ಬುಧವಾರ, ಅಕ್ಟೋಬರ್ 25, 2023

ಬಂಗಾರದ ಮನುಷ್ಯ (ಕವಿತೆ) - ಹುಂಗೇನಹಳ್ಳಿ ಶ್ರೀನಿವಾಸ್ ಎಚ್.ವಿ.

ಕರುನಾಡ ಕಂಡ ಅಪರೂಪದ ಕಣ್ಮಣಿ
ನಮ್ಮ ಅಪ್ಪು ಎಂಬ ತಾರಾಮಣಿ
ಭಾರತ ಕಂಡ ಯುವರತ್ನ
ದಾನ ಧರ್ಮದಲ್ಲಿ ರಾಜರತ್ನ

ಯುವಕರ ಪಾಲಿನ ಯುವಶಕ್ತಿ
ಅನಾಥ ವೃದ್ಧರ ನವಶಕ್ತಿ
ಅಂಧರ ಬಾಳಿಗೆ ಅಶಾಕಿರಣ
ಅಭಿಮಾನಿಗಳ ಮನಗೆದ್ದ ಜಾಣ

ನಗುಮುಖದ ನಂದ ಕಿಶೋರ
ನಟನೆಯಲ್ಲಿ ರಾಜಕುಮಾರ
ನಯವಿನಯದ ನಮ್ಮ ಪುನೀತ
ಕನ್ನಡಿಗರ ಬಾಳಿನ ನವನೀತ

ನೊಂದವರ ಬಾಳಿನ ನೇತಾರ
ಮಾಡಿದ ದಾನ ಧರ್ಮಗಳು ಅಪಾರ
ಕರ್ನಾಟಕಕ್ಕೆ ತಂದು ಕೊಟ್ಟೆ ಕೀರ್ತಿ
ಕನ್ನಡಿಗರಿಗೆಲ್ಲ ನೀನೇ ಸ್ಫೂರ್ತಿ

ಎಲ್ಲಿ ನೋಡಿದರು ನಿನ್ನದೇ ರೂಪ
ನೀನು ಆ ಪರಮಾತ್ಮನ ಸ್ವರೂಪ
ನಿನ್ನ ನೆನಪುಗಳು ಅಜರಾಮರ
ನೀನು ಕನ್ನಡ ನಾಡಿನ ಬಂಗಾರ

ಬ್ರಹ್ಮ ನೀ ಬರೆದ ವಿಧಿ ಲಿಖಿತ ತಪ್ಪು
ನಿನ್ನ ತಪ್ಪಿನಿಂದ ಬಲಿಯಾದ ಅಪ್ಪು
ಓ ಯಮ ನಿನ್ನ ಮನಸ್ಸು ಕಠೋರ
ಏನಗಿರಲ್ಲಿ ಕನ್ನಡಿಗರ ಧಿಕ್ಕಾರ 
   
                           
 - ಹುಂಗೇನಹಳ್ಳಿ ಶ್ರೀನಿವಾಸ್ ಎಚ್.ವಿ 
ಮಾಲೂರು (T),  ಕೋಲಾರ (D).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...