ಶನಿವಾರ, ಜೂನ್ 3, 2023

ಕಿತ್ತು ಹೋದ ಬದುಕು (ಕಿರು ಕತೆ) - ಸೌಜನ್ಯ ದಾಸನಕೊಡಿಗೆ.

ಆ ಗಿಡ ಮರ ಬಳ್ಳಿಗಳ ನಡುವೆಯಿದ್ದ ಹುಲ್ಲಿನ ಗರಿಯೊಂದಕ್ಕೆ ತನ್ನ ನಿಲುವಿನ ಕಾರಣದಿಂದ  ಅಸಮಾಧಾನಗೊಳ್ಳುತ್ತಿತ್ತು, ಮರಗಳ ಸದೃಢ ರೆಂಬೆಕೊಂಬೆಯನ್ನು ಕಂಡಾಗ ತನ್ನ ತೆಳ್ಳನೆಯ ಕಾಯವನ್ನು ಕಂಡು ಮರುಗುತ್ತಿತ್ತು, ಗಿಡಗಂಟಿಗಳ ಆಳಕ್ಕಿಳಿದ ಗಟ್ಟಿ ಬೇರುಗಳ ನೋಡುತ್ತ ತನ್ನ ಅತಿ ಸೂಕ್ಷ್ಮ ಬೇರುಗಳನ್ನು ಕಂಡು ಗಾಬರಿ ಬೀಳುತ್ತಿತ್ತು.
ತನ್ನನ್ನು  ಸಲೀಸಾಗಿ ಬುಡಸಮೇತ ಕಿತ್ತೆಸೆಯಬಹುದು ಎಂದು ಚಿಂತಿಸುತ್ತಿತ್ತು.

 ಅಂತೆಯೇ ಒಮ್ಮೆಆ ಪ್ರದೇಶ  ಬಿರುಗಾಳಿಯ ಅಟ್ಟಹಾಸಕ್ಕೆ ಒಳಗಾದಾಗ ,ಹುಲ್ಲುಗರಿ  ಬುಡ ಸಮೇತ ಕಿತ್ತುಕೊಂಡು ಹಾರಿ ಹೋಗಿ ಬಿತ್ತು. ದುಃಕ್ಕಿಸುತ್ತ ಸುತ್ತಲು ಕಣ್ಹಾಯಿಸಿದ ಆ ಹುಲ್ಲೆಳೆಗೆ  ಆಳಕ್ಕಿಳಿದ ಬೇರುಗಳು ಕಿತ್ತು ಮರಗಳು ಒಣಗುತ್ತಿದ್ದದ್ದು ಕಂಡಿತು, ರೆಂಬೆಕೊಂಬೆಗಳು ಮುರಿದು ಮತ್ತೆ ಚೇತರಿಸಿಕೊಳ್ಳಲಾಗದೆ  ಒದ್ದಾಡುವುದು ಮನವರಿಕೆಯಾಯಿತು ಆದರೆ ತನ್ನ  ಬೇರುಗಳು ಮಾತ್ರ   ಎಲ್ಲಿ ಬಿದ್ದಿತ್ತೊ ಅಲ್ಲಿಯೇ ಮಣ್ಣನ್ನು ಕಚ್ಚಿ ಹಿಡಿದು ನಿಂತು  ತೆಳ್ಳನೆಯ  ಹುಲ್ಲೆಸಳನ್ನು ಮತ್ತೆ ಮೊದಲಿನಂತೆ ಕಂಗೊಳಿಸುವಂತೆ ಮಾಡಿ ಬಿಟ್ಟಿತ್ತು.

ಕಿತ್ತು ಹೋದ ಬದುಕು ದುರ್ಬಲವಲ್ಲ, ಮತ್ತೆ ಬೇರೂರಿ ನಿಲ್ಲುವುದೆ  ಬಲ.

        - ಸೌಜನ್ಯ ದಾಸನಕೊಡಿಗೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...