ಮಂಗಳವಾರ, ಆಗಸ್ಟ್ 13, 2024

ವಂದೇ ಮಾತರಂ...

ವಂದೇ ಮಾತರಂ
( 78ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು )

ಮತ್ತೆ ಬಂದಿದೆ ಸಂಭ್ರಮದ ಸ್ವಾತಂತ್ರ್ಯ ದಿನವು 
ಹಾರಲಿ ಕೆಂಪು ಕೋಟೆಯ ಮೇಲೆ ತಿರಂಗವು 
ಅರ್ಪಿಸೋಣ ಭಾರತ ಮಾತೆಗೆ ಒಲಂಪಿಕ್ಸ್ ಪದಕವು 
ಹೇಳಲಿ ವಂದೇ ಮಾತರಂ ಪ್ರತಿ ಹೃದಯವು

ಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗಳಿಗೆ 
ಸಿಗಲಿ ಸ್ವಾತಂತ್ರ್ಯ ವರದಕ್ಷಿಣೆ ಕೊಡುವ ಹೆತ್ತವರಿಗೆ 
ಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ ಒಳಗಾಗುವ ಅಮಾಯಕರಿಗೆ 
ಸಿಗಲಿ ಸ್ವಾತಂತ್ರ್ಯ ಒಂಟಿಯಾಗಿ ತಿರುಗುವ ಹೆಣ್ಣು ಮಕ್ಕಳಿಗೆ 

ಭಾರತದ ವೈಭವ ಕೇಸರಿ ಬಿಳಿ ಹಸಿರು ತಿರಂಗದಲಿ 
ನಿತ್ಯ ವಂದೇ ಮಾತರಂ ಹೃದಯದಿಂದ ಮೊಳಗಲಿ 
ನಾನು ನನ್ನದೆನ್ನದೆ ನಾವು ನಮ್ಮವರು ಎಂಬ ಭಾವ ಮೂಡಲಿ 
ಇಡೀ ವಿಶ್ವದಲ್ಲಿಯೇ ಭಾರತ ಶ್ರೇಷ್ಠ ಗುರುವಾಗಲಿ

ಸ್ವಾತಂತ್ರ್ಯ ದಿನ ಮೀಸಲಿರದಿರಲಿ ಕೇವಲ ಒಂದು ದಿನಕ್ಕೆ 
ಸ್ಮರಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿ ಕ್ಷಣಕ್ಕೆ 
ಅವರ ನೆನಪು ಆಗದಿರಲಿ ಕೇವಲ ಗೊಳ್ಳು ಭಾಷಣಕ್ಕೆ 
ಬೆಳೆಸಿ ಉಳಿಸಿ ಸಂಸ್ಕೃತಿ ಪರಂಪರೆ ಪ್ರತಿ ಜನ್ಮಕ್ಕೆ

ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿರುವ 
ರಾಷ್ಟ್ರ ನಾಯಕರನ್ನು ನಿತ್ಯ ಸ್ಮರಿಸುವ
ಬೆಳೆಸೋಣ ಮಕ್ಕಳಲ್ಲಿ ದೇಶದ ಅಭಿಮಾನವ 
ಮುಡಿಪಾಗಿರಲಿ ದೇಶದ ಅಭಿವೃದ್ಧಿಗೆ ನಮ್ಮ ಜನ್ಮವ

ಸ್ಮರಿಸೋಣ ಮಾಡು ಇಲ್ಲವೇ ಮಡಿ ಎಂದ ಗಾಂಧೀಜಿಯನು 
ರಕ್ತವ ಕೊಡಿ ಸ್ವಾತಂತ್ರ್ಯವ ಪಡಿಯೆಂದ ತಿಲಕರನು 
ಇಂಕ್ವಿಲಾಬ್ ಜಿಂದಾಬಾದ್ ಎಂದ ಭಗತ್ ಸಿಂಗ್ ರನು 
ಜೈ ಹಿಂದ್ ಘೋಷಣೆ ಕೂಗಿದ ಸುಭಾಷ್ ಚಂದ್ರ ಬೋಸ್ ರನು...
ಶ್ರೀ ಮುತ್ತು ಯ ವಡ್ಡರ
 ಶಿಕ್ಷಕರು 
ಬಾಗಲಕೋಟ 
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...