ಮೊದಲು ನಾನು ಈ ಪುಸ್ತಕ ನೋಡಿದಾಗ ನನಗೆ ತುಂಬಾ ಖಷಿಯಾಯಿತು ಎಕೆಂದರೆ ಈ ಪುಸ್ತಕ ಓದಲು ಬಹಳ ಕಾತುರದಿಂದ ಕಾಯುತ್ತಿದ್ದೆ . ಮೊದಲು ಓದಲು ಶುರುಮಾಡಿದಾಗ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ ಮೊದಲ ಕಥೆಗಳು ಕೆಲವು ಪ್ರಶ್ನೆಗಳು ಹುಟ್ಟಿಸುವಂತಹ ಕಥೆಗಳು ಅವು ಯಾವುವು ಎಂದರೆ 1. ಮೊದಲನೇ ಕಥೆಗೆ ಸರ್ವೈವಲ್ ಬೆನಿಫಿಟ್ ಅಂತ ಟೈಟಲ್ ಯಾಕೆ ಇಟ್ಟರು,ಕಾರಣ ಏನು?
ಎರಡನೆಯ ಕಥೆ 3.5 ಕಥೆಯಲ್ಲಿ ಒಂದು ಹೆಣ್ಣಿನ ಸಹನೆ ,ತಾಳ್ಮೆ ಮತ್ತು ಅವಳ ಪರಿಶ್ರಮ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಕಥೆಯಲ್ಲಿ ಮೊದಲು ಓದಿದಾಗ ನನಗೆ ತಿಳಿಯಲಿಲ್ಲ ಮುಂದೆ ಓದಿದರೆ ತಿಳಿಯಬಹುದು ಎಂದು ಹೀಗೆ ಮುಂದೆ ಓದಿದೆ ಆವಾಗ ಸ್ವಲ್ಪ ತಿಳಿಯಿತು ಆಗ ಮತ್ತೆ ನಾನು ಮೊದಲಿನಿಂದ ಓದಿದೆ ಆವಾಗ ತಿಳಿಯುತ್ತ ಹೋಯಿತು ಈ ಕಥೆ ಓದುವಾಗ ನನ್ನ ಮೈ ಮನವೆಲ್ಲ ಒಂಥರಾ ರೋಮಾಂಚನ ಗೊಂಡಿತು ಮತ್ತೆ ಕಥೆಯ ಕೊನೆಯಲ್ಲಿ ಕಥೆಗಾರ ಓದುಗರಿಗೆ ಬೇಸರವಾಗಬಾರ್ದು ಎನ್ನುವ ಆಲೋಚನೆ ಕೂಡ ಕಂಡುಬರುತ್ತದೆ. ಮುಂದಿನ ಕಥೆ ಮುಳ್ಳು ಎನ್ನುವ ಕಥೆ ಮೊದಲಿಗೆ ಓದಿಕೊಂಡು ಹೋಗುವಾಗ ನನಗೆ ಹಸೀನಾ ಎಂಬ ಸಿನಿಮಾ ನೆನಪಿಗೆ ಬಂತು ಆಮೇಲೆ ಮುಂದೆ ಓದುತ್ತಾ ಹೋದಂತೆ ಇದರ ಕಥೆಯನ್ನು ಬೇರೆ ಅಂತ ಎಲ್ಲಿ ಒಬ್ಬ ಬಡ ಕುಟುಂಬದ ಪರಿಸ್ಥಿತಿಯನ್ನು ಕಥೆಗಾರರು ವಿವರಿಸಲಾಗಿದೆ.
ಮುಂದಿನ ಕಥೆಯಲ್ಲಿ ಪ್ರಸ್ತುತವಾಗಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮತ್ತು ಪ್ರಸ್ತುತ ಇರುವ ಸರ್ಕಾರದ ಬಗ್ಗೆ ಕಥೆಯ ಮೂಲಕ ಅದ್ಭುತವಾಗಿ ತಿಳಿಸಲಾಗಿದೆ ಹೀಗೆ ಮುಂದಿನ ಕಥೆ ಓದುತಿದ್ದೆ ಮುಂದಿನ ಕಥೆಯಲ್ಲಿ ಕಥೆಗಾರ ಪ್ರಸ್ತುತ ಆಧುನಿಕ ಜಗತ್ತಿನಲ್ಲಾದ ಬದಲಾವಣೆಗಳು ಅಂದರೆ ಡೆವಲಪ್ಮೆಂಟ್ ಅನ್ನು ಹೆಸರಿನಲ್ಲಿ ಜಗತ್ತಿನಲ್ಲಿ ದೊಡ್ಡ ದೊಡ್ಡ ಮಷಿನುಗಳು ಬಂದು ಅದೆಷ್ಟೋ ಬಡ ಜನರ ಬದುಕನ್ನೇ ಕಿತ್ತುಕೊಂಡಿದೆ ಒಂದು ಮಷೀನ್ ಬಂದು 100 ಜನರ ಕೆಲಸವನ್ನು ಕಿತ್ತುಕೊಂಡಿದೆ ಬೆಳವಣಿಗೆ ಅನ್ನೋದು ಜನ ಹಿತಕರ ಆಗಿರಬೇಕೇ ಹೊರತು ಜನರ ಹೊಟ್ಟೆ ಮೇಲೆ ಕಲ್ಲು ಹಾಕೊದು ಅಲ್ಲ ಈ ಕಥೆಯಲ್ಲಿ ಕಥೆಗಾರರು ಜಗತ್ತಿನಲ್ಲಾದ ಬೆಳವಣಿಗೆಯ ಹೆಸರಿನಲ್ಲಾದ ಬದಲಾವಣೆಯನ್ನು ಕಥೆಯ ರೂಪದಲ್ಲಿ ವಿವರಿಸಲಾಗಿದೆ.
ಮತ್ತು ಈ ಕಥೆಯ ಕೊನೆಯಲ್ಲಿ ಈಗಲೂ ಕೆಲವೊಂದು ಕಡೆ ಕೆಲವರನ್ನ ಜಾತಿಯ ಕಾರಣಕ್ಕು ಹಾಗೂ ರೋಹಿಂಗ್ಯ ಅನ್ನೋ ಕಾರಣಕ್ಕೆ ಅವರನ್ನು ಸಮಾಜದಿಂದ ದೂರವಿಡುತ್ತಿದ್ದಾರೆ ಎಂದು ವಿವರಿಸಲಾಗಿದೆ. ಈ ಮುಂದಿನ ಕಥೆಯಲ್ಲಿ ಕಥೆಗಾರರು ಪ್ರಸ್ತುತ ಸರ್ಕಾರಿ ಕಚೇರಿಗಳ ಬಗ್ಗೆ ಹೇಳಬೇಕೆಂದರೆ ಸರ್ಕಾರಿ ಕಚೇರಿಗಳು ದುಡ್ಡು ಸುಲಿಯುವ ಯಂತ್ರಗಳಾಗಿವೆ ಎಂದು ಇಲ್ಲಿ ಕಥೆಗಾರರು ಕಥೆಯ ಮೂಲಕ ವಿವರಿಸಲಾಗಿದೆ. ನಾನು ಕೊನೆಯ ಕಥೆಯನ್ನು ಓದುವಾಗ ಮೊದಮೊದಲಿಗೆ ಅನಿಸಿತು ಇದು ದೇವರ ಮೂಢನಂಬಿಕೆಗಳ ಬಗ್ಗೆ ಇರಬಹುದೆಂದು ತಿಳಿದಿದ್ದೆ ಆದರೆ ಮುಂದೆ ಓದುತ್ತಾ ಹೋದಂತೆ ಈ ಕಥೆಯಲ್ಲಿ 'ದೇವರ ಸೇವೆ' ನೋಡಿ ಇತ್ತೀಚಿಗೆ ನಡೆದ ಮುರುಗ ಮಠದ ಸ್ವಾಮೀಜಿಗಳ ಕಥೆ ತರಾನೇ ಇದೆ ಎಂದು ಅರ್ಥವಾಯಿತು ಮತ್ತೆ ಇವು ಕುತೂಹಲ ಮೂಡಿಸುವಂತಹ ಕಥೆಗಳಾಗಿವೆ ಈ ಪುಸ್ತಕ ಓದಿದರೆ ಈ ಕಥೆಗಳು ಪ್ರಸ್ತುತ ಜೀವನದಲ್ಲಿ ನಡೆಯುತ್ತಿರುವ ಘಟನೆಗಳು ನೆನಪಿಗೆ ಬರುತ್ತವೆ. ದಯಾನಂದ್ ಸರ್ ಕಥೆಗಳನ್ನ ತುಂಬಾ ಚೆನ್ನಾಗಿ ವಿಮರ್ಶಿಸಿದಿದ್ದಾರೆ . ಎಲ್ಲರೂ ಈ ಕಥೆಯ ಪುಸ್ತಕ ಓದಲೇ ಬೇಕಾದಂತಹ ಪುಸ್ತಕವಾಗಿದೆ.
- ಮಣಿಕ್ ಪಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ