ತಾಯಿಯ ಗರ್ಭ ಮಂದಿರದಲೊಂದು
ಸುಂದರ ಉತ್ಸವ ಮೂರ್ತಿ.....
ಮಗುವಿಂದ ತಾಯಾಗಿ.... ಕೊನೆಗೆ ಹಣ್ಣೆಲೆಯಾಗಿ
ಬೆಳಗುವಳು ಇವಳು..... ಕಾರುಣ್ಯ ಮೂರ್ತಿ.....
ಅಮ್ಮಾ....ಎಂಬ ತೊದಲಿಂದ ಶುರುವಾಗಿ
ಅಕ್ಕ ,ತಂಗಿ ,ಗೆಳತಿ ಮಗಳಾಗಿ ,ಸತಿಯಾಗಿ
ಗಂಡೆಂಬ ಗರ್ವಕ್ಕೆ ಗರಿಯಾಗಿ.....
ಅವನ ಬಾಳನ್ನು ಬೇಳಗೋ....ದಿವ್ಯ ಜ್ಯೋತಿ.....
ಹುಟ್ಟೆಂಬ ಮೈಲಿಗೆಯಲ್ಲಿ .......
ಹೆಣ್ಣೆಂಬ ಸೂತಕ ವಾಯಿತೆನ್ನುವ ಈ ಕಾಲದ
ಮತಿಗೇಡಿಗಳಿಗೆಲ್ಲಾ ಜನ್ಮ ಕೊಟ್ಟು
ಬದುಕು ಕಟ್ಟಿಕೊಟ್ಟ ಕಾರುಣ್ಯ ಮೂರ್ತಿ.....
ಕನಿಕರವಿಲ್ಲದ ಈ ಕಟುಕ ಸಮಾಜದೀ
ನೊಂದು, ಬೆಂದು, ನಲುಗಿ ಬೆಂಡಾಗುತ್ತಿದೆ
ಆದರೂ ಅಂತವರಿಗೆಲ್ಲಾ ಉಸಿರು ನೀಡಿ
ಕಾಪಾಡುವ ಕರುಣಾ ಮೂರ್ತಿ......
ಹೆಣ್ಣು ಜಗದ ಕಣ್ಣಾಗಿ.....
ನೀ.... ಮಣ್ಣಾಗಿ ಹೋಗುವವರೆಗೆ ಜೊತೆಯಾಗಿ....
ಹುಟ್ಟಿಂದ ಕೊನೆವರೆಗೆ ಕೈ ಹಿಡಿದು
ಕಾಪಾಡುವ ದೇವತೆಯೇ ನೀ .....ಕರುಣಾ ಮೂರ್ತಿ....
ಕಣ್ಣು ತೆರೆಯದ ಭ್ರೂಣವನ್ನು
ಹೊಸಕಿ ಹಾಕುವವರನ್ನೂ.... ಹೊಸಕಿಹಾಕಿ
ಮೆಟ್ಟಿ ನೀ ನಿಲ್ಲುವವರೆಗೆ ನಿನಗಿಲ್ಲ ಶಾಂತಿ
ಅಂಥವರಿಗೂ ನೀ ತಾಯಿ..... ಕರುಣಾ ಮೂರ್ತಿ....
ಭೂಮಿ ತೂಕದ ಹೆಣ್ಣು, ಸಹನೆ ಮೀರುವ ಮುಂಚೆ
ಗಂಡೆಂಬ ಗರ್ವದೀ ಮೆರೆವ ನಾವು ನೀವೆಲ್ಲಾ
ಯಾವುದಕ್ಕೂ ಸಮವಲ್ಲ ಎನ್ನುವ ಕಾಲವು
ಬಂದರೂ ಬರಬಹುದು ತಾಯಿ.....ನೀ ಕರುಣಾ ಮೂರ್ತಿ
- ಗಂಗಾಧರ್ ಗೌಡರ್, ಸಾರಿಗೆ ಇಲಾಖೆ ಧಾರವಾಡ(ದಾಸಬಾಳ).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ