ಹೂವಿನೊಂದಿಗೆ ನಾರಿಗೂ ಸ್ವರ್ಗದ ಭಾಗ್ಯ
ಸಜ್ಜನರ ಸಹವಾಸದಿಂದ ಆಗಬೇಕಿದೆ ಯೋಗ್ಯ
ಎಲ್ಲಿಯ ಹೂವೊ ಯಾವ ಚರಕದ ದಾರವೊ
ಬಂಧ ಬೆಸೆದು ಮಾಲೆಯದು ಧನ್ಯವೊ
ಯಾವ ಕಡಲಲೆಯಲ್ಲೊ ಅಡಗಿದ್ದ ಲವಣ
ಯಾವುದೋ ಮನೆಯ ಪ್ರಸಾದದ ರುಚಿಗೆ ಕಾರಣ
ಯಾವ ಕಾಮಧೇನುವಿನ ಕ್ಷೀರವದು ತಾ
ಯಾವುದೋ ಹಸುಗೂಸಿಗೆ ಆಗುವುದು ಜೀವಾಮೃತ
ಯಾವುದೋ ತೋಟದಿ ಸೊಂಪಾಗಿ ಚಿಗುರಿದ ಮಾಮರ
ಯಾವ ಮರಿ ಕೋಗಿಲೆಯ ಕಂಠದಲಿ ಹೊರಟ ಸುಸ್ವರ
ಅದಾವ ಹೂದೋಟದಿ ಅರಳಿದ ಸುಮದ ಮಕರಂದ
ಅದಾವುದೋ ಭೃಂಗ ಸಂಗಕೆ ಸೋತು ಸವಿಜೇನಾದ ಅಂದ
ಪ್ರಕೃತಿಯ ಅಂಗಳದಿ ಪ್ರತಿ ಕಣಕಣವೂ ಧನ್ಯ
ಭಗವಂತನ ಮಡಿಲಿನಲಿ ಪ್ರತಿ ಜೀವಿಯು ಮಾನ್ಯ
- ಮಧುಮಾಲತಿ ರುದ್ರೇಶ್,
ಬೇಲೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ