ಮಂಗಳವಾರ, ಏಪ್ರಿಲ್ 11, 2023

ಮರು ಮೈತ್ರಿ (ಕವಿತೆ) - ಬಸವರಾಜ ಕರುವಿನ

ಮತ್ತೆ ಪ್ರೀತಿಸುವಾಸೆ.!
 ಮಲೆಯ ಮಾರುತದಂತೆ ಬರುವ ಅವಳ ನಗುವನ್ನ ವನರಾಶಿ ನಡುವೆ ಅರಳಿನಿಂತ ಮುಗ್ದ ಹೂವಿನಂತ ಮನವನ್ನ.!
ಜುಳು ಜುಳು ಹರಿವ ನೀರಿನಂತೆ ಭಾಸವಾಗುವ  ಗೆಜ್ಜೆಯ ನಾದವನ್ನ 
ನೋಟಕ್ಕೆ ನೋಟವು ತಾಗಿದಾಗ ಚಿಮ್ಮುವ ಲಜ್ಜೆಯನ್ನ.! 

ಮತ್ತೆ ಪ್ರೀತಿಸುವಾಸೆ.!
ಒರತೆ ನೀರಿನಷ್ಟೇ ಶುದ್ಧವಾದ ಅವಳ ಪ್ರೇಮವನ್ನ
ಜೋನಿ ಬೆಲ್ಲದಷ್ಟೇ ಸಿಹಿಯಾದ ಅವಳ ಸಾಂಗತ್ಯವನ್ನ
ಕೇಳಿದಷ್ಟು ಮುದ ನೀಡುವ ಸ್ವರದ ಲಾಲಿತ್ಯವನ್ನ
ಎದೆಗಪ್ಪಿದಾಗ ಬಿರಿವ ಸಾಹಿತ್ಯವನ್ನ .

ಮತ್ತೆ ಪ್ರೀತಿಸುವಾಸೆ ಅವಳೊಳಗಿನ ಚೈತನ್ಯದ ಚಿಲುಮೆಯನ್ನ.!
ಹೃದಯಗೋಳದ ಒಲುಮೆಯನ್ನ 
ಬೆಂದರೂ ಬೆರೆತು ಹೋಗುವ ಪ್ರೀತಿಯ ಕುಲುಮೆಯ ಕಾವನ್ನ

ಮತ್ತೆ ಪ್ರೀತಿಸುವಾಸೆ.!
ಅವಳಂತರಂಗದ ನೋವನ್ನ 
ಮೌನದಿ ಪಿಸುಗುಡುವ ಪಿಸು ದನಿಯನ್ನ
ನಾವೀನ್ಯತೆ ತುಂಬಿದ ನಲುಮೆಯನ್ನ
ಸಾಂತ್ವನ ತುಂಬಿದ ಒಲುಮೆಯನ್ನ.

- ಬಸವರಾಜ ಕರುವಿನ, ಬಸವನಾಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...