ಉತ್ತರ ಕನ್ನಡ ಜಿಲ್ಲೆಯು ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು . ಈ ಜಿಲ್ಲೆಯು ದಟ್ಟ ಅರಣ್ಯ, ಸರ್ವಕಾಲೀಕವಾಗಿ ಹರಿಯುವ ನದಿಗಳು ಇವಾಗಿವೆ ಮತ್ತು ಹೇರಳವಾದ ಸಸ್ಯ ಮತ್ತು ಪ್ರಾಣಿಗಳು ಸಂಪತ್ತಿದೆ ಕೃಷಿ / ತೋಟಗಾರಿಕೆ ಅಡಿಯಲ್ಲಿದೆ. ಜಿಲ್ಲೆ 12 ತಾಲೂಕುಗಳನ್ನು ಒಳಗೊಂಡಿದ್ದು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಸೂಪ(ಜೋಯಿಡಾ), ದಾಂಡೇಲಿ.
ಪ್ರೇಕ್ಷಣಿಯ ಸ್ಥಳಗಳು, ದೇವಸ್ಥಾನಗಳು ಹೆಚ್ಚು ಕಂಡು ಬರುತ್ತವೆ.ಬನವಾಸಿಯ ಮಧುಕೇಶ್ವರ ದೇವಸ್ಥಾನ, ಉಳವಿಯ ಉಳವಿ ಚನ್ನಬಸವೇಶ್ವರ ದೇವಸ್ಥಾನ, ಇಡಗುಂಜಿಯ ಸಿದ್ದಿವಿನಾಯಕ ದೇವಸ್ಥಾನ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಮುರ್ಡೇಶ್ವರದ ಮಥೋಬಾರ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನಗಳು ಜಿಲ್ಲೆಯ ಪ್ರಸಿದ್ಧ ಪೂಜಾ ಸ್ಥಳಗಳಾಗಿದ್ದು
ಜೈನ ಬಸ್ತಿ ಮತ್ತು ಸ್ವರ್ಣವಲ್ಲಿ ಮಠ, ಸೋಂದಾ ಕೋಟೆ, ಮಿರ್ಜಾನ್ ಕೋಟೆ ಮುಂತಾದವು ಪ್ರಾಚೀನ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಭಟ್ಕಳದಲ್ಲಿರುವ ಮಸೀದಿಯು ಅದ್ಭುತ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ.
ಈ ಎಲ್ಲ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆಂದು ಬರುವ ಬೇರೆ ಬೇರೆ ಭಾಗದ ಜನರು ಮತ್ತು ಸಿದ್ದಿ, ಗೌಳಿ ಜನಾಂಗಗಳ ಜೀವನ, ಸಂಪ್ರದಾಯ, ಸಂಸ್ಕೃತಿ ಕುರಿತಾಗಿ ಅಧ್ಯಯನ ಮಾಡಲು ಬರುವ ವಿದ್ಯಾರ್ಥಿಗಳಿಗಿಗೆ ಇದು ಹೊಸದಾದ ಪಯಣ ಆದ್ದರಿಂದ ಸಾರಿಗೆ ವ್ಯವಸ್ಥೆ ತುಂಬಾ ಮುಖ್ಯವಾಗುತ್ತದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿದಾರು ಸಾರಿಗೆ ವವ್ಯಸ್ಥೆಯ ಸಮಸ್ಯೆ ಕಾಡುವದಿಲ್ಲ ಬಸ್ ಇಲ್ಲದೆ ಹೋದರು ಸಹ ಆಟೋ, ಟಮ ಟಮಗಳಿಗೆ ಬಸ್ಸಿನ ನಿಗಧೀತ ದರಕಿಂತ ಒಂದ ಪಟ್ಟ ಹೆಚ್ಚಿಗೆ ನೀಡಿ ಅರಾಮದಾಯಕವಾದ ಪ್ರಯಾಣ ಮಾಡಬಹುದು.ಆದರೆ ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ವವ್ಯಸ್ಥೆಯ ಸಮಸ್ಯೆ ನೆನಪಿಸಿಕೊಂಡರೆ ಅಥವಾ ಆ ಸಮಸ್ಯೆಯನ್ನು ಅನುಭವಿಸಿದವರು ಈ ಉತ್ತರ ಕನ್ನಡ ಜಿಲ್ಲೆಯ ಸಾಹಸವಾಸವೇ ಬೇಡ ಎನ್ನುವಂತಿದೆ. ಕಾರಣ ಒಂದೋಂದು ತಾಲೂಕಿನಿಂದಲು ಒಂದು ಹಳ್ಳಿಗೆ ಹೋಗಬೇಕಾದರೆ ಆ ಹಳ್ಳಿಯ ಮುಖ್ಯ್ ರಸ್ತೆಯಿಂದ ಕಡಿಮೆ ಎಂದರು 3 ರಿಂದ 5 ಕಿಲೋಮೀಟರ್ ದೂರದಲ್ಲಿಯೇ ಬಸ್ ಗಳು ನಿಲ್ಲಿಸುತ್ತವೆ ಒಳ ಹೋಗಲು ಯಾವುದೇ ರೀತಿಯ ಪ್ರೈವೇಟ್ ಸಾರಿಗೆಗಳ ವ್ಯವಸ್ಥೆ ಬಹಳ ಕಡಿಮೆ ಇದ್ದು ಸಿಗೋದೇ ಕಮ್ಮಿ ಸಿಕ್ಕಿದ್ದಲ್ಲೇ ಆದಲ್ಲಿ ಮೂರು ಪಟ್ಟು ದರ ನೀಡಿ ಊರ ಪ್ರವೀಸಿಸಬೇಕು ಇಲ್ಲವಾದಲ್ಲಿ ನಡೆದುಕೊಂಡೆ ಹೋಗಬೇಕಾದ ಪರಿಸ್ಥಿತಿ ಇದೆ.
ಇಲ್ಲಿನ ಜನರ ಆರ್ಥಿಕ ಆದಾಯದ ಮೂಲವೇ ಮೀನುಗಾರಿಕೆಯಾಗಿದೆ.ಹೆಚ್ಚಿನ ಜನಸಂಖ್ಯೆಯು ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ತಮ್ಮ ಮುಖ್ಯ ಉದ್ಯೋಗವಾಗಿ ಕೈಗೊಳ್ಳುತ್ತದೆ. ಮುಖ್ಯ ಮೂಲ ಉದ್ಯೋಗಗಳಾದ ಕೃಷಿ, ಮೀನುಗಾರಿಕೆ, ಪಶುಪಾಲನೆ, ರೇಷ್ಮೆ ಕೃಷಿ, ತೋಟಗಾರಿಕೆ, ಜೇನುಸಾಕಣೆ ಮತ್ತು ಚರ್ಮದ ಕೆಲಸ ಇತ್ಯಾದಿಗಳಲ್ಲಿ ತೊಡಗಿಕೊಂಡವರೇ ಹೆಚ್ಚು. ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.
ಇವೆಲ್ಲಾ ಕೆಲಸ, ಕಾರ್ಯಗಳಿಗೂ ಸಾರಿಗೆ ವ್ಯವಸ್ಥೆ ಅತ್ಯಾವಶಖವಾಗಿದ್ದು ಕಾರಣ ಊರ ಬಿಟ್ಟು ಊರಿಗೆ ದುಡಿಯಲು ಹೋಗುವವರು ಅತೀ ಹೆಚ್ಚು ಹೆಣ್ಣುಮಕ್ಕಳು ಕಾಣಸಿಗುತ್ತಾರೆ ಅವರಿಗೆ ಹೊತ್ತಲ್ಲದ ಹೊತ್ತಿಗೆ ತಮ್ಮ ವಾಸಸ್ಥಳಕ್ಕೆ ಅರಾಮಾಗಿ ತಲಪಲು ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿಬೇಕಾಗಿದೆ.
ಜಿಲ್ಲೆಯ ಮುಖ್ಯ ಬುಡಕಟ್ಟುಗಳು ಸಿಧಿ, ಕುಣಬಿ, ಹಾಲಕ್ಕಿ ಒಕ್ಕಲಿಗ, ಗೊಂಡ ಮತ್ತು ಗೌಳಿ. ಸಿಧಿಗಳನ್ನು ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಗುಲಾಮರಾಗಿದ್ದವರು ಜನರ ಜೀವನ ಸ್ಥಿತಿ ಸಾಮಾಜಿವಾಗಿ, ಶೈಕ್ಷಣಿಕವಾಗಿ ಉತ್ತಮಗೊಳಿಸುವಲ್ಲಿ ಸಮುದಾಯದ ಸಂಘ, ಸಂಘಟನೆಗಳು ಮತ್ತು ಈಗೀಗ ಸರ್ಕಾರದ ಕೆಲವು ಯೋಜನೆಗಳು ಫಲ ನೀಡುತ್ತಿವೆಯಾದ್ದರಿಂದ ಪದವಿ ಶಿಕ್ಷಣ ಮಟ್ಟಿಗಿನವರಿಗೆ ಇತೀಚಿಗೆ ನಗರ ಜೀವನದ ಕಡಿಗೆ ಮುಖ ಮಾಡುತ್ತಿದ್ದಾರೆ ಅವರ ಶೈಕ್ಷಣಿಕ ಜೀವನ ಮತ್ತು ಸಾಮಾಜಿಕ ಜೀವನ ಬದಲಾವಣೆ ಗೊಳ್ಳಬೇಕಾದಲ್ಲಿ ಪ್ರಯಾಣಕ್ಕೆ ಸಾರಿಗೆ ವ್ಯವಸ್ಥೆ ಮುಖ್ಯ ಪಾತ್ರವನ್ನು ವಹಿಸುತ್ತದೆ ಆದ್ದರಿಂದ ಬಸ್ ಗಳ ವ್ಯವಸ್ಥೆ ಆಯಾ ಹಳ್ಳಿಯವರೆಗೂ ವಿಸ್ತರಿಸಬೇಕು ಮತ್ತು ಬಸ್ ತಂಗುದಾಣಗಳು ಸರಿಯಾಗಿ ನಿರ್ಮಿಸಬೇಕು ಮತ್ತು ಸೌಚಾಲಯದ ವ್ಯವಸ್ಥೆ ಮಾಡಬೇಕು.
ಸಿದ್ದಿ, ಗೌಳಿಜನಾಂಗಗಳ ಒತ್ತು ಜನಸಂಖ್ಯೆ ಸುಮಾರು ಹತ್ತು ಸಾವಿರ ಮತ್ತು ಸಾಮಾನ್ಯವಾಗಿ ಹಳಿಯಾಳ, ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳಲ್ಲಿ ಕಂಡುಬರುತ್ತದೆ ಇಷ್ಟು ಜನರ ಸಾಮಾಜಿಕ ಮತ್ತು ಸೈಕ್ಷಣಿಕ ಜೀವನ ಮಟ್ಟ ಸರಿ ಪಡಿಸಲು, ಹಾಗೂ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಬರುವ ಜನರ ಸುವವ್ಯಸ್ಥಿತ ಪ್ರಯಾಣಕ್ಕಾಗಿ.ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವತ್ತ ಈಗಿನ ಸಾರಿಗೆ ಸಂಸ್ಥೆ ಮತ್ತು ಸರ್ಕಾರದ ಕಾರ್ಯನಿರ್ವಹಿಸಬೇಕಿರುವದು ಅತ್ಯಗತ್ಯವಾಗಿದೆ.
- ರೇಣುಕಾ ಹನ್ನುರ್, ಕಲಬುರಗಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ