ಭಾನುವಾರ, ಜನವರಿ 26, 2025

ಹೇಗಿದ್ದನೇಗಾದ ಹನುಮಂತ...

*ಹೇಗಿದ್ದನೇಗಾದ ಹನುಮಂತ *

ಹಾವೇರಿಯ ಹಳ್ಳಿ ಹೈದ 
ಅವನು ಬಲು ಸೀದಾ ಸಾದ
ಕುರಿ ಕಾಯೋದು ಅವನ ಕಾಯಕವು 
ಕಾಡು ಮೇಡು ಸುತ್ತುತ್ತಿದ್ದನವನು 
ಆಡಿನ ಹಿಂಡಲಿ ಹಾಡುತ ನಲಿಯುತ್ತಿದ್ದ 
ಜನಪ್ರಿಯತೆ ಕನಸಿರದೆ ಅವನ ಪಾಡಿಗಿದ್ದ 
ಸರಿಗಮಪ ಗಾಯಕನಾದ 
ಕನ್ನಡನಾಡಿಗೆ ಪರಿಚಯವಾದ 
ಎಲ್ಲರ ಪ್ರೀತಿಗೆ ಪಾತ್ರನಾದ 
ಈ ಕನ್ನಡದ ಮುದ್ದು ಕಂದ 
ಅಕ್ಕೋರೆ.., ಅಣ್ಣೋರೆ..., ಅನ್ನೋದು ಬಲುಚಂದ 
ಬಿಗ್ ಬಾಸ್ಗೆ ಹೋದ 
ಸಹಜತೆ ಮುಗ್ದತೆನೆ ಹಾಸುಹೊದ್ದಿದ್ದ 
ಎಲ್ಲರೊಡನೆ ಒಲುಮೆಯಲಿ ಒಡನಾಡಿದ 
ಕೋಟಿ ಕೋಟಿ ಕನ್ನಡಿಗರ ಮನಗೆದ್ದ 
ಬೀಗದೆ ಬಿಗ್ಬಾಸ್ ವಿಜಯಮಾಲೆ ಧರಿಸಿದ 
ನಿನಗೆ ವಂದನೆ ಅಭಿನಂದನೆ
ನಿನ್ನಲಿರಲಿ ಸದಾ ಮಣ್ಣಿನ ಸೊಗಡಿನ ಸ್ಪಂದನೆ 
ಸಾಮಾನ್ಯರಿಗೂ ಸಾಧನೆ ಸಾಧ್ಯವೆಂಬುದಕೆ ನೀನೆ ಸ್ಫೂರ್ತಿ 
ಬೆಳಗಲಿ ಜಗದಗಲ ನಿನ್ನಯ ಕೀರ್ತಿ ...
✍️ ಲೋಕರತ್ನ ಸುತೆ ಭವ್ಯ ಸುಧಾಕರ

ಶನಿವಾರ, ಜನವರಿ 25, 2025

ಭೂಮಿಯ ಮೇಲಿನ ಭಗವಂತರು...

ಭೂಮಿಯ ಮೇಲಿನ ಭಗವಂತರು 
( ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳು )

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ
1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿ 
ಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ

ಕಲಿಯುಗದ ನಡೆದಾಡುವ ನಿಜ ದೇವರಾಗಿ 
ಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ ಕಾಯಕಯೋಗಿ ಅನ್ನ,ಜ್ಞಾನ ಹಾಗೂ ಅಕ್ಷರದ ತ್ರಿವಿಧ ದಾಸೋಹಿಯಾಗಿ ಆಧ್ಯಾತ್ಮಿಕ ನಾಯಕ ಸಿದ್ದಗಂಗಾ ಮಠದ ಮಹಾಯೋಗಿ 

ರಾಮನಗರದ ಮಾಗಡಿಯ ವೀರಾಪುರದ ಉಸಿರು ಬೆಳಗಿಸಿದಿರಿ ನಾಡಿನೆಲ್ಲೆಡೆ ಸಿದ್ದಗಂಗೆಯ ಹೆಸರು ಪದ್ಮಭೂಷಣ ಪಡೆದ ತುಮಕೂರಿನ ಕಲ್ಪತರು 
ಜಾತಿ ಮತ ಪಂಥವ ಮೀರಿ ಬೆಳೆದ ಕರುನಾಡಿನ ರತ್ನರು 

ಲಕ್ಷಾಂತರ ಮಕ್ಕಳಿಗೆ ಅಕ್ಷರವ ಕಲಿಸಿದವರು 
ಯಾರೂ ಏರಲಾರದ ಎತ್ತರಕೆ ಏರಿದವರು 
ಅಜ್ಞಾನವ ತೊಲಗಿಸಿ ಜ್ಞಾನ ಪಸರಿಸಿದವರು 
ಮೌನ ಮಾತಿನಿಂದ ಜಗಕೆ ಜ್ಯೋತಿಯಾದವರು

ದೇವರಂತೆ ಬೆಳಕಾಗಿ ಪೂಜ್ಯರಂತೆ ನೆರಳಾಗಿ                  
ತಂದೆಯಂತೆ ಆಶ್ರಯವಾಗಿ ತಾಯಿಯಂತೆ ಕರುಣಾಮಯಿಯಾಗಿ ಬಸವಣ್ಣನಂತೆ ಆದರ್ಶವಾಗಿ ವಿವೇಕಾನಂದರಂತೆ ಮಾದರಿಯಾಗಿ 
ಸಂತನಂತೆ ಮಹಾ ಸಿದ್ದಿಗಾಗಿ ಜ್ಞಾನಿಯಂತೆ ದಾರಿದೀಪವಾಗಿ

(ಸರ್ವರಿಗೂ ದಾಸೋಹ ದಿನದ ಭಕ್ತಿಪೂರ್ವಕ ಶುಭಾಶಯಗಳು )
ಶ್ರೀ ಮುತ್ತು.ಯ.ವಡ್ಡರ
ಬಾಗಲಕೋಟ 
 ಶ್ರೀ ಮಠದ ಹಳೆಯ ವಿದ್ಯಾರ್ಥಿ 
9845568484

ಗಣರಾಜ್ಯೋತ್ಸವ...

"ಗಣರಾಜ್ಯೋತ್ಸವ''

 ಬಂದಿತಿದೋ ಗಣರಾಜ್ಯೋತ್ಸವ
 ಭಾರತಾಂಬೆ ಮಡಿಲಿನ ನಿತ್ಯೋತ್ಸವ
 ಮೊಳಗುತಿರಲಿ ದೇಶಭಕ್ತಿಯ ಘೋಷಣ
ಮುಡಿಪಿರಲಿ ತಾಯ್ನೆಲಕೆ ಪ್ರಾಣ

""ಭವ್ಯ ಭಾರತ""

ಭವ್ಯ ಪರಂಪರೆಯ ನೆಲ ಭಾರತ
ಜನ್ಮಭೂಮಿ ನಮ್ಮದೆಂದು ನಮಿಸುತ
ಗಣರಾಜ್ಯೋತ್ಸವವ ಸಂಭ್ರಮಿಸುತ
ಒಂದಾಗೋಣ ಜಾತಿ ದ್ವೇಷವ ಮರೆಯುತ


"" *ಸಮ ಸಮಾಜ""* 

ಬನ್ನಿ ಸಮ ಸಮಾಜವ ಕಟ್ಟೋಣ
ಜಾತಿ ಧರ್ಮದ ಕಳೆಯ ಕೀಳೋಣ
ಭಾರತಾಂಬೆ ಕುಡಿಗಳೆಂದು ಬೀಗೋಣ
ಭಾವೈಕ್ಯತೆಯನು ಜಗಕೆ ಸಾರೋಣ
ಪ್ರಜಾರಾಜ್ಯೋತ್ಸವವ ಆಚರಿಸೋಣ
ಸದಾ ತಾಯ್ನೆಲಕೆ ಮುಡಿಪಿರಲಿ ಪ್ರಾಣ...
 
 ಮಧುಮಾಲತಿ ರುದ್ರೇಶ್ ಬೇಲೂರು 

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...