ವಿಜಯನಗರ ಜಿಲ್ಲೆಯ ಕೊಟ್ಟೂರಿನ ಹೊರವಲಯದಲ್ಲಿ ಕಂಡುಬರುವ ಇಂದು ಪದವಿ ಪೂರ್ವ ಮಹಾವಿದ್ಯಾಲಯವು ಕರ್ನಾಟಕದ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಅತ್ಯುತ್ತಮ ವಿದ್ಯಾಸಂಸ್ಥೆಯೆಂದರೆ ತಪ್ಪಾಗಲಾರದು. 2006ರಲ್ಲಿ ಪ್ರಾರಂಭವಾದ ಈ ವಿದ್ಯಾಸಂಸ್ಥೆಯು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಗೆ ಬದುಕಿನ ಮೌಲ್ಯಗಳನ್ನು ಸಹ ನೀಡುತ್ತಾ ಮತ್ತು ಬೆಳೆಸುತ್ತಾ ಬಂದಿದೆ. 2015ರಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆಯುವುದರ ಮೂಲಕ ಸಾಧನೆಯನ್ನು ಮೆರೆದ ಇಂದು ಪದವಿ ಪೂರ್ವ ಮಹಾವಿದ್ಯಾಲಯವು ಅಂದಿನಿಂದ ಇಂದಿನವರೆಗೂ ಸಹ ಪ್ರಥಮ,ರ‍್ಯಾಂಕ್‌ಗಳೆಂಬ ಸುವರ್ಣದ ಕಿರೀಟವನ್ನು ಧರಿಸುತ್ತಲೆ ಬಂದಿದೆ.
ನೋಡುಗರ ಕಣ್ಮನ ಸೆಳೆಯುವಂತಹ ಕಟ್ಟಡ ವಿನ್ಯಾಸ, ಗಾಳಿ ಬೆಳಕಿನಿಂದ ನವೀನವಾಗಿರುವಂತಹ ಕೊಠಡಿಗಳು
ಮಕ್ಕಳಿಗೆ ಉಳಿದುಕೊಳ್ಳಲು ಉತ್ತಮ ವ್ಯವಸ್ಥೆಯುಳ್ಳ ಹಾಸ್ಟೆಲ್ ಸೌಲಭ್ಯ.
ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಪ್ರಾಚಾರ್ಯರು ಮತ್ತು ಅನುಭವಿಗಳು ಸೃಜನಶೀಲರು ಉತ್ತಮದಲ್ಲಿ ಅತ್ಯುತ್ತಮವಾದ ಉಪನ್ಯಾಸಕರು, ಮಕ್ಕಳಿಗೆ ಪ್ರಾರಂಭದ ಹಂತದಿಂದಲೇ ದುಂಡಾದ ಬರಹವನ್ನು ಕಲಿಸುವುದರ ಮೂಲಕ ವಾರ್ಷಿಕ ಪರೀಕ್ಷೆಗಳನ್ನು ಯಾವ ರೀತಿ ಎದುರಿಸಬೇಕು ಮತ್ತು ಕೇಳುವಂತಹ ಪ್ರಶ್ನೆಗಳಿಗೆ ಯಾವ ರೀತಿಯಾಗಿ ಮೌಲ್ಯಯುತ ಉತ್ತರವನ್ನು
ಬರೆಯಬೇಕು ಎನ್ನುವುದನ್ನು ತಿಳಿಸಿ ತಾವು ಪರೀಕ್ಷೆಗಳನ್ನು ಎದುರಿಸುವಾಗ ಆದಂತಹ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ಮಕ್ಕಳ ವಾರ್ಷಿಕ ಪರೀಕ್ಷೆಗಳಲ್ಲಿ ಎಡವದಂತೆ ಮಾರ್ಗದರ್ಶನ ನೀಡಿ ಪರೀಕ್ಷೆಗಳಿಗೆ ಎಲ್ಲಾ ರೀತಿಯಿಂದಲೂ ಸಜ್ಜುಗೊಳಿಸುತ್ತಾರೆ.
ತರಗತಿಗಳಲ್ಲಿ ಪಾಠ ಬೋಧನೆ ಸಮಯದಲ್ಲಿ ಮಕ್ಕಳೊಂದಿಗೆ ಕೆಲ ಹಾಸ್ಯ ತುಣುಕುಗಳನ್ನು ಹಂಚಿಕೊಂಡು ತರಗತಿಗಳು ಬೇಸರವಾಗದಂತೆ ಮಕ್ಕಳ ಮನವನ್ನು ಹರ್ಷಗೊಳಿಸುತ್ತಾರೆ. ಹೆಚ್ಚು ಹೆಚ್ಚು ಕಿರುಪರೀಕ್ಷೆ, ಪರೀಕ್ಷೆಗಳನ್ನು ಕೈಗೊಳ್ಳುವುದರ ಮೂಲಕ ಮಕ್ಕಳಲ್ಲಿ ಇರುವಂತಹ ಪರೀಕ್ಷಾ ಭಯವನ್ನು ತೊಡೆದು ಹಾಕಿ ಮಕ್ಕಳು ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವಾಗ ಇದ್ದಂತಹ ಉತ್ಸಾಹವನ್ನು ಪರೀಕ್ಷೆ ಮುಗಿಸಿಕೊಂಡು ಬರುವಾಗಲೂ ಅದೇ ಉತ್ಸಾಹದಿಂದಿರುವಂತೆ ಉತ್ತಮ ಶಿಕ್ಷಣದ ಮೌಲ್ಯಯುತ ಬೋಧನೆಯ ಮಾರ್ಗದರ್ಶನ ನೀಡುತ್ತಾರೆ.
ಇಂದು ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗವಷ್ಟೆ ಅಲ್ಲದೆ ವಾಣಿಜ್ಯ ವಿಭಾಗ ಮತ್ತು ವಿಜ್ಞಾನ ವಿಭಾಗವು ಹೆಚ್ಚು ಹೆಚ್ಚು ಉತ್ತಮವಾಗಿರುವುದಲ್ಲದೆ ಈ ಬಾರಿ ವಿಜ್ಞಾನ ವಿಭಾಗದಲ್ಲಿ ಮತ್ತು ವಾಣಿಜ್ಯ ವಿಭಾಗದಲ್ಲಿಯೂ ರಾಜ್ಯಕ್ಕೆ ರ‍್ಯಾಂಕ್ ಪಡೆಯುವುದರ ಮೂಲಕ ತಮ್ಮ ಸಾಧನೆಯ ಕಿರೀಟವನ್ನು ಧರಿಸಿದೆ.
ಉತ್ತಮ ಪಾಠ ಬೋಧನೆ ಮಕ್ಕಳ ಕಠಿಣ ಪರಿಶ್ರಮ ಹೆತ್ತವರ ಪ್ರೋತ್ಸಾಹ ಮತ್ತು ಉಪನ್ಯಾಸಕರ ಬೆಂಬಲದಿಂದ ಮಕ್ಕಳು ಸತತವಾಗಿ 8 ಬಾರಿ ಪ್ರಥಮ ರ‍್ಯಾಂಕ್ ಗಳಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಲು ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ.
ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಸ್ಟ್ ಪಾಸಾಗಿ ಮತ್ತು ಸಪ್ಲಿಮೆಂಟರಿ ಪರೀಕ್ಷೆಗಳಲ್ಲಿ ಪಾಸಾಗಿ ಬಂದಂತಹ ವಿದ್ಯಾರ್ಥಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಇಂದು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅತ್ಯುತ್ತಮ ಅಂಕಗಳನ್ನು (ಡಿಸ್ಟಿಂಕ್ಷನ್,ರ‍್ಯಾಂಕ್) ಗಳಿಸಿದ ಉದಾಹರಣೆಗಳು ಇಂದುವಿನ ಅಂಗಳದಲ್ಲಿ ಸಾಕಷ್ಟಿವೆ.
ಇಂದು ಕಾಲೇಜಿನ ವಾತಾವರಣ ಮತ್ತು ಪ್ರಾಚಾರ್ಯರ, ಉಪನ್ಯಾಸಕರ ಮಾರ್ಗದರ್ಶನ ಖಂಡಿತವಾಗಿಯೂ ಮಕ್ಕಳ ಬದುಕನ್ನ ಬದಲಾಯಿಸಿಯೇ ಬದಲಾಯಿಸುತ್ತದೆ, ನೀವು ನಿಮ್ಮ ಮಕ್ಕಳ ಬದುಕನ್ನ ಉತ್ತಮಗೊಳಿಸುವಲ್ಲಿ ನಿಮ್ಮ ಆಯ್ಕೆ "ಇಂದು ಕಾಲೇಜ್" ಆಗಿರಲಿ.
- ಜುಂಜಿ ಹರ್ಷವರ್ಧನ.
ವಿಜಯನಗರ ಜಿಲ್ಲೆ, ಹೊಸಕೋಡಿಹಳ್ಳಿ
ಫೋ ನಂ :- 8431666679.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ