ನಿತ್ಯ ಜೀವನದಲ್ಲಿ ದುಡಿಯುವ ಎಷ್ಟೋ ಜನರಲ್ಲಿ, ಇವರು ಒಬ್ಬರು. ಪ್ರತಿದಿನ ಮನೆ, ಮಠ ಎಲ್ಲವನ್ನೂ ಬಿಟ್ಟು ಬೆಳ್ಳಗ್ಗೆ ಚಳಿ, ಗಾಳಿ, ಮಳೆ ಎನ್ನದೆ ಬಂದು ರಸ್ತೆ ಗುಡಿಸಬೇಕು. ಮನೆಗಳ ಮುಂದೆ ಎಸೆದಿರುವ ಗಬ್ಬು ನಾರುವ ಸತ್ತ ಇಲಿ, ಹೆಗ್ಗಣ ಎಲ್ಲವನ್ನೂ ಗುಡಿಸಬೇಕು. ಎಲ್ಲಾ ಮನೆಗಳ ತ್ಯಜ್ಯವನ್ನು ತಂದು ವಿಂಗಡಣೆ ಮಾಡುವರು. ನಮ್ಮ ದೇಶದ ಜನರು ತಮ್ಮ-ತಮ್ಮ ಮನೆಯ ಕಸವನ್ನು ವಿಂಗಡಣೆ ಮಾಡಲು ಸಮಯವಿಲ್ಲದೆ ಮತ್ತು ಅಸಹ್ಯ ಪಡುವ ಜನರ ಮಧ್ಯೆ ಯಾವುದೂ ಕೆಟ್ಟದಲ್ಲ, ಎಂದೂ ಎಲ್ಲಾ ಮನೆಯ ಕಸವನ್ನು ತಂದು ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವರು. ಪೌರಕಾರ್ಮಿಕರೇ ಯಾಕೆ ಈ ಕೆಲಸವನ್ನು ಮಾಡಬೇಕು?. ಶ್ರೀಮಂತ ಕಂಪನಿಗಳು, ಹೋಟೆಲ್ ಗಳು , ಕಾರ್ಖಾನೆಗಳು ಪ್ರತಿ ನಿಮಿಷಕ್ಕೆ ಸಾವಿರಾರು ಟನ್ ಗಳಷ್ಟು ತ್ಯಜ್ಯವನ್ನು ಭೂಮಿಗೆ ಬೀಸಾಡುವರು. ಇದನೆಲ್ಲ ಸ್ವಚ್ವಮಾಡುವವರು ಪೌರಕಾರ್ಮಿಕರು. ಇವರ ಸ್ಥಿತಿ ಹೇಗೆ ಇದೇ ಎಂದು ಯಾರಾದರೂ ಯೋಚಿಸುವರೇ? ನಮಗೆ ಮಾತ್ರವೇ ಆರೋಗ್ಯ ಇರುವುದು , ಅವರಿಗೆ ಆರೋಗ್ಯ ಇಲ್ಲವೇ. ತ್ಯಜ್ಯವನ್ನು ವಿಂಗಡಣೆ ಮಾಡುವಾಗ ಅದರಲ್ಲಿನ ವಿಷಕಾರಿ ಅಂಶಗಳಿಂದ 60 ಮಂದಿ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಇನ್ನೂ ಉಳಿದವರು ಹಲವಾರು ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಸರ್ಕಾರದಿಂದ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ.
ನಮ್ಮ ನಗರದ ಸುತ್ತಮುತ್ತಲು ಸ್ಚಚ್ಚ ಮಾಡುವ ಪೌರಕಾರ್ಮಿಕರನ್ನು ತುಂಬಾ ಕೀಳಾಗಿ ಕಾಣುವುದು ನೋವಿನ ಸಂಗತಿ. ಅವರು ಒಂದು ದಿನ ಕೆಲಸ ಮಾಡದೇ ಇದ್ದರೆ ನಗರಗಳು ಗಬ್ಬು ನಾರುತ್ತವೆ. ಕಸದ ಗುಂಡಿಯನ್ನು ನೋಡಿದರೆ ಮೂಗು ಮುಚ್ಚಿಕೊಂಡು ಹೋಗುತ್ತಾರೆ. ಕಸ ಬೀಸಾಡುವರೇ ಮೂಗು, ಬಾಯಿ ಮುಚ್ಚಿಕೊಂಡು ಹೋದರೆ. ಅದನ್ನು ಪ್ರತಿನಿತ್ಯ ಸ್ವಚ್ಚ ಮಾಡುವರು ಅದರ ವಾಸನೆಯನ್ನು ಕುಡಿಯುತ್ತಾ ಬದುಕಬೇಕಲ್ಲ ಎಂಬುದು ನೋವಿನ ಸಂಗತಿಯಾಗಿದೆ. ನಾವು ಬಿಸಾಡುವ ಕಸವನ್ನು ನಾವೇ ಸ್ವಚ್ಚ ಮಾಡಬೇಕು.
ಕಾರ್ಮಿಕರು ಬಳಸುವ ವಸ್ತುಗಳುನ್ನು ಸರ್ಕಾರ ಯಾಕೆ ಸರಿಯಾಗಿ ನೀಡುತ್ತೀಲ್ಲ. ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸೆ, ಶುಚಿತ್ವ ಸೌಲಭ್ಯ, ಸಮುವಸ್ತ್ರ, ಹ್ಯಾಂಡ್ ಗ್ಲೌಸ್, ಟೋಪಿ, ರಬ್ಬರ್ ಶೂಗಳು, ಪಾದರಕ್ಷೆ ಶುಚಿಗೊಳಿಸುವ ಸಾಧನ, ಪೊರಕೆ, ತರಿಮಣಿ, ಸನಿಕೆ, ಮಾಸ್ಕ್, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ. ಬಿದಿರಿನ ಬುಟ್ಟಿಗಳು, ತ್ಯಜ್ಯ ಸಾಗಾಣೆ ತಳ್ಳು ಬಂಡಿ, ಫಿನಾಯಲ್ ಹಾಗೂ ಬ್ಲೀಚಿಂಗ್ ಪೌಡರ್ ಸೇರಿ ಈ ಎಲ್ಲಾ ವಸ್ತುಗಳನ್ನು ಒದಗಿಸಬೇಕು. ಆದರೆ ಬಹುತೇಕ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಈ ಸೌಲಭ್ಯಗಳಲ್ಲಿ. ಊಟ ಮಾಡಲು ಸರಿಯಾದ ಸ್ಥಳವಿಲ್ಲದೆ, ರಸ್ತೆ, ಚರಂಡಿಯ ಬದಿಯಲ್ಲಿ ಊಟ ಮಾಡುತ್ತಾರೆ. ಇಂತಹ ಪರಿಸ್ಥಿತಿಗೆ ನಾವೇ ಕಾರಣವಾದೆವು. ಸರ್ಕಾರದಿಂದ ಅವರಿಗೆ ಯಾವುದೇ ಸೌಲಭ್ಯಗಳು ಸರಿಯಾದ ಪ್ರಮಾಣದಲ್ಲಿ ದೊರಕಿಲ್ಲ.
ವಿಗ್ರಹ ಸ್ಥಪನೆಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ, ಕ್ರೀಡಾಂಗಣಗಳು, ಸಭೆ ಸಮಾರಂಭಗಳು, ಇವುಗಳಿಗೆಲ್ಲ ಸರ್ಕಾರ ಅನಗತ್ಯವಾಗಿ ಹಣವನ್ನು ಖರ್ಚುಮಾಡುವ ಬದಲು ಪೌರಕಾರ್ಮಿಕರಿಗೆ ವಸತಿ, ನೀರು, ಆಹಾರ, ಶಿಕ್ಷಣ ಈ ಯೋಜನೆಗಳಿಗೆ ಬಳಸಬೇಕು. ಪೌರಕಾರ್ಮಿಕರು ಮತ್ತು ಮಲದ ಗುಂಡಿಯಲ್ಲಿ ಇಳಿಯುವ ಕಾರ್ಮಿಕರು ಯಾವ ವರ್ಗದವರು? ಸಾವಿರಾರು ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬಂದಿರುವರು. ನಮ್ಮ ಸಂವಿಧಾನ ಹೇಳುತೇ ಎಲ್ಲಾರು ಘನತೆ ಗೌರವದಿಂದ ಬದುಕುವುದು ಎಲ್ಲಾರ ಹಕ್ಕು ಎಂದು. ಆದರು ಅವರು ಇಂದಿಗೂ ಅದೇ ಕೆಲಸವನ್ನು ಮಾಡಿಕೊಂಡು ಬಂದಿರುವರು . ಮಲದ ಗುಂಡಿಯಲ್ಲಿ ಕೆಲಸ ಮಾಡುವಾಗ ಉಸಿರಾಡಲು ಗಾಳಿ ಸಿಗದೇ , ಅಲ್ಲಿನ ವಿಷದ ಗಾಳಿಯನ್ನು ಸೇವಿಸಿ ಪ್ರತಿವರ್ಷ ಕಾರ್ಮಿಕರು ಸಾವಿಗಿಡಾಗುತ್ತಾರೆ. ಅದರೊಳಗೆ ಇಳಿಸಲು ಮೆಷಿಗಳನ್ನು ತರಬೇಕು. ಮಲದ ಗುಂಡಿಯನ್ನು ಸ್ವಚ್ಚ ಮಾಡಲು ಯಾಕೆ ಕಾರ್ಮಿಕರನ್ನು ಬಳಸಿಕೊಳುತ್ತೀರಾ? ಅದರಲ್ಲಿ ಉಸಿರುಗಟ್ಟಿ ಸಾವನಪ್ಪಿದವರಿಗೆ ಸರ್ಕಾರದ ಪರಿಹಾರ ಸಾಕಾಗುವುದಿಲ್ಲ.
ಅವರಿಗೆ ವಾಸ ಮಾಡಲು ಮನೆಗಳು ಇಲ್ಲದೆ. ಶೌಚಾಲಯವಿಲ್ಲದೆ, ಸರಿಯಾದ ಪೌಷ್ಟಿಕ ಆಹಾರ ಸಿಗದೆ ಸಾಯುತ್ತಿದ್ದಾರೆ. ಪೌರಕಾರ್ಮಿಕರ ಹುದ್ದೆಯನ್ನು ಅತ್ಯಂತ ತಳಸಮುದಾಯದ ಜನರು ಮಾತ್ರ ಮಾಡುವ ಕೆಲಸ ಎಂದು ಭಾವಿಸಲಾಗಿದೆ. ಹಾಗಾಗಿ ಈ ಸಮುದಾಯ ಸಾಮಾಜಿಕವಾಗಿ ಇಂದಿಗೂ ನಾನಾ ರೀತಿಯಲ್ಲಿ ದೌರ್ಜನ್ಯ ಅವಮಾನಗಳಿಗೆ ಒಳಗಾಗುತ್ತಿದ್ದಾರೆ.ಇವರನ್ನು ಕಂಡರೆ ಮೂಗು ಮುಚ್ಚಿಕೊಂಡು ತಿರುಗುವ, ಕುಡಿಯಲು ನೀರು ಕೊಡದೆ, ಬಾಗಿಲಲ್ಲಿ ಕೂರಲು ಬಿಡದೆ, ಶೌಚಾಲಯಗಳಲ್ಲಿ ಬಳಸುವ ಚೆಂಬಲ್ಲಿ ನೀರು ಕೊಡುವರು, ಹಳಸಿದ ಅನ್ನವನ್ನು ಪ್ಲಾಸ್ಟಿಕ್ ಕವರಿನಲ್ಲಿ ನೀಡುವರು. ಇಂತಹ ಅಸ್ಪೃಶ್ಯತೆ, ಅಸಮಾನತೆ ಎಂಬ ಅನಿಷ್ಟ ಪದ್ದತಿಗಳು ತೊಲಗಬೇಕಾದರೆ ಪೌರಕಾರ್ಮಿಕರ ಮಕ್ಕಳು ಮುಂದೆ ಅದೇ ವೃತ್ತಿಯನ್ನು ಹಿಡಿಯದೆ ಚೆನ್ನಾಗಿ ಓದಿ ಉನ್ನತ ಸ್ಥನಕ್ಕೆ ಬೆಳೆಯಬೇಕು. ಅದಕ್ಕಾಗಿ ಅವರ ಮಕ್ಕಳಿಗೆ ಉನ್ನತ ಮಟ್ಟದ ತನಕ ಉಚಿತ ಶಿಕ್ಷಣವನ್ನು ಕೊಡಿ.
ಪೌರಕಾರ್ಮಿಕರಿಗೆ 9ಗಂಟೆಯ ಕೆಲಸವನ್ನು 6 ಗಂಟೆಗೆ ಇಳಿಸಿ ,ಕನಿಷ್ಠ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಪೊರಕೆ ಬದಲು ಪ್ರಶಸ್ತಿಗಳನ್ನು ನೀಡಿ ಜಾತಿ, ಅಸ್ಪೃಶ್ಯತೆ ಅಳಿಸಲು ಹೀಗಾದರು ಮುಂದಾಗಿ. ಇವರೆಲ್ಲರು ಗೌರವದಿಂದ ಬದುಕನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
- ಆಶಾ, ಎನ್. ಬೆಂಗಳೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ