ಸೊನ್ನೆ ಕಂಡುಹಿಡಿದವ ಆರ್ಯಭಟ
ಸಕಲ ಕಡೆ ನೀನೆ ಬಂಟ
ಆಕಡೆ, ಇಕಡೆ ಸಂಬಂದ ಬೆಳೆಸುವ ನಂಟ
ಗಣಿತದಲ್ಲಿ ಇದಕ್ಕೆ ಸೊನ್ನೆ
ನೀನು ಎಲ್ಲಿದ್ದರು ಮಾನ್ಯ
ನಿನ್ನ ಸ್ತಾನ ಅನನ್ಯ
ಹೇಳುವರು ನಿನಗೆ ಪುಜೆ
ನಿನ್ನ ಆಕಾರಕ್ಕೆ ಸದಾ ಪೂಜೆ
ದೇಶದ ಮೆಚ್ಚಿನ ಶ್ರೇಷ್ಟ ಪ್ರಜೆ
ನಿನ್ನ ನಾಮಕರಣ ಜೀರೊ
ಸ್ತಾನ ಪಲ್ಲಟವಾದರ ಹೀರೊ
ನಿಂದೆ ಎಲ್ಲ ಕಡೆ ದರ್ಬಾರು
ನಿನ್ನ ಆಕಾರ ದುಂಡ
ನೀ ಇಲ್ಲವಾದರ ದಂಡ
ನಿಜವಾಗಿಯೊ ನೀನು ಪ್ರಚಂಡ
ನಿನ್ನ ಅರಿತವರು ಜಾಣ
ಲೆಕ್ಕ ಶಾಸ್ತ್ರದಲ್ಲಿ ಹೊರಣ
ಸರ್ವ ಕ್ಷೇತ್ರದಲ್ಲಿ ಇರುವದು ನಿನ್ನ ಚರಣ
ಸಸಾರದಲ್ಲಿ ಪ್ರವೇಶ ಮಾಡಿದರೆ ಸಂಸಾರ
ಆಗಾಗ ತೋರುವೆ ಚಮತ್ಕಾರ
ನಿನ್ನ ಶಕ್ತಿ ಪ್ರಾಬಲ್ಯ ಅಪಾರ
ನಿನ್ನಿಂದ ಶಬ್ದಕ್ಕೆ ಅಲಂಕಾರ
ನೀನು ಸರ್ವ ವ್ಯಾಪ್ತಿಯ ಹರಿಕಾರ
ನೀನೆ ಜಗತ್ತಿನ ಓಂ ಕಾರ
- ಕಾಡಪ್ಪಾ ಮಾಲಗಾಂವಿ, ಶಿರೋಳ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ