ಶುಕ್ರವಾರ, ಏಪ್ರಿಲ್ 14, 2023

ಶರದ್ಗಾನ (ಕವಿತೆ) - ಗುಲಾಬಿ ರಾಘವೇಂದ್ರ.

ಅನಂತ ನೋವುಗಳ ನುಂಗುತಿರುವೆ ನನ್ನೊಳು
ದಮನಿಸುವ ಕಲೆಯದು ಕಲಿಯಬೇಕು ಭವದೊಳು
ಅಂಬರದ ದಿನಪನು ಕ್ಷಯಿಸುವನು ಒಮ್ಮೊಮ್ಮೆ
ಕಾರ್ಮುಗಿಲು ಒಗ್ಗೂಡಿ ಅವನೆಡೆಗೆ ಧಾವಿಸಲು II

ನೆನಹುಗಳೇ ಬದುಕಿನ ಅಡ್ಡಗೋಡೆಗಳಾಗಿ
ಚಲಿಸುವ ಪಥವನು ತಡೆ ಹಿಡಿದು ಬಿಡುವವು 
ನೆನಪುಗಳ ಸಿಹಿ ಕಹಿಯ ಚಾದರವ ಮಡಿಸುತ್ತ
ಬೆಳದಿಂಗಳಿರುಳಿಗೆ ಮನವ ತೆರೆಯಬೇಕಿದೆ II

ನಾವಲ್ಲಿಯೇ ನಿಂತರೆ ಸಾಗದು ಜೀವನವು
ಬೀಸುತ್ತಲಿರಬೇಕು ತಿರುತಿರುಗಿ ಸುಳಿಗಾಳಿಯಂತೆ
ಮೆರೆಯುತಿಹ ಕಾರ್ಮುಗಿಲ ತಿಳಿಯಾಗಿಸಿ ಬಾನೊಳು 
ಮರೆಯಾದ ರವಿತೇಜನ ಸಹಿ ಹಾಕಿಸಬೇಕಿದೆ II

- ಗುಲಾಬಿ ರಾಘವೇಂದ್ರ, BEML ಕೆಜಿಎಫ್.


1 ಕಾಮೆಂಟ್‌:

ಶಿಕ್ಷಕರ ದಿನಾಚರಣೆ...

ಸೆ 5 ರಂದು ಶಿಕ್ಷಕರ ದಿನಾಚರಣೆ. ಎಲ್ಲಾ ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ. ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ...