ಗುರುವಾರ, ಅಕ್ಟೋಬರ್ 31, 2024

ಕಲ್ಪವೃಕ್ಷದ ನಾಡು ಕರುನಾಡು...

ಕಲ್ಪವೃಕ್ಷದ ನಾಡು ಕರುನಾಡು..

ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು 
ಮಲೆನಾಡ ಸೊಬಗಿನ ಶ್ರೀಗಂಧದ ಬೀಡು 
 ಹಲವು ಕವಿರತ್ನರು ಇರುವ ಗೂಡು 
 ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು 

ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು 
ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು 
ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು 
ವಿವಿಧತೆಯಲಿ ಏಕತೆಯ ಸಂಸ್ಕೃತಿಯ ಪರಂಪರೆಯು 

ಬಳಸಿದಷ್ಟು ಬೆಳೆಯುವ ಭಾಷೆ ಕನ್ನಡ 
ಮಾತನಾಡಿದಷ್ಟು ಮೆರುಗು ಬರುವ ಭಾಷೆ ಕನ್ನಡ 
ಬರೆದಷ್ಟು ಭಾವನೆ ಹೆಚ್ಚಾಗುವ ಭಾಷೆ ಕನ್ನಡ 
ಓದಲು ಬಾರದವರಿಗೂ ಅರ್ಥವಾಗುವ ಭಾಷೆ ಕನ್ನಡ 

ಕರುನಾಡಿನ ನೀರು ದೇವರ ತೀರ್ಥದಂತೆ 
ಈ ನೆಲದ ಅನ್ನ ಪವಿತ್ರ ಪ್ರಸಾದದಂತೆ 
ಕರ್ನಾಟಕದಲಿ ನಡೆದರೆ ದೇವಸ್ಥಾನದಲಿ ನಡೆದಂತೆ 
ಈ ಪುಣ್ಯ ಭೂಮಿಯಲಿ ಮಲಗಿದರೆ ಸ್ವರ್ಗದಲಿ ಮಲಗಿದಂತೆ 

ಆಗದಿರೋಣ ನವೆಂಬರ್ ಒನ್ ಕನ್ನಡಿಗರು 
ಆಗೋಣ ನಂಬರ್ ಒನ್ ಕನ್ನಡಿಗರು 
ನೀರು ಕೇಳಿದರೆ ಹಾಲು ಕೊಡುವ ಹೃದಯವಂತರು 
ತಾಯಿ ಭುವನೇಶ್ವರಿಯ ಅನುಗ್ರಹದ ಪುಣ್ಯವಂತರು 

ಕನ್ನಡವೆಂದರೆ ಬರಿ ಅಕ್ಷರವಲ್ಲ ಅಮೃತವು 
ಕನ್ನಡವೆಂದರೆ ಬರಿ ಮಾತುಗಳಲ್ಲ ಮಾಣಿಕ್ಯವು 
ಕನ್ನಡವೆಂದರೆ ಬರಿ ಬರಹವಲ್ಲ ಭಾಗ್ಯವು 
ಕನ್ನಡವೆಂದರೆ ಬರಿ ಪದವಲ್ಲ ಪಂಚಾಮೃತವು
ಶ್ರೀ ಮುತ್ತು ಯ.ವಡ್ಡರ 
 ಶಿಕ್ಷಕರು
ಬಾಗಲಕೋಟ 
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...