ಹೆಣ್ಣಾಗಿ ಹುಟ್ಟಿದ್ದೆ ತಪ್ಪೇನು? ಹೇಳಿ
ಮಾನವೇ ಪ್ರಾಣ ಹೆಣ್ಣಿಗೆ ಕೇಳಿ
ಕೈಮುಗಿದು ಬೇಡುವೆನು ಎಲ್ಲರಲಿ
ಒಮ್ಮೆ ಆಲಿಸಿರಿ ಮಾತನು ಕೇಳುತಲಿ ....
ಕ್ರೂರ ಮೃಗದ ಜನರಿರುವಾಗ ಜಗದಲಿ
ಹೆಣ್ಣು ಬಾಳುವುದು ಯಾವಾಗ ಪ್ರೀತಿಯಲಿ
ಶೋಷಣೆಯ ಮಾಡದಿರಿ ಸಹಿಸಲಾಗದು
ಎಲ್ಲದರೂ ಮಾಡಿದರೆ ಹೆಣ್ಣಿಗೆ ನೋವದು ....
ಹೆಣ್ಣು ಕುಲಕ್ಕೆ ಅದು ನೋವಿನ ಆಹ್ವಾನ
ಮಾಡದಿದ್ದರೂ ಪರವಾಗಿಲ್ಲ ಸನ್ಮಾನ
ಎಲ್ಲಿಯೂ ಮಾಡದಿರಿ ನೀವು ಅವಮಾನ
ಸಹಿಸಲಾಗದು ಹೆಣ್ಣಿನ ಜೀವನ......
ಬಡವನಾದರೇನು? ಶ್ರೀಮಂತರಾದರೇನು?
ಮಾನ ಎಂಬುದು ಎಲ್ಲರಿಗೂ ಒಂದೆ ಅಲ್ಲವೇನು?
ಸರಿಸಮಾನ ಜೀವನ ಮಾಡಬೇಕಾದರೆ
ಪ್ರೀತಿ ಪ್ರೇಮ ದಯೆ ತೋರಬೇಕಲ್ಲವೆ?.......
ಶೋಷಣೆಗೂ ಒಂದು ಇತಿಮಿತಿ ಇದೆ
ಅರಿತು ಬಾಳಿದರೆ ಅದು ಅರ್ಥವಾಗುತ್ತದೆ
ಹೇಳುತಲಿ ಮುಂದುವರೆದ ಸಮಾಜ ಎಂದು
ಮಾಡುವರು ನಾಚಿಕೆ ಪಡುವ ಕೃತ್ಯಗಳು ಇಂದು........
- ಶ್ರೀಮತಿ ಎಚ್. ಎಸ್. ಪ್ರತಿಮಾ, ಹಾಸನ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ