ಮೊದಲನೆದಾಗಿ ಗಂಧದಗುಡಿ ಅಂತ ಕೇಳಿದಾಗ ನೆನಪಿಗೆ ಬರುವುದು ಡಾ.ರಾಜ್ ಕುಮಾರ್ ಅವರ ಗಂಧದಗುಡಿ ಇದರಲ್ಲಿ ಕಾಡನ್ನು ಉಳಿಸಿ ಎಂದು ಹೇಳುತ್ತಾರೆ .ಅಪ್ಪು ಈ ಗಂಧದಗುಡಿ ಸಿನಿಮಾ ಒಂದು ಸಾಕ್ಷ್ಯ ಚಿತ್ರವಾಗಿದ್ದು ಇದನ್ನು ಕಥಾಚಿತ್ರವಾಗಿ ಬದಲಾಯಿಸಿದರು.
ಈ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಆಗಿತ್ತು. ಇದು ಯುವ ಜನರಿಗೆ ಗಿಡನೆಡಲು ಹಾಗೂ ಕಾಡನ್ನು ಸಂರಕ್ಷಣೆಯ ಅರಿವಿಗಾಗಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಾಡು ಹಾಗೂ ಅಲ್ಲಿನ ಪರಿಸರ ಪ್ರಾಣಿಗಳ ಬಗ್ಗೆ ಪರಿಚಯಿಸುತ್ತಾ ಹೋಗುತ್ತಾರೆ.
ಅಪ್ಪು ಅವರು ಕಾಡನ್ನು ಅನ್ವೇಷಣೆ ಮಾಡುತ್ತಾ ಹೋಗುತ್ತಾರೆ. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್
ಅವರು ಹುಟ್ಟಿದ ಊರು,ಬೆಳೆದ ಮನೆ,ಅವರು ವಿಶ್ರಾಂತಿ ತೆಗೆದು ಕೊಳ್ಳುತ್ತಿದ ದೊಡ್ಡ ಆಲದ ಮರ
ಎಲ್ಲಾವನ್ನು ಅಪ್ಪು ಅವರು ಮೆಲುಕು ಹಾಕುತ್ತಾರೆ. ಬರೀ ಕಾಡಿನ ಬಗ್ಗೆ ಅಲ್ಲದೆ ಸಮುದ್ರ ದಲ್ಲಿ ವಾಸ ಮಾಡುವ ಜೀವಿಗಳನ್ನು ಅನ್ವೇಷಿಸುತ್ತಾರೆ.ಈ ಸಿನಿಮಾವನ್ನು ನಿರ್ದೇಶಕರಾದ ಅಮೋಘ ಹರ್ಷ ಅವರು ಅವರಿಗೆ ಕಾಡಿನಲ್ಲಿ ಆದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅಮೋಘ ಹರ್ಷ ಹಾಗೂ ಅಪ್ಪು ಅವರು ಒಂದು ಒಳ್ಳೆಯ ಉತ್ತಮ ಸ್ನೇಹಿತ ರಂತೆ ಇದ್ದರು.ಅಪ್ಪು ಅವರಿಗೆ ಕಾಡನ್ನು ಜೀವ,ಜೀವನ,ಕುಟುಂಬ,ಅವರ ಸಿನಿಮಾಗಳ ಬಗ್ಗೆ ಎಷ್ಟು ಒಲವು ಹಾಗೂ ಕನಸಿತ್ತು ಎಂದು ಈ ಸಿನಿಮಾದ ಮೂಲಕ ತಿಳಿದು ಕೊಳ್ಳಬಹುದು.ಸಿನಿಮಾ ಕೊನೆಯಾಗುತ್ತಾ ಇದಂತೆ ಒಂದು ಮಾತು ಹೇಳುತ್ತಾರೆ
ಆ ಮಾತು ಎಲ್ಲಾರ ಕಣ್ಣಂಚಿನಲ್ಲೂ ನೀರು ಬರುತ್ತದೆ.ಆದರೂ ಕೊನೆಯ ಬಾರಿ ಪರಮಾತ್ಮ ನನ್ನು ತೆರೆಯ ಮೇಲೆ ನೋಡಿದ್ದು ನನಗೆ ಸಂತೋಷವಾಯಿತ್ತು.ಈ ಸಿನಿಮಾ ಯಾಕೆ ನೋಡ ಬೇಕು ಎಂದರೆ ಕಾಡನ್ನು ಹಾಗೂ ಅನೇಕ ಪ್ರಾಣಿಗಳ ಬಗ್ಗೆ ಹೇಳುತ್ತಾರೆ.ಅವರ ಅನುಭವಗಳನ್ನು ಅವರ ಮಾತುಗಳ ಮೂಲಕ ತಿಳುಸುತ್ತಾರೆ.ಯಾವುದೇ ಪೈಟ್ ಸಿನ್,ಹಾಡು,ಲವ್ ಸ್ಟೋರಿ ಇಲ್ಲದೆ ಕಾಡು,ಪರಿಸರ,ಜಲಪಾತಗಳ ಮಧ್ಯ ತೆಗೆದಿರುವ ಡಾಕ್ಯುಮೆಂಟರಿ ಸಿನಿಮಾ ಇದಾಗಿದೆ.
- ಪ್ರಾರ್ಥನಾ ಕೆ.ಎಂ ಕಲ್ವಮಂಜಲಿ, ಕೋಲಾರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ