ಬದುಕಿದು ಬದುಕಿ ಬಿಡು ನೀ ಸುಮ್ಮನೆ,
ಯಾರ ಮನಸು ನೋಯಿಸದ ಹಾಗೇ,
ಯಾರಿಗೂ ಕೇಡು ಬಯಸದ ಹಾಗೇ.
ಬದುಕೆಂಬ ಸಾಗರದಲ್ಲಿ ನಾವಿಕ ನೀನು ,
ದಡವ ಸೇರದಿದ್ದರು ಮುನ್ನಡೆಯಬೇಕು,
ಬದುಕು ನಿಲ್ಲಿಸುವವರೆಗೂ ಚಲಿಸುತ್ತಿರಬೇಕು.
ಕಷ್ಟವಿರಲಿ ಸುಖವಿರಲಿ ನಗಬೇಕು,
ನಾವು ನಕ್ಕು ಇತರರನ್ನು ನಗಿಸಬೇಕು,
ನಗುವಿನೊಂದಿಗೆ ಜೀವನವ ಮುಗಿಸಬೇಕು.
- ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ, ಕಲಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ ಕಲಬುರ್ಗಿಯ ವಿದ್ಯಾರ್ಥಿನಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ