ಓ ಕ್ರೂರ ವಿಧಿಯೇ ಏಕಿಷ್ಟು ನಿರ್ದಯಿಯಾಗುವೆ
ಅಮಾಯಕ ಜೀವಗಳ ಮೇಲಷ್ಟೇ ನಿನ್ನ ಪ್ರತಾಪವೇ
ನೆರಳು ನೀಡುವ ಕೈಗಳನ್ನೇ ನೀ ಕತ್ತರಿಸುವೆ
ಆಸರೆಯಾದ ಜೀವಿಗಳನ್ನೇಕೆ ನೀ ಕಬಳಿಸುವೆ
ಹೋರಾಟದ ಬದುಕಿನಲ್ಲಿ ಕಾಣುವ ಕನಸುಗಳೆಷ್ಟೊ
ನನಸಾಗುವ ವೇಳೆಗೆ ನಿನ್ನ ತೆಕ್ಕೆಗೆ ಬೀಳುವವರೆಷ್ಟೊ
ಜೀವನದಂತ್ಯವ ಬಯಸುವ ಜೀವಿಗಳ ನಡುವೆ
ಬದುಕಿ ಘಮಿಸಬೇಕಾದ ಸುಮಗಳನ್ನೇಕೆ ಹುಡುಕುವೆ
ತನ್ನವರಿಗಾಗಿಯೇ ಬದುಕ ಸವೆಸುವ ಹೃದಯಗಳು
ತನ್ನವರೆದುರೇ ಕೈಚೆಲ್ಲುವ ಅಸಹಾಯಕ ಕ್ಷಣಗಳು
ನಿನಗೂ ಮಿಡಿವ ಹೃದಯ ಕೊಡಬೇಕಿತ್ತು ದೇವ
ಅರ್ತನಾದ ಕೇಳುವ ಕಿವಿಗಳಿರಬೇಕಿತ್ತು ಅಲ್ಲವಾ
ಓ ವಿಧಿಯೇ ಇನ್ನಾದರೂ ಕೊಂಚ ಯೋಚಿಸು
ಅಳೆದು ತೂಗಿ ಆಯುಷ್ಯದ ತಕ್ಕಡಿಯ ತೂಗಿಸು...
ಮಧುಮಾಲತಿ ರುದ್ರೇಶ್
ಬೇಲೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ