ಎತ್ತ ನೋಡಿದರೂ
ಹೊಗೆ, ಬೆಂಕಿ, ಗುಂಡಿನ
ಸುರಿಮಳೆ!
ಎತ್ತ ಸಾಗಿದರೂ
ಸಾವು, ನೋವು, ಯಾತನೆ!
ಅನಾಥರು, ಅಂಗಾಂಗ ಕಳಕೊಂಡವರು
ಅರೆಬೆಂದ ಶವಗಳು.
ಮೂಢರ ಅಟ್ಟಹಾಸಕೆ
ಬೆಲೆಯಿಲ್ಲದೆ ಹೋದ
ಮಾನವದೇಹ!
ಅಮಾನವೀಯತೆಯು
ಮೇರೆ ಮೀರಿದೆ
ಮನಸ್ಸು ಮನಸ್ಸುಗಳೊಳಗೆ
ಮೊಳೆತು ಬಲಿತು ಹೆಮ್ಮರವಾಗಿ.
ಬದುಕಿನ ಮರ್ಮವನರಿಯದೆ
ಅಜ್ಞಾನಿಯಂತೆ
ಹಿಂಸೆಯ ಪಥದಿ
ಮುನ್ನುಗ್ಗುವ ಮಾನವನ
ಮೂರ್ಖತನ ಕೊನೆಗಾಣದೆ
ಯುದ್ಧ ಭೀತಿ ತೊಲಗುವುದೇ?
ವಿಶ್ವಶಾಂತಿ ನೆಲೆಗೊಳ್ಳುವುದೇ ?
ಬುದ್ಧ ನಗುತ್ತಿದ್ದಾನೆ...
ನಗುತ್ತಲೇ ಇದ್ದಾನೆ.....!
- ಚಂದ್ರಕಲಾ ನೀರಾಳ, ಕಾಸರಗೋಡು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ