ಗುರುವಾರ, ಏಪ್ರಿಲ್ 6, 2023

ನಡೆದಾಡುವ ದೇವರು (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಹಸಿದ ಹೊಟ್ಟೆಗೆ ಅನ್ನವ ಉಣಿಸಿ
ಅಜ್ಞಾನವ ಅಳಿಸಲು ಅಕ್ಷರವ ಕಲಿಸಿ
ಆಚೆ ನಿಂತವರಿಗೆ ಆಶ್ರಯ ಕಲ್ಪಿಸಿ 
ಅರಿವಿಗೆ ಗುರುವಾದ ತ್ಯಾಗಮಹಿ

ನಡೆದಾಡುವ ದೇವರು 
ಬಡವರ ಕಣ್ಣೀರೊರೆಸಿದ ಜಗದ್ಗುರು
ಪರರ ಬಾಳು ಬೆಳಗಲು ಹರಿಸಿದರು ಬೆವರು 
ಉಜ್ವಲಿಸಿದೆ ನಾಡಿನ ತುಂಬೆಲ್ಲ ಅವರ ಹೆಸರು 

ನುಡಿದಂತೆ ನಡೆದ ದೈವ 
ಕಾಯಕದಲ್ಲಿ ಕೈಲಾಸ ಕಂಡ ಜೀವ
ತಮ್ಮ ತತ್ವಗಳ ಮೂಲಕ ದೂರ ಮಾಡಿದರು ಜನರ ನೋವ 
ಬಸವ ತತ್ವವೇ ಅವರ ಬಾಳಿನ ಭಾವ

ಅವಿರ್ಭವಿಸು ಈ ಜಗದಲಿ ಮತ್ತೊಮ್ಮೆ ಗುರುವೇ 
ಅರಳಿಸು ನೊಂದವರ ಮೊಗದಲ್ಲಿ ಮತ್ತೊಮ್ಮೆ ನಗುವೆ
ನಿಮ್ಮ ಅಗಮನಕೆ  ಕಾಯುತ್ತಿದೆ ಜಗವೆ 
ಬಂದು ಬಿಡು ಒಮ್ಮೆ  ನಲಿವಾಗಿ ದೈವವೇ.

- ಬಸವರಾಜ ಕರುವಿನ, ಬಸವನಾಳು.

2 ಕಾಮೆಂಟ್‌ಗಳು:

  1. ತ್ರಿವಿಧ ದಾಸೋಹ ಮೂರ್ತಿಗಳಾದ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಕುರಿತು ತಾವು ರಚಿಸಿದ ನಡೆದಾಡುವ ದೇವರು ಕವಿತೆ ಬಹಳ ಅರ್ಥಗರ್ಭಿತವಾಗಿದೆ.ನಾಡಿನುದ್ದಗಲಕ್ಕೂ ಅಪಾರ ಭಕ್ತ ಸಮೂಹಕ್ಕೆ ಜೀವನಕ್ಕೆ ಬೆಳಕಾದ ಪೂಜ್ಯರು ನಮ್ಮ ನಿಜವಾದ ದೇವರು.ಅವರ ಆವಿರ್ಭವಕ್ಕೆ ನಾವೆಲ್ಲ ಕಾತುರರಾಗಿದ್ದೇವೆ.ನಿಮ್ಮ ಕವನದ ಆಶಯ ಮನಮುಟ್ಟುವಂತೆ ಮೂಡಿಬಂದಿದೆ ಸರ್ ತಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...