ಜಗದ ಜಂಜಾಟವ ಕಳಚಿ
ಭವದ ಬಂಧನವ ಬಿಡಿಸಿ
ತ್ಯಾಗದ ಬದುಕಿಗೆ ನಾಂದಿಯ ಹಾಡಿ
ಜಗಕೆ ಬೆಳಕ ನೀಡಲು ಹೊರಟ ಮಹಾ ಮಹಿಮಾ ನೀನು
ಮಡದಿ ಮಕ್ಕಳ ತೊರೆದೆ
ರಾಜ್ಯ ವೈಭೋಗವ ಮರೆತೆ
ಬಂದ ಹಾದಿಗೆ ಸುಂಕವಿಲ್ಲವೆನುತ
ಆಸೆಯೇ ದುಃಖಕ್ಕೆ ಮೂಲವೆಂದ
ಮಹಾ ಮಾನವತಾವಾದಿ ನೀನು
ಕತ್ತಲೆಯ ಅಂಧಕಾರವ ಅಳಿಸಿ
ಬೆಳಕಿನ ಜ್ಯೋತಿಯ ಬೆಳಗಿಸಿ
ಮನುಜ ಮನುಜನೆಂಬುದ ತಿಳಿಸಿ
ದುಃಖ ದುಮ್ಮಾನ ಬಿಡಿಸಿ
ಅಮ್ಮು - ಬಿಮ್ಮು ಕೊನೆಗಾಣಿಸಿದ
ಮಹಾ ತಪಸ್ವಿ ನೀನು
ಮಾನವೀಯತೆ ಮೆರೆಸಿ
ಜ್ಞಾನಯೋಗಿಯಾಗಿ ನಿಂದು
ಅರಿವಿನ ಪಯಣವ ತೋರಿ
ಜಗದ ಬೆಳಕಾಗಿ ಯುಗಕೆ ಹೆಸರಾದ
ಯುಗಪುರುಷ ನೀನು
- ನಾಗರಾಜು.ಹೆಚ್.ಎಂ, ಮಧುಗಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ