೆ ಗುರು ಹಿರಿಯರು
ನನ್ನ ಬದುಕಿನ ಮಹಾಗಣ್ಯರು
ನನ್ನ ಹಾದಿಯ ಪುರುಷರು
ನನಗೆ ದಾರಿ ತೋರಿದವರು 

ಈ ಪೆದ್ದನ ತಿದ್ದಿದವರು 
ಪ್ರೀತಿಯಿಂದ ಕಂಡವರು
ಬದಲಾಗದ ನನ್ನವರು
ನನ್ನ ಬದಲು ಮಾಡಿದವರು.
   
     
- ಸಬ್ಬನಹಳ್ಳಿ ಶಶಿಧರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...