ಮಂಗಳವಾರ, ಏಪ್ರಿಲ್ 11, 2023

ನನ್ನಾಕಿ ಚಂದನದಾಕಿ (ಕವಿತೆ) - ಬಸವರಾಜ್.ಎಚ್.ಹೊಗರನಾಳ.

ನನ್ನಾಕಿ ಅದಾಳ ಬೆಳ್ಳಕ್ಕಿಯ ಬಣ್ಣದಾಕಿ 
ಊರೆಲ್ಲ ಸುತ್ತಾಕಿ ಊರುರಿಗೆ ಹೋಗಕಿ...!

ನನ್ನಾಕಿ ಅದಾಳ ಅಂದವಾದ ಅಂದಗಾರ್ಥಿ
ಮಾತೀಲೆ ಮನಿಕಟ್ಟಾಕಿ ಮಾತಿಗೊಮ್ಮೆ ಹಳುವಾಕಿ ...!

ನನ್ನಾಕಿ ಅದಾಳ ನನ್ನ ನೋಡಿ ನುಲಿಯಾಕಿ
ಬಣ್ಣ-ಬಣ್ಣದ ಮಾತಾಡಿ ಬಣ್ಣ ಅಚ್ಚಿ ಹೋಗಾಕಿ...!

ನನ್ನಾಕಿ ಅದಾಳ ಮುಟ್ಟಿದರೆ ಮುನಿಯಾಕಿ
ಮಾತಿಗೊಮ್ಮೆ ಅಳುವಾಕಿ ಮನಸಿಗೆ ಬಂದಂತೆ ಮಾಡಾಕಿ...!

ನನ್ನಾಕಿ ಅದಾಳ ಸಾವಿರಕೆ ಒಬ್ಬಾಕಿ
ಸಾವಿರ ಸಾರಿ ಹುಡಿಕಿದರು ಸಿಗದಾಕಿ ಇಂತಾಕಿ...!

ನನ್ನಾಕಿ ಅದಾಳ ಬೆಳದಿಂಗಳಿನ ಬಣ್ಣದಾಕಿ
ಬೆಳತನಕ ಕಾಡಕಿ ಬೆಳಿಗ್ಗೆದ್ದು ನಗಿಸಾಕಿ...!

ನನ್ನಾಕಿ ಅದಾಳ ನಿಂತಲ್ಲೇ ನಿಲ್ಲುದಾಕಿ, ಸದ್ದಿಲ್ಲದೇ ಬರುವಾಕಿ
ಸುದ್ದಿ ಮಾಡಿ ಹೋಗಾಕಿ...!

ನನ್ನಾಕಿ ಅದಾಳ ಜಗಳ ಆಡುವ ಜಗಳಗಂಟೆ 
ತಿಳಿದಂಗ ಮಾಡಾಕಿ ತಿಳುವಳಿಕೆ ಹೇಳಾಕಿ...!

ನನ್ನಾಕಿ ಅನ್ನಾಕಿ ಎಲ್ಲಿರುವಳೋ ನಿನ್ನಾಕಿ
ಹೇಳಿದರೆ ಅನ್ನಾಕಿ ನಾನೇಕೆ ನಿನ್ನಾಕಿ...!

 - ಬಸವರಾಜ್.ಎಚ್.ಹೊಗರನಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...