ಹೆಣ್ಣುಮಕ್ಕಳ ಕಣ್ಮಣಿ
ಶ್ರೀ ಗಿರಿಯ ಸಿಂಹಿಣಿ
ಚೆನ್ನಮಲ್ಲಿಕಾರ್ಜುನನ
ಪ್ರಿಯ ಮಹಾದೇವಿ
ನಿನಗೆ ನಮೋ ನಮೊ
ಆತ್ಮಜ್ಞಾನವ ಬೋಧಿಸಿದೆ
ವಚನ ಸಾಹಿತ್ಯ ರಚಿಸಿದೆ ಅನುಭವ ಮಂಟಪದಿ
ಅಂಜದೆ ಅಳುಕದೆ ನಿಂದೆ
ದಿಟ್ಟೆದೆಯ ಜಾಣ ಹೆಣ್ಣೆ
ವೀರ ವಿರಾಗಿಣಿ ನೀನಾದೆ
ಶರಣ ಸತಿ ಲಿಂಗ ಪತಿ ಭಾವ
ಶಿವ ಶಕ್ತಿಯರ ಸಮ್ಮಿಳಿತ
ನೀನೆಂದು ತೋರಿಸಿದೆ
ಶರಣ ಬಳಗದ ಅಕ್ಕ ನೀನಾದೆ
ಕದಳಿ ವನ ಕರೆದಾಗ ಓಡಿದೆ
ಉಕ್ಕಿತು ಚೈತನ್ಯ ಚಿಲುಮೆ
ಮಲ್ಲಿಕಾರ್ಜುನನ ಹಿರಿಮೆ
ಅವನನಪ್ಪಿದ ಗರಿಮೆ
ಒಂದಾಯಿತು ಒಲುಮೆ
- ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ, ಪುಣೆ.
ತುಂಬಾ ಚೆನ್ನಾಗಿ ವಿವರಿಸಲಾಗಿದೆ, ಶ್ರೀಮತಿ ಯವರ ಕವಿತೆ ಅನ್ನಪೂರ್ಣ ಎಸ್ ಸಕ್ರೋಜಿ. ಧನ್ಯಾವಾದಗಳು ತಮಗೇ
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಅಳಿಸಿ