ಪರಿಸರಕ್ಕೆ ನಿಮ್ಮ ಕೊಡುಗೆ ಏನಿದೆ? ಈ ವಿಷಯವು ಕುತೂಹಲ ಮೂಡಿಸುತ್ತದೆ. ಪರಿಸರಕ್ಕೆ ನಮ್ಮ ಕೊಡುಗೆ ಏನಿದೆ ಎಂದು ಯೋಚಿಸಿದರೆ ಒಂದು ಕಾಳು ಸಾಸಿವೆಯಷ್ಟು ಸಹಾ ಕೊಡುಗೆ ಏನು ಏನು ಇಲ್ಲ ಎಂದು ಸ್ಪಷ್ಟವಾಗುತ್ತದೆ. ಜೂನ್ ಐದನೇ ತಾರೀಕು ಬಂದರೆ *ಪರಿಸರ ದಿನದ ಶುಭಾಶಯಗಳು* ಎಂದು ಹೇಳುತ್ತಾ *ಒಂದು ಗಿಡ ನೆಟ್ಟು ಫೊಟೊ ನಾ ಸ್ಟೇಟಸ್ ಹಾಕಿ , ಮರು ದಿನ ಅದನ್ನು ಮರೆತುಬಿಟ್ಟು ಸುಮ್ಮನಾಗುತ್ತಿವಿ.* ಆದರೆ ಪರಿಸರಕ್ಕೆ ನಾವು ಇದುನ್ನೆನಾ ಕೊಡುಗೆ ನೀಡುತ್ತಿರೊದು ಎಂಬುದು ನನ್ನ ಪ್ರಶ್ನೆ? ಪ್ರತಿ ದಿನ ನಮಗೆ ತಿಳಿಯದಂತೆ ಬೆಳಗ್ಗಿನಿಂದ ರಾತ್ರಿಯ ತನಕ ಪ್ಲಾಸ್ಟಿಕ್ ಅನ್ನು ಬಳಸುತ್ತಲೇ ಇರುತ್ತಿವಿ ಉದಾಹರಣೆಗೆ:- ಚಪ್ಪಲಿ,ಬ್ರೆಷ್, ಬೆಲ್ಟು, ಬ್ಯಾಗ್, ಜಿಲೇಸ್ಟಿಕ್ ಬಟ್ಟೆ, ಮೊಬೈಲ್ ಕ್ಯಾಪ್, ಬಸ್ ಸೀಟು, ತರಕಾರಿ ಇತ್ಯಾದಿಗಳಿಗೆ ಪ್ಲಾಸ್ಟಿಕ್ ಕವರ್ ಇನ್ನು ಹಲವಾರು ರೀತಿಯಲ್ಲಿ ನಮಗೆ ತಿಳಿಯದೆ ಬಳಸುತ್ತಲೇ ಇರುತ್ತಿವಿ. ಆದರೂ ನಾವು ಒಂದ್ ಗಿಡ ನೆಟ್ಟು ಫೊಟೊ ಹಾಕಿ ಪರಿಸರ ದಿನದ ಶುಭಾಶಯಗಳು ಎಂದು ಹೇಳುತ್ತೇವೆ.
ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ಗಳು ಭೂಮಿಯಲ್ಲಿ ಕೊಳೆಯದೇ ಸಾವಿರಾರು ವರ್ಷಗಳು ತಟಸ್ಥ ರೀತಿಯಲ್ಲಿ ಉಳಿದುಬಿಡುತ್ತದೆ. ಒಬ್ಬರು ವ್ಯಕ್ತಿ ಮಾಡಿರುವ ಸತ್ಯ ಶೋಧನೆಯಲ್ಲಿ ಕಂಡು ಬಂದಿದೆ. ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟರಿ ನ್ಯಪ್ಕಿನ್ ಪ್ಯಾಡ್ ಗಳು ಒಂದು ವರ್ಷದಲ್ಲಿ ಹನ್ನೆರಡು ಬಿಲಿಯನ್ ಅಷ್ಟು ಪ್ಯಾಡ್ ಗಳು ಭೂಮಿಗೆ ಸೇರುತ್ತಿದೆ ಇದು ಭೂಮಿಯಲ್ಲಿ ಕೊಳೆಯುವುದಿಲ್ಲ. ಇದರಿಂದ ಭೂ ಮಾಲಿನ್ಯ ವಾಗುತ್ತದೆ. ಇನ್ನು ಪ್ರತಿನಿತ್ಯ ಚಿಕ್ಕ ಹಾಗು ದೊಡ್ಡ ಮಾರುಕಟ್ಟೆಯಲ್ಲಿ ಅಧಿಕವಾಗಿ ಪ್ಲಾಸ್ಟಿಕ್ ಕವರನ್ನು ಬಳಸುತಿದ್ದಾರೆ. ವಾಹನದ ಹೋಗೆ, ಕಾರ್ಖಾನೆ ಹೋಗೆ, ಕಲುಷಿತ ನೀರು ಇತ್ಯಾದಿಗಳು ನಮ್ಮ ಪರಿಸರವನ್ನು ಹಾಳು ಮಾಡಿ, ನಮ್ಮ ದೇಹಕ್ಕೆ ನಾನಾ ರೀತಿಯ ಕಾಯಿಲೆಗಳು ಬಂದು ನೂರು ವರ್ಷ ಬದುಕುವ ವ್ಯಕ್ತಿ ಐವತ್ತು ವರ್ಷಕ್ಕೆ ಸಾವನ್ನಪ್ಪುತಿದ್ದಾರೆ. ಇದನ್ನು ನಾವು ಇನ್ನು ಮುಂದೆ ಆದರೂ ಸರಿ ಪದಿಸಿಕೊಳ್ಳಬೇಕಿದೆ.
ನಾನು ಪ್ಲಾಸ್ಟಿಕ್ ಬಳಸದೇ ಇರಲು ಸಾಧ್ಯವೇ ಇಲ್ಲ, ಆದರೆ ಯಾವ ಯಾವ ರೀತಿಯಲ್ಲಿ ಪರಿಸರಕ್ಕೆ ಕೊಡುಗೆ ನೀಡಲು ಸಾಧ್ಯ? ಎನ್ನುವವರಿಗೆ ಇದು ಚಿಕ್ಕ ಉತ್ತರ.
ನಾವು ಪರಿಸರವನ್ನು ಉಳಿಸಬೇಕು ಎಂದರೆ ಪರಿಸರವಾದಿ ಆಗಲೇ ಬೇಕು ಎಂದೇನಿಲ್ಲ. ಪ್ರತಿದಿನ ಬಳಸುವ ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಬ್ಯಾಗ್ ಗಳನ್ನು ಬಳಸೋಣ , ಅಂಗಡಿಗೆ ಹೋಗುವಾಗ ನಾವೇ ಒಂದು ಬ್ಯಾಗ್ ತೆಗೆದುಕೊಂಡು ಹೋಗೋಣ. ನನ್ನ ಕೊಡುಗೆ:- ನಾನು ಸುಮಾರು ಆರೇಳು ತಿಂಗಳಿನಿಂದ ಅಂಗಡಿಗೆ ಹೋಗುವಗ ಮನೆಯಿಂದಲೇ ಕವರ್ ಅನ್ನು ತೆಗೆದುಕೊಂಡೆ ಹೋಗುವುದು, ಅಂಗಡಿಯಲ್ಲಿ ಕಾಳುಗಳಿಗೆ ಬಿಟ್ಟು ಬೇರೆಯಾವುದಕ್ಕು ಕವರ್ ಅನ್ನು ಪಡೆಯುವುದಿಲ್ಲ ಇದು ನನ್ನ ಕೊಡುಗೆ. ಹೀಗೆ ಹಲವಾರು ರೀತಿಯಲ್ಲಿ ಪರಿಸರಕ್ಕೆ ಚಿಕ್ಕದಾಗಿ ಕೊಡುಗೆ ನೀಡಬಹುದು.
- ದುರ್ಗೆಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ