ಬುಧವಾರ, ಅಕ್ಟೋಬರ್ 25, 2023

ಗ್ಲೋಬಲ್ ಮಹಾ ವಿದ್ಯಾಮಂದಿರ (ಕವಿತೆ) - ಸದ್ದಾಂ ತಗ್ಗಹಳ್ಳಿ.

ವಿದ್ಯಾದೇವಿಯೊಳ್ ಜ್ಞಾನ
ಜ್ಯೋತಿ ಬೆಳಗಿಸಿದೊಡೆ

ಅಕ್ಕರವ ಬಿತ್ತಿ ಮನವ ಕೆತ್ತಿ
ಶಿಲೆಯಾಗಿ ನಿಲ್ಲಿಸಿದೊಡೆ

ವಿದ್ಯಾದಾನಂ ಸೇವಮಾರ್ಗ
ಗುರುವಿನ ಗುರಿಯೊಂದೆ

ಅಂತರಂಗ ಬಹಿರಂಗ ಶುದ್ಧಿ
ಆತ್ಮಸ್ಥೈರ್ಯ ಬೆಳೆಸಿದೊಡೆ

ನಿಷ್ಕಲ್ಮಶ ಮನದಿಂದರಸಿ
ಒಡಲುಣಿಸುವ ಮಾರ್ಗ ರೂಪಿಸಿದೊಡೆ

ಧಾರೆಯೆರೆದು ಪ್ರೀತಿ ಮಮತೆಯ
ಸಂತಸದಿ ನಡೆದು ಬದುಕಿನೊಳ್

ತನು ಮನ ಧನದಿ ಸ್ವಯಂ
ಭವಿಷ್ಯ ಬದುಕ ರೂಪಿಸಿದೊಡೆ

ದುಃಖವ ತೊರೆದು ನಿಂತು
ಸಂತಸದ ದಿನಗಳ ಛಾಯೆಯೊಳು

ವಿದ್ಯೆಯಿಂದ ವಿನಯ ಪಡೆದು
ಸರಳ ಬದುಕ ಸಾಗಿಸಿದೊಡೆ

ಗುರು ಬ್ರಹ್ಮ ಭಕ್ತಿಯೊಳ್
ಸಾಕ್ಷಾತ್ ಸ್ವರ್ಗ ನೆಲೆಸಿದೊಡೆ

- ಸದ್ದಾಂ ತಗ್ಗಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...