ಮೇಲು ಕೀಳೆಂಬ ಭೇದ-ಭಾವ ಇಲ್ಲ
ನಾನು ತಾನೆಂಬ ಅಹಂಕಾರವಿಲ್ಲ
ನಾನು ನನ್ನದೆಂದು ಆಸೆ ಇಲ್ಲ
ಹಿರಿಯ ಕಿರಿಯವೆಂಬ ತಾರತಮ್ಯ ಇಲ್ಲ.
ಹೆಣ್ಣು ಗಂಡೆಂಬ ಹೋಲಿಕೆ ಇಲ್ಲ
ನಾ ಮುಂದು ತಾ ಮುಂದೆಂಬ ಹೋರಾಟವಿಲ್ಲ
ಮಹಾದಾಸೆಗಳೆಲ್ಲಾ ಮಣ್ಣಾಗಿಹುದು
ಉಸಿರ ಪಯಣ ನಿಂತಿಹುದು
ಕಾಂಚಾಣಕ್ಕಾಗಿ ಕಾದಾಡಿದವರು
ಕಾಟವಿಲ್ಲದೆ ಮಲಗಿರುವರು
ನನ್ನವರೆಂದೂ ಮೆರೆದವರು
ಸಂಬಂಧದಿ ದೂರ ಉಳಿಯುವರು
ಕಷ್ಟದಲ್ಲಿ ಬರದವರು
ಕಟ್ಟಿಗೆಲಿಟ್ಟಾಗ ಬರುವರು
ಹೊತ್ತಿಗೆ ತುತ್ತು ನೀಡದಿದ್ದರು
ಬಂದು ಬಿಕ್ಕಿ ಬಿಕ್ಕಿ ಅಳುವರು…!
- ಸದ್ದಾಂ ತಗ್ಗಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ