ಮಂಗಳವಾರ, ಮಾರ್ಚ್ 21, 2023

ಹೊಸತನದ ಯುಗಾದಿ (ಕವಿತೆ) - ಶ್ರೀಮತಿ ಹೆಚ್. ಎಸ್. ಪ್ರತಿಮಾ.

 ಬೇವು ಬೆಲ್ಲವ ಸಮಾನವಾಗಿ ಸವಿಯುತ
 ಕಷ್ಟ ಸುಖವ  ಎದುರಿಸುವ ಶಕ್ತಿ ನೀಡಲುತಲಿ 
 ದುಃಖವ ಮರೆಯಲು ಶಕ್ತಿಯ ನೀಡುತಲಿ
 ಛಲದಿ ಬಾಳಲು ದೇವನು  ಆಶೀರ್ವದಿಸುತಲಿ//1//

 ಹಿಂದೂಗಳ ಹೊಸ ವರ್ಷವೂ ಇದು
 ಹೊಸ ಚಿಗುರಿನ ಅಂದದ ಗರಿಮೆಯಿದು 
 ಎಲ್ಲಡೆಯೂ ಸಂಭ್ರಮದಿ ಆಚರಿಸುತಲಿ
 ಒಬ್ಬರಿಗೊಬ್ಬರು ಶುಭ ಕೋರುತಲಿ//2//


 ಮುಂಜಾನೆಯಲಿ ಮೈತುಂಬ ಎಣ್ಣೆಹಚ್ಚುತಲಿ  
 ಬಿಸಿ ನೀರಿನ ಜಳಕವ ಮಾಡಿ ಶುದ್ಧರಾಗುತಲಿ 
ಪೂಜೆಯ ಮಾಡುತ  ದೇವನ ಸ್ಮರಿಸುತ
 ಎಲ್ಲಡೆಯು ಸಂಭ್ರಮದಿ ಒಂದುಗೂಡಿ ಆಚರಿಸುತ//3//

 ವಿಧವಿಧವಾದ ಭಕ್ಷ ಭೋಜನವನು ಮಾಡುತಲಿ
 ಸುಂದರ ವಾತಾವರಣದಲ್ಲಿ ಒಟ್ಟಾಗಿ ಸೇರುತಲಿ
 ಎಲ್ಲರೂ ಹೊಸ ಉಡುಪನ್ನು ಧರಿಸುತಲಿ
 ಹೊಸತನದ ಯುಗಾದಿಯನ್ನು ಆಹ್ವಾನಿಸುತಲಿ//4//

 ಹಳೆಯ ಕಹಿಗಳನ್ನೆಲ್ಲ ಮರೆಯುತಲಿ ಎಲ್ಲ
ಹೊಸತನದ  ಸಿಹಿಯನ್ನು  ಬಯಸುತಲಿ  ಮೆಲ್ಲ
 ಎಲ್ಲರೂ ಒಂದುಗೂಡುತಲಿ ಚಂದದಲಿ
 ಸಂತಸದಿ ಬಾಳೋಣ  ಆನಂದದಲಿ//5// 
- ಶ್ರೀಮತಿ ಹೆಚ್. ಎಸ್. ಪ್ರತಿಮಾ, ಹಾಸನ್, ಸಾಹಿತಿ. ಶಿಕ್ಷಕಿ. ಹಾಸನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...