ತೋಚಿದ್ದನ್ನು ಗೀಚಿದವನಲ್ಲ
ಕಂಡದ್ದು ಕಂಡ ಹಾಗೆ
ಇದ್ದದ್ದು ಇದ್ದ ಹಾಗೆ
ಜಗದೋಪಕಾರಕ್ಕೆ ಬರೆದವನು
ತುಂಬಾ ಹೆಚ್ಚಾಗಿ ಕಲಿತವನಲ್ಲ
ಪಂಡಿತರಷ್ಟು ತಿಳಿದವನಲ್ಲ
ತನಗೆ ತಿಳಿದದ್ದನ್ನು ತಿಳಿಹೇಳುವವನು
ಜಗವು ತಿಳಿಯಲೆಂದು ಹಾತೊರೆದವನು
ಹೆಂಡಸರಾಯಿ ಕುಡಿದವನಲ್ಲ
ಕುಡಿದರೂ ನಿಯಮ ಮೀರಿದವನಲ್ಲ
ಮದ್ಯಪಾನ ಹಾನಿಕಾರವೆಂದು ಹೇಳಿದವನು
ಕುಡಿಯಬೇಡಿರೆಂದು ಬೇಡಿಕೊಂಡವನು
ಬಾನಾಡಿಗಳಿಗೆ ಬಣ್ಣ ಹಚ್ಚಿದವನು
ಪ್ರಕೃತಿ ಅಂದದ ಗರಿಬಿಚ್ಚಿದವನು
ಖಗ-ಮೃಗಗಳ ಚರಿತ್ರೆ ಸೃಷ್ಟಿಸಿದವನು
ರೆಕ್ಕೆ ಇಲ್ಲದೆ ಬಾಣಂಗಳಕ್ಕೆ ಹಾರಿದವನು
ಕಾವ್ಯದ ಮುಖೇನ ಎಚ್ಚರಿಸುವವನು
ಮದ-ಮತ್ಸರವ ಬಿಟ್ಟು ಬಾಳಿದವನು
ಜಗದ ಒಳಿತಿಗೆ ಸದಾ ಚಿಂತಿಸುವವನು
ಕಾಣದ ಕಡಲಲ್ಲಿ ನಾವಿಕನಾದವನು
ಲೇಖನಿಯಲ್ಲಿ ಉತ್ತವನು ಕವಿ
ಕಥೆ- ಕವನಗಳ ಬಿತ್ತವನು ಕವಿ
ಪುಸ್ತಕದ ಬೆಳೆ ತೆಗೆದವನು ಕವಿ
ನಿಸರ್ಗದ ಅಂಗರಕ್ಷಕನು ಕವಿ.
- ಲಕ್ಷ್ಮಿ ಕಿಶೋರ್ ಅರಸ್,
ಯವಕವಿ ಹಾಗೂ ಆಂಗ್ಲ ಉಪನ್ಯಾಸಕರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ