ಸೋಮವಾರ, ಮಾರ್ಚ್ 20, 2023

ಮಾತುಗಳ ಹಪಾಹಪಿ (ಕವಿತೆ) - ಮೋಹನ್ ಬಸಪ್ಪನಾಯಕ.

ಮೌನದೊಳಗೆ ಮಾತು ಅರಳಿಸಿ
ನೋವ ಅಳಿಸುವೆ ಎಂದು
ನೆಚ್ಚಿ ನಿಂತಲ್ಲೇ ನಿಂತಿರುವೆ....,
ಕಾಲದ ಓಟಕ್ಕೂ ಲೆಕ್ಕಿಸದೆ
ಜಗವ ಮರೆತು ಆಗಿರುವೆ ನಾ ಕಲ್ಲು......!

ನಿನ್ನ ಸದ್ದು ಕೇಳಲು
ತವಕದಲಿ ತಲ್ಲಣಿಸುತ್ತ
ಕರೆ, ಸಂದೇಶದ ಕುತೂಹಲದಲ್ಲಿಯೇ
ನನ್ನ ಮೊಬೈಲ್ ಕೂಡ ಕಾದಿದೆ..,
ಬೇಸರವಿದ್ದರೂ ಅದು ಹೇಳಲು
ನಮ್ಮಂತೆ ಮಾತು ಕಲಿತ್ತಿಲ್ಲ.....!

ಹೂತಿಟ್ಟ ಆಸೆಗಳು
ಬೆಪ್ಪಾಗಿ ಬೇಸರವನ್ನೊದ್ದು
ಆನಂದವ ಮರೆತು ಬಿಟ್ಟಿವೆ.,
ಕೈತಪ್ಪಿದ ಆನಂದದ ಕುರುಹು
ಹುಡುಕಲು ನಿನ್ನಯ ಮಾತು
ತುರ್ತು ಬೇಕಾಗಿದೆ......!

ಎದೆಯ ನಾಟಿರುವ ಕೆಂಡಗಳ
ಕೊರಳ ಕತ್ತರಿಸಿ ಕನಸುಗಳ
ಬೆಳೆಸುವ ಧಾವಂತ ನನಗೆ.....,
ದಯೆ ತೋರಿ ಮೌನವನು
ಬದಿಗಿಟ್ಟು ಮಾತುಗಳ ಬುತ್ತಿಯೊಡನೆ
ಬಳಿಗೆ ಬಂದುಬಿಡು ಗೆಳತಿ......!


    - ಮೋಹನ್ ಬಸಪ್ಪನಾಯಕ
 ಡಿ. ಸಾಲುಂಡಿ (ಗ್ರಾ ), ಧನಗಳ್ಳಿ (ಅಂ), ಜಯಪುರ (ಹೋ ), ಮೈಸೂರು (ತಾ )&(ಜಿ )-570008


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...