ತೊಗರಿ ನಾಡು ಕಲಬುರ್ಗಿ ಜಿಲ್ಲೆಯ ಯುವ ಸಾಹಿತಿಗಳು ಹಾಗೂ ಓದುಗರ ಮನ ಗೆದ್ದ ಡಾ, ಮಲ್ಲಿನಾಥ ತಳವಾರ ಯವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಮೂಡಿಸಿದವರು, ನೂತನ ಮಹಾ ವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಗೀತಾ ನಾಗಭೂಷಣ ಚೆನ್ನಣ್ಣ ವಾಲೀಕಾರ ಯಂತಹ ಸಾಹಿತ್ಯ ಬ್ರಹ್ಮರಿಗೆ ಜನ್ಮ ನೀಡಿದ ಶರಣರು ಸೂಪಿ ಸಂತರು ನಡೆದಾಡುವ ಪುಣ್ಯಭೂಮಿಯಲ್ಲಿ, ಕಲಬುರ್ಗಿ ಜಿಲ್ಲೆಯ ಡಾ, ಮಲ್ಲಿನಾಥ್ ತಳವಾರ ಯವರು ಗಜಲ್ ಯಾತ್ರೆಯಲ್ಲಿ ಸಾಗಿದ್ದಾರೆ ಮುಂದೆ ಮುಂದೆ ಒಂದೊಂದು ಅರ್ಥ ನೂರಾರು ಅರ್ಥಗಳಿಗೆ ಸಮ ತಮ್ಮ ಜೀವನದಲ್ಲಿ ನಡೆದ ಘಟನೆ ಹಾಗೂ ಭಾವನೆಗಳನ್ನು ಗಜಲ್ ರೂಪದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಹೃದಯ ತಟ್ಟುವ ಗಜಲ್ ಅಂದರೆ ತಪ್ಪಾಗಲಾರದು,,
ಅಸಹಾಯಕತೆಯನ್ನು ಸದೆಬಡೆದು ನಿಂತವರು ನೀವು,
ಶೋಷಣೆವಿರುದ್ಧ ಸೆಟೆದು ನಿಂತವರು ನೀವು,
ಜೋಪಡಪಟ್ಟಿಯ ಕರಾಳತೆಯನ್ನು ನಗ್ನಗೊಳಿಸಿ ದಿರಿ,
ಲಿಂಗ ತಾರತಮ್ಯವನ್ನು ಜಡಿದು ನಿಂತವರು ನೀವು,
ನಾಡು ಕಂಡ ಅಪ್ರತಿಮ ಸಾಹಿತಿ ಬಂಡಾಯದ ಬೆಂಕಿ ಹಚ್ಚಿ ನಾಡಿಗೆ ಬೆಳಕು ನೀಡಿದ ಡಾ. ನಾಡೋಜ ಗೀತಾ ನಾಗಭೂಷಣ ಅವರು ಒಬ್ಬರು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯ ಮೇಲು-ಕೀಳು ಬೇದ ಭಾವ ಗಳ ವಿರುದ್ಧ ಸಾಹಿತ್ಯದ ಮೂಲಕ ಜನರನ್ನು ಎಚ್ಚರಗೊಳಿಸಿದವರು ಬಡತನದ ರೇಖೆಯಲ್ಲಿ ನರಳುತ್ತಿರುವ ಮುಗ್ಧ ಜನರ ಪರವಾಗಿ ಹೋರಾಟ ಮಾಡಿದವರು ಹೆಣ್ಣು ಗಂಡು ನಡುವೆ ತಂದೆ ತಾಯಿಗಳ ಶೋಷಣೆಯನ್ನು ಎತ್ತಿ ತೋರಿಸಿದವರು ದೇಶಿಭಾಷೆಯಲ್ಲಿ ಸಾಹಿತ್ಯ ಮೂಲಕ ಮನ ತಟ್ಟಿದವರು ಬಡತನದಲ್ಲಿ ನರಳಿ ನರಳಿ ಸಾಯುವ ಮೂಕ ವೇದನೆಯನ್ನು ತಮ್ಮ ಹರಿತ ಲೇಖನಿಯಿಂದ ಬೆಳಕು ತಂದವರು,
ದೇವರ ಆಶೀರ್ವಾದದಿಂದ ಮಗು ಪಡೆದರು,
ದೇವಾಲಯದಲ್ಲಿ ಅನ್ನಕ್ಕಾಗಿ ಕುಂತರು
ಮಕ್ಕಳು ಅಂದರೆ ತಂದೆ ತಾಯಿಗೆ ತುಂಬಾ ಪ್ರೀತಿ ತಮ್ಮ ಜೀವನವನ್ನು ಮಕ್ಕಳಿಗೋಸ್ಕರ ಹಗಲು ಇರುಳು ಎನ್ನದೆ ತ್ಯಾಗ ಮಾಡಿದವರು ಶಿಕ್ಷಣ ಮದುವೆ ಮಾಡುವುದರಲ್ಲಿ ಅರ್ಧ ಆಯಸ್ಸು ಮುಗಿದು ಹೋಗುತ್ತದೆ, ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಲ್ಲಿ ಇರುತ್ತಾರೆ ಈ ಸಂತೋಷದ ಸಮಯ ಬಹಳ ದಿವಸ ಇರುವುದಿಲ್ಲ ಹೆಂಡತಿ ಬಂದ ಮೇಲೆ ತಂದೆ ತಾಯಿಯ ಪರಿಸ್ಥಿತಿ ಹೇಳತೀರದು ಸರಿಯಾದ ಪ್ರೀತಿ ಮಮತೆ ತೋರದೆ ವೃದ್ದಾಶ್ರಮಕ್ಕೂ ಅಥವಾ ಬೀದಿಯಲ್ಲಿ ಭಿಕ್ಷೆ ಬೇಡಲು ಅಲೆಯುತ್ತಾರೆ ಮಕ್ಕಳು ತನ್ನವರು ನಂಬಿಕೆ ಇಡುವ ತಂದೆ ತಾಯಿ ಭಿಕಾರಿ ಯಾಗಿ ಬೇರೆಯವರ ಮುಂದೆ ನಿಲ್ಲುತ್ತಾರೆ,
ನಮ್ಮ ಬದುಕು ನಂದನವನವಾಗಲು ಬೇಕು ನಮಗೆ
ಹಸಿರು,
ಮುಂಬರುವ ಪೀಳಿಗೆ ಉಸಿರಾಡಲು ಬೇಕು ನಮಗೆ ಹಸಿರು,
ಅನಾದಿ ಕಾಲದಿಂದ ಹಿರಿಯರು ಪರಿಸರವನ್ನು ಪ್ರೀತಿಸಿದವರು ಪರಿಸರದಲ್ಲಿ ತಮ್ಮ ಅವರ ಜೀವನ ಅಡಗಿತ್ತು, ಹೊಲದ ಬದುವಿನಲ್ಲಿ ಮನೆಯಂಗಳದಲ್ಲಿ ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸಿ ಉತ್ತಮವಾದ ಹಾಗೂ ಶುದ್ಧವಾದ ವಾತಾವರಣ ಮಾಡಿದವರು ಯಾವುದೇ ರೋಗರುಜಿನ ಇಲ್ಲದೆ ಆರೋಗ್ಯವಂತರಾಗಿ ಜೀವನ ಮಾಡಿದವರು ಅದೇ ರೀತಿ ನಾವು ಕೂಡ ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋಣ,
ನೀರಿಗಿಂತಲೂ ರಕ್ತ ಗಟ್ಟಿ ಎನ್ನುವರು,
ರಕ್ತ ಹೊಳೆಯಾಗಿ ಹರಿಯುತ್ತಿದೆ ದುಡ್ಡಿಗಾಗಿ,
ನೀರು ಒಬ್ಬನ ಜೀವ ಉಳಿಸಿದರೆ ಹಣಕ್ಕಾಗಿ ಜೀವ ತೆಗೆಯುತ್ತಾರೆ ಸಣ್ಣಪುಟ್ಟ ಕಾರಣಕ್ಕಾಗಿ ನಾನಾ ರೀತಿಯಲ್ಲಿ ಜೀವ ತೆಗೆದು ರಕ್ತದ ಹೊಳೆಯಾಗಿ ಹರಿಯುತ್ತಿದೆ ಮಾನವನಲ್ಲಿ ಇರಬೇಕಾದ ಪ್ರೀತಿ ವಿಶ್ವಾಸ ದಯೆ ಕರುಣೆ ಸೌಹಾರ್ದತೆ ಮಾನವೀಯತೆ ಮಾಯವಾಗಿ ಮೋಸ ವಂಚನೆ ನಂಬಿಕೆದ್ರೋಹ ತುಂಬಿಕೊಂಡಿವೆ ಯಾವ ರೀತಿಯಾದರೂ ನಡೆಯುತ್ತಿವೆ,
ಹಗಲಿರುಳು ಒಂದೇ ಆಗುತ್ತಿದೆ ದುಡ್ಡಿಗಾಗಿ,
ಶಾಂತಿ ನೆಮ್ಮದಿ ಹರಾಜಾಗುತ್ತಿದೆ ದುಡ್ಡಿಗಾಗಿ,
ಜೀವನ ಬರೀ ಹಣದ ಮೇಲೆ ನಿಂತಿದೆ ಪ್ರತಿಯೊಂದಕ್ಕೂ ಹಣ ಮೇಲೆ ಪ್ರತಿಯೊಬ್ಬನ ಮೇಲೆ ನಿಂತಿದೆ ಹಗಲು ರಾತ್ರಿಯಲ್ಲಿ ದುಡಿದು ಹಣ ಹಣ ಗಳಿಸಬೇಕು ಕೋಟ್ಯಾಧಿಪತಿಯಾಗಬೇಕು ಅಶೆ ಮನದಲ್ಲಿ ಕಾಡುತ್ತದೆ ಹಣ ಇದ್ದರೆ ಇದ್ದರೆ ನೆಮ್ಮದಿ ಶಾಂತಿ ಇರುವುದಿಲ್ಲ ನಾಳೆ ಏನು? ಮಾಡಬೇಕು ಅದೇ ಗುಂಗು ಬೇರೆ ವಿಚಾರವಿಲ್ಲ ಮಾತು ಇಲ್ಲ ಕಥೆ ಇಲ್ಲ ತಮ್ಮ ದಿಮಾಕಿನಲ್ಲಿ ತಾವು ಇರುತ್ತಾರೆ ನೆಮ್ಮದಿ ಕಳೆದುಕೊಂಡು ನಿರಾಶೆಯಲ್ಲಿ ಇರುತ್ತಾರೆ ಹಣ ಬೇಕು ಆದರೆ ಹಣಕ್ಕಾಗಿ ಜೀವನ ಅಲ್ಲ,
ಕಾಲು ಎಳೆಯುವರು ಕಾಲ ಕೆಳಗೆ ಇರುವರು ದೋಸ್ತ್
ಮನದಲ್ಲಿಯೂ ಕನಸುಗಳು ಗೋಚರಿಸುತ್ತಿವೆ ಗಲೀಬ್,
ಸಾಧನೆ ಮಾಡುವ ಸಾಧಕರಿಗೆ ಪ್ರೋತ್ಸಾಹ ಬೆಂಬಲ ಸಹಕಾರ ನೀಡದೆ ಹೀಯಾಳಿಸಿ ಮಾನಸಿಕ ವೇದನೆ ನೀಡುತ್ತಾರೆ ಹಾದಿ ಬೀದಿಯಲ್ಲಿ ಚುಚ್ಚಿ ಚುಚ್ಚಿ ಮಾತನಾಡುತ್ತಾರೆ ಇಂತವರನ್ನು ಕಾಲ ಕೆಳಗೆ ಇಡಬೇಕು ಸಾಧನೆ ನಮ್ಮ ತಾಕತ್ತು ಇಡೀ ಸಮಾಜಕ್ಕೆ ತೋರಿಸಬೇಕು ಏಕೆಂದರೆ ಶರಣರು ಹೇಳಿದ್ದಾರೆ ಕಾಲು ಎಳೆಯುವರನ್ನು ಮೆಟ್ಟಲುಗಳಾಗಿ ಮಾಡಿದರೆ ನಮ್ಮ ಜೀವನ ಸಾರ್ಥಕ ಅಂದಾಗ ಮಾತ್ರ ನಮ್ಮ ವಿಚಾರದಲ್ಲಿ ಸಾಧನೆಯ ಹಾದಿ ಕಾಣುತ್ತದೆ,
ಡಾ, ಮಲ್ಲಿನಾಥ ತಳವಾರ ಯವರು ಗಜಲ್ ಉತ್ತಮ ರೀತಿಯಲ್ಲಿ ನಿರೂಪಿಸಿದ್ದಾರೆ ಪ್ರತಿಯೊಂದು ಸಾಲು ಓದುಗರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಇವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ ಸಾಹಿತ್ಯ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರಾಗಿ ಬೆಳಗಲಿ ಸುವರ್ಣ ಅಕ್ಷರದಲ್ಲಿ ಶುಭವಾಗಲಿ ಸರ್,
- ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ