ಗುರುವಾರ, ಅಕ್ಟೋಬರ್ 31, 2024

ವಿಸ್ಮಯ...

ಬೆಳಕ ನಿರೀಕ್ಷೆಯಲ್ಲಿರುತ್ತೇನೆ
ಸೂರ್ಯ ಹುಟ್ಟುತ್ತಾನೆ

ಇನ್ನೇನು ಬೆಳಕು ಹರಿಯುವ ಹೊತ್ತಿಗೆ
ಹೃದಯ ಬಡಿದುಕೊಳ್ಳುತ್ತದೆ

ಹತ್ತಾರು ಗೊಂದಲ
ಮತ್ತೆಲ್ಲೊ ಕುತೂಹಲ
ಇನ್ನೆಲ್ಲೋ ಆತಂಕ

ಇಷ್ಟೆಲ್ಲಾ ಬೆಸೆದುಕೊಳ್ಳುತ್ತ
ಬಿಗಿಯಾಗುತ್ತೇನೆ

ಶಾಖಕ್ಕೆ ಮೈಯೊಡ್ಡಲೇಬೇಕಿದೆ
ಇಷ್ಟಿಷ್ಟೇ ಕಣ್ಣುಗಳ ಬಿಟ್ಟಾದರೂ
ಆಗಾಗ್ಗೆ ನೋಡಲೇಬೇಕಿದೆ

ಈ ತಟಸ್ಥ ಬದುಕು 
ಚಲಿಸುವ ಹೊತ್ತಿದು
ಒಮ್ಮೆಲೆ ಸತ್ತು ಬದುಕುವ
ಗಳಿಗೆಯದು

ಉಸಿರ ತೆಗೆದುಕೊಳ್ಳುತ್ತಾ
ಅಷ್ಟೆಲ್ಲಾ ಬೆಳಕಿಗೂ
ಹಬ್ಬಿಕೊಂಡೆ

ಜೀವರಾಶಿಗೆಲ್ಲ ಜೀವ ಬಂದಂತಾಯ್ತು
ಭೂಮಿ ಅರೆಕ್ಷಣ ನಿಂತುಹೋಗಿತ್ತು.... ಖುಶಿಗೆ!
  
ನೂರು ಪ್ರಶ್ನೆಗೆ
ಒಂದೇ ಉತ್ತರ ಸಿಗುವುದು ,ಅದೆಷ್ಟು ಅಪರೂಪ.....
ಎಂದು ಕಣ್ಣು ಮುಚ್ಚಿಕೊಂಡೆ....
ಅವನು ಬದುಕು ವಿಸ್ಮಯ ಅಂತಷ್ಟೇ ಹೇಳುತ್ತ ಮುಗುಳ್ನಕ್ಕ......
ಸಿರಿ❤️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...